RNI NO. KARKAN/2006/27779|Sunday, July 13, 2025
You are here: Home » breaking news » ಗೋಕಾಕ:ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ-ಭೀತಿ ನಿವಾರಣೆ * ಪರೀಕ್ಷಾ ಸಿದ್ದತೆ ಹಿತದೃಷ್ಠಿಯಿಂದ ಅಣುಕು ಪರೀಕ್ಷೆ ಆಯೋಜನೆ

ಗೋಕಾಕ:ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ-ಭೀತಿ ನಿವಾರಣೆ * ಪರೀಕ್ಷಾ ಸಿದ್ದತೆ ಹಿತದೃಷ್ಠಿಯಿಂದ ಅಣುಕು ಪರೀಕ್ಷೆ ಆಯೋಜನೆ 

ಗ್ರಾಮದ ವಿ.ವಿ.ದೇಯಣ್ಣವರ ಸರಕಾರಿ ಪ್ರೌಢ ಶಾಲೆಯ ಪರೀಕ್ಷೆ ಕೇಂದ್ರದಲ್ಲಿ ವಿದ್ಯಾರ್ಥಿಗಳು ಅಣುಕು ಪರೀಕ್ಷೆ ಬರೆಯುತ್ತಿರುವದು.

ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ-ಭೀತಿ ನಿವಾರಣೆ * ಪರೀಕ್ಷಾ ಸಿದ್ದತೆ ಹಿತದೃಷ್ಠಿಯಿಂದ ಅಣುಕು ಪರೀಕ್ಷೆ ಆಯೋಜನೆ

