RNI NO. KARKAN/2006/27779|Saturday, August 2, 2025
You are here: Home » breaking news » ಬೆಳಗಾವಿ:ಕೇಂದ್ರ ಸಚಿವ ಅನಂತಕುಮಾರ ಅವರಿಗೆ ಕಪ್ಪು ಬಾವುಟ ಪ್ರರ್ದಶನ : ಬೆಳಗಾವಿಯಲ್ಲಿ ಡಿಎಸ್ಎಸ್ ಕಾರ್ಯರ್ತರ ಬಂಧನ

ಬೆಳಗಾವಿ:ಕೇಂದ್ರ ಸಚಿವ ಅನಂತಕುಮಾರ ಅವರಿಗೆ ಕಪ್ಪು ಬಾವುಟ ಪ್ರರ್ದಶನ : ಬೆಳಗಾವಿಯಲ್ಲಿ ಡಿಎಸ್ಎಸ್ ಕಾರ್ಯರ್ತರ ಬಂಧನ 

ಕೇಂದ್ರ ಸಚಿವ ಅನಂತಕುಮಾರ ಅವರಿಗೆ ಕಪ್ಪು ಬಾವುಟ ಪ್ರರ್ದಶನ : ಬೆಳಗಾವಿಯಲ್ಲಿ ಡಿಎಸ್ಎಸ್ ಕಾರ್ಯರ್ತರ ಬಂಧನ
ಬೆಳಗಾವಿ ಜ 8 : ಸಂವಿಧಾನ ತಿದ್ದುಪಡಿ ಮಾಡಲೆಂದು ನಾವು ಬಂದಿದ್ದೆವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿ ದಲಿತರ ಕೆಂಗಣ್ಣಿಗೆ ಗುರಿಯಾಗಿರುವ ಕೇಂದ್ರ ಕೌಶಲೋಭಿವೃದಿ ಸಚಿವ ಅನಂತಕುಮಾರ್ ಸಂಸತ್ತಿನಲ್ಲಿ ಕ್ಷೇಮೆ ಕೇಳಿದರು ಸಹ ಅವರ ವಿರುದ್ಧ ಆಕ್ರೋಶ ಇನ್ನೂ ಕಡಿಮೆಯಾಗಿಲ್ಲ

ಇಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಸಚಿವರ ಕಾರಿಗೆ ಅಡ್ಡಬಿದ್ದು ಅವರಿಗೆ ಕಪ್ಪು ಬಾವುಟ ಪ್ರರ್ದಶಿಸಲು ಮುಂದಾದ ಡಿಎಸ್ಎಸ್ ಕಾರ್ಯಕರ್ತರು ಎಸಿಪಿ ಶಂಕರ ಮಾರಿಹಾಳ ನೇತೃತ್ವದಲ್ಲಿ ಬಂಧಿಸಿ ಅಜ್ಞಾತ ಸ್ಥಳಕ್ಕೆ ಓದ್ದು ಬಿಡುಗಡೆ ಗೊಳಿಸಿದ್ದಾರೆಂದು ತಿಳಿದು ಬಂದಿದೆ

ಈ ಸಂದರ್ಭದಲ್ಲಿ ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯ ಮಾತಿನ ಚಕಮಕಿ ಉಂಟಾಗಿ ತಳ್ಳಾಟ , ನುಗ್ಗಾಟ ನಡೆದಿದೆ . ಸಚಿವರ ಕಾರ್ಯಕ್ರಮ ಸ್ದಳವಾದ ಕನ್ನಡ ಸಾಹಿತ್ಯ ಭವನದ ಸುತ್ತಮುತ್ತ ಡಿಸಿಪಿ ಸೀಮಾ ಲಾಟಕ್ಕರ ನೇತೃತ್ವದಲ್ಲಿ ಭದ್ರತೆಯನ್ನು ಕೈಗೋಳಲಾಗಿದೆ

Related posts: