ಗೋಕಾಕ:ಅಪ್ಪಣ್ಣನವರ ಸಮಾಜವು ಚಿಕ್ಕದಾಗಿದ್ದರೂ ದೈವ ಸ್ವರೂಪಿಯಾಗಿದೆ : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ
ಅಪ್ಪಣ್ಣನವರ ಸಮಾಜವು ಚಿಕ್ಕದಾಗಿದ್ದರೂ ದೈವ ಸ್ವರೂಪಿಯಾಗಿದೆ : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 1 :
ನಿಜಶರಣ ಹಡಪದ ಅಪ್ಪಣ್ಣನವರು ಬಸವಣ್ಣನವರ ಆಪ್ತಕಾರ್ಯದರ್ಶಿಯಾಗಿ ಸಮಾಜದ ಒಳಗಣ್ಣಿಗೆ ಅಂತಃಕರಣ ಸಾಕ್ಷಿಯಾದವರು, ಅವರ ಧರ್ಮ ಪತ್ನಿ ಲಿಂಗಮ್ಮ ನಿಜ ಭಕ್ತಿ ಬೆಳಗಿದ ಮಹಾತಾಯಿ ಎಂದು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ಹೇಳಿದರು.
ಅವರು, ನಗರದ ಸಮುದಾಯ ಭವನದಲ್ಲಿ ಜರುಗಿದ ಗೋಕಾಕ ತಾಲೂಕಾ ಶಿವಶರಣ ಹಡಪದ ಅಪ್ಪಣ್ಣ ಹಾಗೂ ಲಿಂಗಮ್ಮ ತಾಯಿ ಮಹಿಳಾ ಸೇವಾ ಸಂಘದ ಉದ್ಘಾಟನಾ ಹಾಗೂ ವಧುವರರ ಸಮಾವೇಶ ಸಮಾರಂಭದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
ಅಪ್ಪಣ್ಣನವರ ಸಮಾಜವು ಚಿಕ್ಕದಾಗಿದ್ದರೂ ದೈವ ಸ್ವರೂಪಿಯಾಗಿ ಪ್ರತಿಯೊಬ್ಬರ ಅಂತರಂಗವನ್ನು ಬೆಳಗುವ ಕನ್ನಡಿಯಾಗಿದೆ ಎಂದು ಬಣ್ಣಿಸಿದ ಶ್ರೀಗಳು, ದೈವ ಸ್ವರೂಪಿ ಹಡಪದ ಅಪ್ಪಣ್ಣ ಸಮಾಜದ ಕಾರ್ಯ ಸ್ತುತ್ಯಾರ್ಹವಾಗಿದೆ. ಲಿಂಗಾಯತ ಧರ್ಮದ ಉಪಪಂಗಡಗಳಲ್ಲಿ ಒಂದಾದ ಹಡಪದ ಸಮಾಜ ಒಗ್ಗಟ್ಟಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವಂತೆ ಕರೆ ನೀಡಿದರು.
ಕಾರ್ಯಕ್ರಮವನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ನಿಜಶರಣ ಹಡಪದ ಅಪ್ಪಣ್ಣ ಹಾಗೂ ತಾಯಿ ಲಿಂಗಮ್ಮನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖನಗಾಂವದ ಸಿದ್ದಪ್ಪ ನಾವಲಗಿ ವಹಿಸಿದ್ದರು.
ವೇದಿಕೆಯ ಮೇಲೆ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಉಪಾಧ್ಯಕ್ಷ ಬಸವರಾಜ ಆರೇನ್ನವರ, ನಗರಸಭೆ ಸದಸ್ಯ ಪ್ರಕಾಶ ಮುರಾರಿ, ವಿಜಯ ಜತ್ತಿ, ಜ್ಯೋತಿಭಾ ಸುಭಂಜಿ, ಪರಶುರಾಮ ಭಗತ, ಬಾಬುರಾವ ಮುಳಗುಂದ ಉಪಸ್ಥರಿದ್ದರು.
ಈ ಸಂದರ್ಭದಲ್ಲಿ ಜಾನಪದ ಕಲಾವಿದ ಈಶ್ವರಚಂದ್ರ ಬೆಟಗೇರಿ, ಶ್ರೀಪಾದ ನಾವಿ, ಶಂಕರ ಕಟ್ಟಿಮನಿ, ಸದಾನಂದ ಹಡಪದ, ಮಹಾಂತೇಶ ಬೆಟಗೇರಿ, ಅರುಣ ಬೆಟಗೇರಿ, ಗುರು ಬಿಜಾಪೂರ, ಶಿವಲಿಂಗ ನಾವಿ, ಅಣ್ಣಪ್ಪ ನಾವಿ, ಮಂಜುನಾಥ ನಾವಿ ಸೇರಿದಂತೆ ನಿಜಶರಣ ಹಡಪದ ಅಪ್ಪಣ್ಣ ಸಮಾಜದ ಭಾಂದವರು ಉಪಸ್ಥಿತರಿದ್ದರು.