RNI NO. KARKAN/2006/27779|Tuesday, March 24, 2026
You are here: Home » breaking news » ಗೋಕಾಕ:ಕೌಜಲಗಿಯಲ್ಲಿ ಶಿವಾಜಿ ಜಯಂತಿ ಆಚರಣೆ

ಗೋಕಾಕ:ಕೌಜಲಗಿಯಲ್ಲಿ ಶಿವಾಜಿ ಜಯಂತಿ ಆಚರಣೆ 

ಕೌಜಲಗಿಯಲ್ಲಿ ಶಿವಾಜಿ ಜಯಂತಿ ಆಚರಣೆ

ಗೋಕಾಕ ಫೆ 22 : ಮಹಾ ಪರಾಕ್ರಮಿಯಾಗಿದ್ದ ಶಿವಾಜಿ ಮಹಾರಾಜರು ಹಿಂದೂ ಧರ್ಮದ ಮಹಾನ್ ಸಂಸ್ಥಾಪಕರು. ಚಿಕ್ಕಂದಿನಿಂದಲೆ ತಾಯಿ ಜೀಜಾಬಾಯಿ ಅವರಿಂದ ಕ್ರಾಂತಿಕಾರಿ ಕಥೆಗಳನ್ನು ಕೇಳಿ ಬೆಳೆದ ಶಿವಾಜಿ ಹಿಂದೂ ಸಾಮ್ರಾಜ್ಯದ ಹೋರಾಟಗಾರರಾಗಿದ್ದರೆಂದು ಗ್ರಾ.ಪಂ. ಅಧ್ಯಕ್ಷ ರಾಯಪ್ಪ ಬಳೋಲದಾರ ಅಭಿಪ್ರಾಯಿಸಿದರು.
ಪಟ್ಟಣದಲ್ಲಿ ಇಂದು ಗ್ರಾಮ ಪಂಚಾಯತ ಆವರಣದಲ್ಲಿ ಜರುಗಿದ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಶಿವಾಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಕಾರ್ಯಕ್ರಮದ ನಿಮಿತ್ತ ಯುವಕರು ಬೈಕ್ ರ್ಯಾಲಿ ಮಾಡಿದರು. ಸಾಯಂಕಾಲ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಿವಾಜಿ ಮಹಾರಾಜರ ಬ್ರಹತ್ ಪೋಟೊ ಮೆರವಣಿಗೆ ಜರುಗಿತು. ಕಾರ್ಯಕ್ರಮದಲ್ಲಿ ಶಿವಾನಂದ ಲೋಕನ್ನವರ, ರವಿ ಪರುಶೆಟ್ಟಿ, ತಾ.ಪಂ.ಸದಸ್ಯ ಶಾಂತಪ್ಪ ಹಿರೇಮೇತ್ರಿ, ಬಸವರಾಜ ಲೋಕನ್ನವರ, ಭೀಮಶಿ ಉದ್ದಪ್ಪನವರ, ರಮೇಶ ದಳವಾಯಿ, ಮಹಾಂತಪ್ಪ ಶಿವನಮಾರಿ, ಶಂಕರ ಚಚಡಿ, ಮಹಾದೇವ ಸಿಂಧೆ, ನೀಲಪ್ಪ ಕೇವಟಿ, ಅಶೋಕ ಶಿವಾಪೂರ, ರಾಮಣ್ಣ ಈಟಿ ಹಾಗೂ ಮರಾಠಾ ಸಮುದಾಯದ ಯುವಕರು, ಹಿರಿಯರು ಉಪಸ್ಥಿತರಿದ್ದರು.

Related posts: