RNI NO. KARKAN/2006/27779|Sunday, August 3, 2025
You are here: Home » breaking news » ಬೆಳಗಾವಿ:ಬೆಳಗಾವಿ ಜಿಲ್ಲೆಯನ್ನು ವಿಭಜಿಸಲು ಮುಂದಾಗದಿರಿ : ಸರಕಾರಕ್ಕೆ ಪಾಟೀಲ ಪುಟ್ಟಪ್ಪ ಎಚ್ಚರಿಕೆ

ಬೆಳಗಾವಿ:ಬೆಳಗಾವಿ ಜಿಲ್ಲೆಯನ್ನು ವಿಭಜಿಸಲು ಮುಂದಾಗದಿರಿ : ಸರಕಾರಕ್ಕೆ ಪಾಟೀಲ ಪುಟ್ಟಪ್ಪ ಎಚ್ಚರಿಕೆ 

ಬೆಳಗಾವಿ ಜಿಲ್ಲೆಯನ್ನು ವಿಭಜಿಸಲು ಮುಂದಾಗದಿರಿ : ಸರಕಾರಕ್ಕೆ ಪಾಟೀಲ ಪುಟ್ಟಪ್ಪ ಎಚ್ಚರಿಕೆ

ಬೆಳಗಾವಿ ಡಿ 19 : ಬೆಳಗಾವಿ ಜಿಲ್ಲೆಯನ್ನು ಅಖಂಡವಾಗಿ ಉಳಿಸಿಕೊಳ್ಳಬೇಕೆ ಹೊರತು ಒಡೆಯಕೂಡದು ಎಂದು ಹಿರಿಯ ಪತ್ರಕರ್ತ ನಾಡೋಜ ಪಾಟೀಲ ಪುಟ್ಟಪ್ಪ ಗುಡುಗಿದ್ದಾರೆ. ಇಂದು ಸಂಜೆ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಡಾ. ಸಿದ್ದರಾಮ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಕನ್ನಡಪರ ಹೋರಾಟಗಾರರ ಹಾಗೂ ನಗರ ವರಿಷ್ಠರ ಚರ್ಚೆಯ ಸಭೆಯಲ್ಲಿ ಪಾಟೀಲ ಪುಟ್ಟಪ್ಪ ಜಿಲ್ಲೆ ವಿಭಜನೆ ವಿರೋಧಿಸಿ ಸರಕಾರಕ್ಕೆ ಎಚ್ಚರಿಕೆ ರವಾಣಿಸಿದ್ದಾರೆ . ಬೆಳಗಾವಿ ಜಿಲ್ಲೆಯನ್ನು ಒಂದು ಮಾದರಿ, ಸಶಕ್ತ ಜಿಲ್ಲೆಯನ್ನಾಗಿ ಪರಿವರ್ತಿಸಲು ಸರಕಾರ ಬೇಕಾದರೆ ಗಮನ ಕೊಡಲಿ ಎಂದು ಡಾ. ಪುಟ್ಟಪ್ಪ ಸಲಹೆ ನೀಡಿದ್ದಾರೆ.

ಗಡಿಯಲ್ಲಿ ಕನ್ನಡಿಗರನ್ನು ಮತ್ತು ಕನ್ನಡಿಗರ ಗರ್ವದ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಪೋಷಿಸಿ ಉತ್ತೇಜಿಸಬೇಕು ಎಂದ ಅವರು ಜಿಲ್ಲೆ ಒಡೆದು ದುರ್ಬಲಗೊಳಿಸುವ ಯಾವದೇ ಪ್ರಯತ್ನಕ್ಕರ ಸರಕಾರ ಕೈ ಹಾಕಬಾರದು. ಗಡಿ ವಿವಾದ ತಾರ್ಕಿಕ ಅಂತ್ಯವಾಗುವವರೆಗೂ ಜಿಲ್ಲೆಯನ್ನು ವಿಭಜಿಸಬಾರದೆಂದು ಸಭೆಯಲ್ಲಿ ಸೇರಿದ್ದ ವರಿಷ್ಠರು ಒಕ್ಕೊರಲಿನ ಆಗ್ರಹ ಮಾಡಿದರು.

ಮಾಜಿ ಮಹಾಪೌರ ಸಿದ್ದನಗೌಡ ಪಾಟೀಲ, ಅಶೋಕ ಚಂದರಗಿ, ರಾಘವೇಂದ್ರ ಜೋಶಿ, ಮಹಾದೇವ ತಳವಾರ, ದೀಪಕ ಗುಡಗನಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Related posts: