ಗೋಕಾಕ:ಕೋರ್ಟ ಆವರಣದಲ್ಲಿಯೇ ಬಿಜೆಪಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಸಮಿತಿ ಸದಸ್ಯನ ಮೇಲೆ ಹಲ್ಲೆ

ಕೋರ್ಟ ಆವರಣದಲ್ಲಿಯೇ ಬಿಜೆಪಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಸಮಿತಿ ಸದಸ್ಯನ ಮೇಲೆ ಹಲ್ಲೆ
ಗೋಕಾಕ ಏ, 2 ;- ಕೋರ್ಟ ಆವರಣದಲ್ಲಿಯೇ ಬಿಜೆಪಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಸಮಿತಿ ಸದಸ್ಯನ ಮೇಲೆ ಬಿಜೆಪಿ ಪಕ್ಷದ ವಿಸ್ತಾರಕರ ಮುಂದೆಯೇ ಓರ್ವ ಬಿಜೆಪಿ ಕಾರ್ಯಕರ್ತ ಹಲ್ಲೆ ನಡೆಸಿದ ಘಟನೆ ಸೋಮವಾರದಂದು ಸಂಜೆ ಜರುಗಿದೆ.
ಬಿಜೆಪಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಸಮಿತಿ ಸದಸ್ಯ ಶಕೀಲ ಧಾರವಾಡಕರ ಅವರ ಮೇಲೆ ಬಿಜೆಪಿ ಕಾರ್ಯಕರ್ತ ಪ್ರಕಾಶ ಭಾಗೋಜಿ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆಂದು ದೂರಲಾಗಿದೆ.
ಕೋರ್ಟ ಕ್ಯಾಂಟೀನ್ ಮುಂದೆ ಬಿಜೆಪಿ ವಿಸ್ತಾರಕರ ಜೊತೆ ಮಾತನಾಡುತ್ತ ಕುಳಿತಿದ್ದಾಗ ಅಲ್ಲಿಗೆ ಬಂದ ಪ್ರಕಾಶ ಭಾಗೋಜಿ ಬಿಜೆಪಿ ಪಕ್ಷದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದಾಗ ಹೀಗೆ ಪಕ್ಷದ ಬಗ್ಗೆ ಮಾತನಾಡುವದು ಸರಿಯಲ್ಲ ಎಂದು ಹೇಳಿದಾಗ ಒಮ್ಮೆಲೆ ಮೈಮೇಲೆ ಬಂದು ಕೇಳಕ್ಕೆ ಕೆಡವಿ ಹಲ್ಲೆ ನಡೆಸಿದನೆಂದು ಹೇಳಲಾಗಿದೆ. ಶಕೀಲ ಧಾರವಾಡಕರ ಅವರಿಗೆ ತಲೆಗೆ ಹಾಗೂ ಗಲ್ಲಕ್ಕೆ ಪೆಟ್ಟಾಗಿದ್ದು ನಗರದ ಸರಕಾರಿ ಆಸ್ಪತ್ರೆಗೆ ಹೋಗಿ ಉಪಚಾರ ಪಡೆದಿದ್ದಾರೆ.
ಈ ಬಗ್ಗೆ ಗೋಕಾಕ ನಗರ ಪೊಲೀಸ ಠಾಣೆಗೆ ದೂರು ನೀಡಲಾಗಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
