ಗೋಕಾಕ:ನಿರ್ಗತಿಕರಿಗೆ ದಿನಸಿ ಕಿಟ್ ವಿತರಿಸಿ ಮಾನವೀಯತೆ ಮೆರೆದ ನಗರಸಭೆ ಸದಸ್ಸೆ ಭಾರತಿ ಹತ್ತಿ
ನಿರ್ಗತಿಕರಿಗೆ ದಿನಸಿ ಕಿಟ್ ವಿತರಿಸಿ ಮಾನವೀಯತೆ ಮೆರೆದ ನಗರಸಭೆ ಸದಸ್ಸೆ ಭಾರತಿ ಹತ್ತಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 9 :
ಹಿಂದುಳಿದ ಹಾಗೂ ಅಲೇಮಾರಿ ಜನಾಂಗ ಕುಟುಂಬಕ್ಕೆ ಇಲ್ಲಿಯ ನಗರಸಭೆ ವಾರ್ಡ ನಂ 12ರ ಸದಸ್ಸೆ ಶ್ರೀಮತಿ ಭಾರತಿ ಶಿವಾನಂದ ಹತ್ತಿ ಅವರು ದಿನಸಿ ಕಿಟಗಳನ್ನು ವಿತರಿಸಿದರು.
ಬುದವಾರದಂದು ತಮ್ಮ ಬೆಂಬಲಿಗರೊಂದಿಗೆ ನಗರದ ಹೋರವಲಯದಲ್ಲಿ ವಾಸವಾಗಿರುವ ಅಲೇಮಾರಿ ಜನಾಂಗ ಹಾಗೂ ನಿರ್ಗತಿಕ ಕುಟುಂಬಗಳಿಗೆ ಭೇಟಿಯಾದ ಅವರು ಸುಮಾರು 60 ಕುಟುಂಬಗಳಿಗೆ ಆಹಾರ ದಿನಸಿ ಕಿಟ್ಟ ವಿತರಿಸಿ ಮಾನವಿಯತೆ ಮೇರದಿದ್ದಾರೆ.
ಕೊರೋನಾ 2ನೇ ಅಲೆಯ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ನಗರದಲ್ಲಿ ವಾಸವಾಗಿರುವ ಅಲೆಮಾರಿ ಕುಟುಂಬದವರಿಗೆ ಮಾಜಿ ಸಚಿವರ ಹಾಗೂ ಶಾಸಕ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಆಹಾರ ಧಾನ್ಯಗಳ ಕೀಟ್ ವಿತರಣೆ ಮಾಡಿರುವದಾಗಿ ಸಮಾಜ ಸೇವಕ ಶಿವಾನಂದ ಹತ್ತಿ ಪತ್ರಕರ್ತರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ರವಿ ಹನಿಮನಾಳ, ಮುತ್ತುರಾಜ ಜಮಖಂಡಿ, ನಿತ್ಯಾನಂದ ಅಮ್ಮಿನಭಾಂವಿ, ಸುಧೀರ ಜೋಗೊಜಿ, ಕಾಶಿನಾಥ, ಜಾಫರ್ ಶಭಾಶಖಾನ ಸೇರಿದಂತೆ ಅನೇಕರು ಇದ್ದರು.