ಗೋಕಾಕ:ಬಿಜಿಪಿ ತತ್ವ ಸಿದ್ದಾಂತ ವಿಲ್ಲದ ಪಕ್ಷ : ಸಚಿವ ರಮೇಶ ಆರೋಪ

ಬಿಜಿಪಿ ತತ್ವ ಸಿದ್ದಾಂತ ವಿಲ್ಲದ ಪಕ್ಷ : ಸಚಿವ ರಮೇಶ ಆರೋಪ
ಗೋಕಾಕ ಏ 4: ಬಿಜಿಪಿ ಪಕ್ಷ ತತ್ವ ಸಿದ್ದಾಂಗಳಲ್ಲಿದ ಪಕ್ಷ ಅದು ಮುಸ್ಲಿಂ ಸಮಾಜದ ವಿರೋಧಿ ಅಷ್ಷೇ ಅಲ್ಲಾ ಅದು ಹಿಂದೂ ಸಮಾಜದ ವಿರೋಧಿಯೂ ಸಹ ಆಗಿದೆ ಎಂದು ಸಹಕಾರ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು
ಅವರು ನಗರದ ಸಚಿವರ ಕಾರ್ಯಾಲಯದ ಎದುರು ಬುಧವಾರದಂದು ಜರುಗಿದ ಗೋಕಾಕ ತಾಲೂಕಿನ ಗೋಕಾಕ ವಿಧಾನಸಭಾ ಮತಕ್ಷೇತ್ರದ 2018ನೇ ಸಾಲಿನ ವಿಧಾನಸಭಾ ಚುನಾವಣೆಯ ಪೂರ್ವಭಾವಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ನೇತೃತ್ವ ವಹಿಸಿ ಮಾತನಾಡಿದರು .
ದೇಶದ ಭವಿಷ್ಯ ಬದಲಿಸುವುದಾಗಿ ಹೇಳಿದ ಪ್ರಧಾನಿ ಮೋದಿ ಬರೀ ಅಂಭಾನಿ ,ಅದಾನಿ, ಜೈ ಶಾ , ಬಾಬಾ ರಾಮದೇವ ಲಲಿತ ಮೋದಿ , ನಿರವ ಮೋದಿ ಸೇರಿದಂತೆ ಅನೇಕರ ಭವಿಷ್ಯ ಬದಲಿಸಿ ದೇಶಕ್ಕೆ ಮೋಸ ಮಾಡಿದ್ದಾರೆ . ಅಂತಹ ಮೋಸಗಾರರಿಗೆ ಮತ್ತೆ ಮರಳಿ ಗುಜರಾತಕ್ಕೆ ಕಳಿಸಲು ತಾವೇಲ್ಲರೂ ಸಿದ್ದವಾಗಿ ಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಬೇಕು
2014 ರ ಚುನಾವಣೆಯಲ್ಲಿ ಜನರ ತಪ್ಪು ನಿರ್ಧಾರದಿಂದ ಇಂದು ಬಿಜೆಪಿ ಅಧಿಕಾರ ನಡೆಸುತ್ತಿದೆ. ಬಿಜೆಪಿಯ ನಾಲ್ಕು ವರ್ಷಗಳ ಆಡಳಿತದಿಂದ ಜನ ಬೇಸತ್ತು ಹೋಗಿದ್ದಾರೆ . ಗುಜರಾತದಲ್ಲಿಯೇ ಏನು ಪ್ರಭಾವ ಬೀರದ ಅಮಿತ ಶಾ ರೋಡ ಶೋ ಗಳು ಕರ್ನಾಟಕದಲ್ಲಿ ಯಾವ ಪ್ರಭಾವ ಬೀರಲು ಸಾಧ್ಯವಿಲ್ಲ ಜನತೆ ಅವರ ಸುಳ್ಳು ಭರವಸೆಗಳಿಗೆ ಕಿವಿಗೋಡದೆ ಕಾಂಗ್ರೇಸ ಪಕ್ಷಕ್ಕೆ ಮತ ನೀಡಿ ಈ ಭಾರಿ ನನಗೆ ಸೂಮಾರು 55 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ ಮತ್ತೋಮ್ಮೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲು ಸಹಕರಿಸಬೇಕೆಂದು ಮನವಿ ಮಾಡಿದರು .
ಕರ್ನಾಟಕದಲ್ಲಿ ಶಾ ಮತ್ತು ಯಡಿಯೂರಪ್ಪ ನಡೆಸುತ್ತಿರುವ ರೋಡ ಶೋ ಮತ್ತು ಯಾತ್ರೆಗಳಲ್ಲಿ ಜನ ಸೇರೆದೆ ಖಾಲಿ ಕುರ್ಚಿಗಳು ಉಳಿಯುತ್ತಿವೆ ಅದರಿಂದ ಹತಾಶೆಯಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ . ಸಂವಿಧಾನ ಬದಲಾಯಿಸುತ್ತೇವೆಂದು ಹೇಳುವ ನಾಯಕರಿಂದ ಈ ದೇಶದ ಭವಿಷ್ಯ ಬದಲಿಸಲು ಸಾಧ್ಯವಿಲ್ಲ ಅಂತಹ ನಾಯಕರ ಸುಳ್ಳು ಭರವಸೆಗಳಿಗೆ ಜನ ಆರ್ಶಿವಾದ ಮಾಡದೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದರು
ಸಿದ್ದಲಿಂಗ ದಳವಾಯಿ ಸ್ವಾಗತಿಸಿದರು , ಡಾ. ರಾಜೇಂದ್ರ ಸಣ್ಣಕ್ಕಿ , ಅಶೋಕ ಪಾಟೀಲ , ಬಸಪ್ಪ ಉರಬಿನಟ್ಟಿ , ಶಂಕರಗೌಡಾ ಪಾಟೀಲ , ರಾಮಣ್ಣಾ ಹುಕ್ಕೇರಿ , ಪಿ.ಎಂ ವಣ್ಣೂರ , ಟಿ.ಆರ್.ಕಾಗಲ ಸೇರಿದಂತೆ ಅನೇಕ ನಾಯಕರು ಮಾತನಾಡಿ ಈ ಭಾರಿಯ ಚುನಾವಣೆಯಲ್ಲಿ ರಮೇಶ ಜಾರಕಿಹೊಳಿ ಅವರಿಗೆ ಮತ ನೀಡಿ ಭಾರಿ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು
ವೇದಿಕೆಯಲ್ಲಿ ಬಿ.ಆರ್.ಕೊಪ್ಪ , ಅಶೋಕ ಪಾಟೀಲ , ಎಸ್.ಎ.ಕೋತವಾಲ , ಕುಬೇಂದ್ರ ಕಲಾಲ , ಅಡಿವೆಪ್ಪಾ ನಾವಲಗಟ್ಟಿ , ನಜೀರ ಶೇಖ , ಮೋಶಿನ ಖೋಜಾ , ಶಿವಾನಂದ ಡೋಣಿ, ರಾಜು ತಳವಾರ , ಮಡೆಪ್ಪಾ ತೋಳಿನವರ , ಯಲಪ್ಪಾ ನಾಯಿಕ , ಪ್ರಕಾಶ ಕರನಿಂಗ , ಪ್ರಕಾಶ ಡಾಂಗೆ , ಅಡಿವೆಪ್ಪಾ ಕಿತ್ತೂರ , ತಳದಪ್ಪಾ ಅಮ್ಮಣಗಿ, ಭಗವಂತ ಹೂಳಿ , ಅಬ್ಬಾಸ ದೇಸಾಯಿ , ವಿವೇಕ ಜತ್ತಿ , ಭೀಮಶಿ ಭರಮಣ್ಣವರ , ಸೇರಿದಂತೆ ಜಿ.ಪಂ, ತಾ.ಪಂ, ಪ.ಪಂ ,ಗ್ರಾ.ಪಂ ಎಲ್ಲ ಸದಸ್ಯರು ಮತ್ತು ಕ್ಷೇತ್ರದ ಸಾವಿರಾರು ಕಾರ್ಯರ್ತರು ಉಪಸ್ಥಿತರಿದ್ದರು
ಕಾರ್ಯಕ್ರಮವನ್ನು ಎ.ಜಿ.ಕೋಳಿ ನಿರೂಪಿಸಿ ವಂದಿಸಿದರು