ಗೋಕಾಕ:ಭಾಗ್ಯನಗರ ಉದ್ಯಾನವನದ ದುರಸ್ಥಿಗೆ ಆಗ್ರಹಿಸಿ ಪೌರಾಯುಕ್ತರಿಗೆ ಮನವಿ

ಭಾಗ್ಯನಗರ ಉದ್ಯಾನವನದ ದುರಸ್ಥಿಗೆ ಆಗ್ರಹಿಸಿ ಪೌರಾಯುಕ್ತರಿಗೆ ಮನವಿ
ಗೋಕಾಕ ಅ 29 : ಇಲ್ಲಿನ ಭಾಗ್ಯಾನಗರದ ತಹಶೀಲ್ದಾರ ಲೇಔಟನಲ್ಲಿರುವ ಸಾರ್ವಜನಿಕ ಉದ್ಯಾನವನದ ದುರಸ್ತಿಗೆ ಆಗ್ರಹಿಸಿ ಗುರುವಾರದಂದು ಭಾಗ್ಯನಗರದ ರಹವಾಸಿಗಳು ಪೌರಾಯುಕ್ತರಿಗೆ ಮನವಿ ಅರ್ಪಿಸಿದರು.
ಭಾಗ್ಯನಗರದ ತಹಶೀಲ್ದಾರ ಲೇಔಟನ ಸರ್ವೇನಂ 157/2ಬ ಉದ್ಯಾನವನವು ಹದಗೆಟ್ಟಿರುವ ಕಾರಣ ಇಲ್ಲಿ ವಾಸಿಸುತ್ತಿರುವ ನೂರಾರು ಜನರಿಗೆ ಮುಂಜಾನೆ ಮತ್ತು ಸಾಯಂಕಾಲ ವಾಯು ವಿಹಾರ ಮಾಡಲು ಆಗುತ್ತಿಲ್ಲ ಹಾಗೂ ಮಕ್ಕಳಿಗೆ ಆಟವಾಡಲು ಸಾಕಷ್ಟು ತೊಂದರೆಯಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಇಲ್ಲಿ ಯಾವುದೇ ಮೂಲಭೂತ ಸೌಕರ್ಯಗಳನ್ನು ಸರಿಯಾಗಿ ಇಲ್ಲದ ಕಾರಣ ಉದ್ಯಾನವನವು ಸಂಪೂರ್ಣ ಹಾಳಾಗಿದೆ. ಉದ್ಯಾನವನದಲ್ಲಿ ಮುಳ್ಳಿನ ಗಿಡಗಳು ಬೆಳೆದು ನಿಂತಿವೆ, ಉದ್ಯಾನವನದಲ್ಲಿ ಬೀದಿ ದೀಪಗಳು ಇಲ್ಲದೆ ಸುತ್ತಲೂ ಕತ್ತಲು ಆವರಿಸಿದೆ. ಕಸ ವಿಲೇವಾರಿ ಮಾಡಲು ಸರಿಯಾಗಿ ವ್ಯವಸ್ಥೆ ಇಲ್ಲದ ಕಾರಣ ಕಸ ಎಲ್ಲೆಂದರಲ್ಲಿ ಬಿದ್ದು ಉದ್ಯಾನವನದ ಸಂಪೂರ್ಣ ವಾತಾವರಣ ಹದಗೆಟ್ಟಿರುತ್ತದೆ. ಇದಲ್ಲದೆ ಹತ್ತು, ಹಲವಾರು ಸಮಸ್ಯೆಗಳನ್ನು ಈ ಉದ್ಯಾನವನದಲ್ಲಿ ತಾಂಡವಾಡುತ್ತಿವೆ ಹಾಗಾಗಿ ಈ ಉದ್ಯಾನವನವನ್ನು ಆದಷ್ಟು ಬೇಗ ದುರಸ್ಥಿಗೋಳಿಸಿ ಈ ಪ್ರದೇಶದಲ್ಲಿ ವಾಸಿಸುವ ಸಾರ್ವಜನಿಕರು ಪಡುತ್ತಿರುವ ಗೋಳಿನಿಂದ ಪಾರುಮಾಡಬೇಕು ಎಂದು ಭಾಗ್ಯನಗರದ ಸಾರ್ವಜನಿಕರು ಮನವಿಯ ಮೂಲಕ ಪೌರಾಯುಕ್ತರಿಗೆ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರುಗಳಾದ ಮಾಯಪ್ಪ ತಹಶೀಲ್ದಾರ, ಡಾ.ವಿಲಾಸ ಕಲ್ಲೋಳಿ, ನಿಂಗಪ್ಪ ನೇಸರಗಿ, ಬಾಳೇಶ ಹಣಜಿ, ಬಾಗಪ್ಪ ಉಳ್ಳಾಗಡ್ಡಿ, ಬಸವರಾಜ ಕಿಚಡಿ, ರವಿಶಂಕರ ಬಡಿಗೇರ, ವಿರುಪಾಕ್ಷಿ ಮೇಟಿ, ರಾಜು ದೇಸಿಂಗೆ, ಬಸವರಾಜ ಕರೆಪ್ಪನವರ, ಶ್ರೀಮತಿ ರೇಖಾ ನೇಸರಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