ವಿಶೇಷ ಲೇಖನ : ಅಡಿವೇಶ ಮುಧೋಳ ಬೆಟಗೇರಿ.
ಗೋಕಾಕ :    ಬೆಟಗೇರಿ ಮಾ 22  : ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು… ಇದೇನು ಮಾ.23 ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ.? ಹೌದು.! ಇದು ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಟಗೇರಿ ಗ್ರಾಮದ ವಿ.ವಿ.ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಮಾರ್ಚ್.20 ರಂದು ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ ಅಣುಕು ಪರೀಕ್ಷೆ.!!
ಸನ್ 2018 ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಇದೇ ಮಾರ್ಚ್ 23 ರಿಂದ ಆರಂಭಗೂಳ್ಳಲಿವೆ. ಈ ವಾರ್ಷಿಕ ಪರೀಕ್ಷೆಯ ಹಿನ್ನಲೆಯಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ-ಭೀತಿ ನಿವಾರಣೆ, ಪರೀಕ್ಷಾ ಸಿದ್ದತೆ, ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳು ಕೈಗೊಳ್ಳಬೇಕಾದ ನೀತಿ ನಿಯಮಗಳ ಕುರಿತು ಪರೀಕ್ಷಾ ಪೂರ್ವಭಾವಿಯಾಗಿ ಈ ಅಣುಕು ಪರೀಕ್ಷೆ ಹಮ್ಮಿಕೊಳ್ಳಲಾಗಿತ್ತು.
ಗ್ರಾಮದ ವಿ.ವಿ.ದೇಯಣ್ಣವರ ಸರಕಾರಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಒಟ್ಟು 452 ವಿದ್ಯಾರ್ಥಿಗಳು ಹಾಜರಾಗಿ ಇಂದು ಪರೀಕ್ಷೆ ಬರೆದರೆ, ಪರೀಕ್ಷಾ ಕೇಂದ್ರದಲ್ಲಿ 19 ಪರೀಕ್ಷಾ ಕೊಠಡಿ 24 ಜನ ಪರೀಕ್ಷಾ ಕೊಠಡಿ ಮೇಲ್ವಿಚಾರಕರು, ಒಬ್ಬರು ಮುಖ್ಯ ಅಧಿಕ್ಷಕರು, ಒಬ್ಬರು ಉಪಧಿಕ್ಷಕರು, ಒಬ್ಬರು ಪ್ರಶ್ನೆ ಪತ್ರಿಕೆ ಪಾಲಕರಾಗಿ ಕಾರ್ಯನಿರ್ವಹಿಸಿದರು. 6 ವಿಷಯಗಳನ್ನೂಳಗೊಂಡ 100 ಅಂಕಗಳ ಪ್ರಶ್ನೆಗಳಿದ್ದ ಪ್ರಶ್ನೆಪತ್ರಿಕೆ ನೀಡಿ ಮೂರು ಗಂಟೆಯಲ್ಲಿ ಪರೀಕ್ಷೆ ಬರೆಯುವ ಏರ್ಪಾಡು ಮಾಡಲಾಗಿತ್ತು. ಭಯವಿಲ್ಲದೇ ಅಚ್ಚುಕಟ್ಟಾಗಿ ಶಾಂತತೆಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಈ ಪರೀಕ್ಷೆ ಬರೆದರು. ಇದು ನಿಜ ವಾರ್ಷಿಕ ಪರೀಕ್ಷೆ ನಡೆದಿದೆ ಎನ್ನುವಂತಿತ್ತು.! ಬಳಿಕ ಉತ್ತರ ಪತ್ರಿಕೆಗಳನ್ನು ಆಯಾ ಪರೀಕ್ಷಾ ಕೇಂದ್ರದ ಆಯಾ ಕೊಠಡಿಗಳಲ್ಲಿಯ ಮೌಲ್ಯಮಾಪನ ಮಾಡಿ, ಕಠಿಣ ಪ್ರಶ್ನೆಗಳಿಗೆ ಸಹ ಶಿಕ್ಷಕರಿಂದ ಉತ್ತರಿಸುವ ಪ್ರಯತ್ನ ನಡೆಯಿತು.
ವಲಯ ವ್ಯಾಪ್ತಿಯ ಪರೀಕ್ಷಾ ಕೇಂದ್ರಗಳಲ್ಲಿ : ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಎಲ್ಲ ವಿದ್ಯಾರ್ಥಿಗಳು ರಾಜ್ಯದಲ್ಲಿಯೇ ಮೇಲುಗೈ ಸಾಧಿಸುವ ನಿಟ್ಟಿನಲ್ಲಿ ಅಣುಕು ಪರೀಕ್ಷೆ ಸೇರಿದಂತೆ ಹಲವಾರು ವಿನೂತನ ಪ್ರಯೋಗಗಳನ್ನು ಕೈಗೊಳ್ಳಲಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ವಲಯ ವ್ಯಾಪ್ತಿಯ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ 17 ಪರೀಕ್ಷಾ ಕೇಂದ್ರಗಳಲ್ಲಿ 6033 ವಿದ್ಯಾರ್ಥಿಗಳು ಅಣುಕು ಪರೀಕ್ಷೆ ಬರೆದರು. ಅಣುಕು ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಆಧಾರಿಸಿ ಅತಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪರೀಕ್ಷಾ ವಿರಾಮ ದಿನಗಳಲ್ಲಿ ವಿಶೇಷ ತರಗತಿ ಆಯೋಜಿಸಿ ತರಬೇತಿ ನೀಡಿ, ಹೆಚ್ಚು ಅಂಕ ಪಡೆದು ಉತ್ತೀರ್ಣರಾಗಲು ಉತ್ತೇಜಿಸಲಾಗುವುದು ಎಂದು ಬಿ.ಇ.ಓ ಎ.ಸಿ.ಗಂಗಾಧರ ತಿಳಿಸಿದ್ದಾರೆ.

ಬಿ.ಇ.ಓ ಎ.ಸಿ.ಗಂಗಾಧರ

“ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ನಿವಾರಣೆ, ಪರೀಕ್ಷಾ ಪೂರ್ವ ಸಿದ್ದತೆಗಾಗಿ ಈ ಅಣುಕು ಪರೀಕ್ಷೆ ಆಯೋಜಿಸಲಾಗಿದೆ”
ಎ.ಸಿ.ಗಂಗಾಧರ ಕ್ಷೇತ್ರ ಶಿಕ್ಷಣಾಧಿಕಾರಿ. ಮೂಡಲಗಿ ಶೈಕ್ಷಣಿಕ ವಲಯ

“ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವಭಾವಿ ಸಿದ್ದತೆಗಾಗಿ ಅಣುಕು ಪರೀಕ್ಷೆ ಹಮ್ಮಿಕೊಳ್ಳುವುದರಿಂದ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಲು ಮಕ್ಕಳಲ್ಲಿ ಚೈತ್ಯನ್ಯ ತುಂಬಿದಂತಾಗುತ್ತದೆ”
* ರಮೇಶ ಅಳಗುಂಡಿ ಮುಖ್ಯಾಧ್ಯಾಪಕ ವಿ.ವಿ.ದೇಯಣ್ಣವರ ಸರಕಾರಿ ಪ್ರೌಢ ಶಾಲೆ ಬೆಟಗೇರಿ.

Related posts: