RNI NO. KARKAN/2006/27779|Saturday, August 15, 2026
You are here: Home » breaking news » ಗೋಕಾಕ:ನಮ್ಮ ಹಕ್ಕಗಳನ್ನು ನಾವು ಪಾಲನೆ ಮಾಡುವುದೆ ನಿಜವಾದ ಸ್ವಾತಂತ್ರ್ಯ : ಡಾ.ಮೋಹನ ಭಸ್ಮೆ

ಗೋಕಾಕ:ನಮ್ಮ ಹಕ್ಕಗಳನ್ನು ನಾವು ಪಾಲನೆ ಮಾಡುವುದೆ ನಿಜವಾದ ಸ್ವಾತಂತ್ರ್ಯ : ಡಾ.ಮೋಹನ ಭಸ್ಮೆ 

ನಮ್ಮ ಹಕ್ಕಗಳನ್ನು ನಾವು ಪಾಲನೆ ಮಾಡುವುದೆ ನಿಜವಾದ ಸ್ವಾತಂತ್ರ್ಯ : ಡಾ.ಮೋಹನ ಭಸ್ಮೆ
ಗೋಕಾಕ ಆ 15 : ನಮ್ಮ ಹಕ್ಕಗಳನ್ನು ನಾವು ಪಾಲನೆ ಮಾಡುವುದರ ಜೊತೆಗೆ ಬೇರೆ ಅವರ ಹಕ್ಕುಗಳಿಗೆ ದಕ್ಕೆಯಾಗದಂತೆ ನಡೆದುಕೊಳ್ಳುವುದೆ ನಿಜವಾದ ಸ್ವಾತಂತ್ರ್ಯ ಎಂದು ತಹಶೀಲ್ದಾರ ಡಾ.ಮೋಹನ ಭಸ್ಮೆ ಹೇಳಿದರು .

ಶನಿವಾರದಂದು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ನಗರಸಭೆ, ಶಿಕ್ಷಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ 80ನೇ ಸ್ವಾತಂತ್ರೋತ್ಸವದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೇರವೇರಿಸಿ ಅವರು ಮಾತನಾಡಿದರು.

ಹಲವಾರು ಮಹಿನೀಯರ ತ್ಯಾಗ ಬಲಿದಾನದ ದಿಂದ ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರೆತಿದ್ದು, ಸ್ವಾತಂತ್ರ್ಯವನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸ್ವಾತಂತ್ರ್ಯವನ್ನು ಹೇಗೆ ಉಪಯೋಗಿಸಕೊಳ್ಳಬೇಕು ಎಂದು ಡಾ.ಬಾಬಾಸಾಬೇಬ ಅಂಬೇಡ್ಕರ್. ಸಂವಿಧಾನದ ಮೂಲಕ ಹೇಳಿಕೊಟ್ಟಿದ್ದಾರೆ.

ನಮಗೆ ಸಿಕ್ಕ ಸ್ವಾತಂತ್ರ್ಯವನ್ನು ಸಮಾಜಕ್ಕೆ ಧಾರೆಯರೆದು ಬೇರೆಯವರ ಮೂಲಭೂತ ಹಕ್ಕುಗಳಿಗೆ ಚುತ್ತಿ ಬರದಂತೆ ನಾವು ಅವುಗಳನ್ನು ನಿಭಾಯಿಸಬೇಕು. ಇದು ಪ್ರತಿಯೊಬ್ಬ
ಪ್ರಜೆಯ ಆದ್ಯ ಕರ್ತವ್ಯವಾಗಬೇಕು ಎಂದು ತಹಶೀಲ್ದಾರ ಡಾ.ಮೋಹನ ಭಸ್ಮೆ ಹೇಳಿದರು.

ಇದೇ ಸಂದರ್ಭದಲ್ಲಿ ವಿವಿಧ ಸ್ವರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಈ ಸಂದರ್ಭದಲ್ಲಿ ಡಿ.ವಾಯ.ಎಸ್.ಪಿ. ರವಿ ನಾಯಿಕ, ಅಶೋಕ್ ಪೂಜಾರಿ, ಬಿ‌.ಇ.ಓ ಜಿ.ಬಿ.ಬಳಗಾರ, ಪೌರಾಯುಕ್ತ ರವಿ ರಂಗಸಭೆ ,ಹಿರಿಯ ನ್ಯಾಯವಾದಿ ಬಿ.ಆರ.ಕೊಪ್ಪ, ಎಂ.ಎಲ್.ಜನ್ಮಟ್ಟಿ, ಸಿಡಿಪಿಓ ಡಿ.ಎಸ್.ಕೂಡವಕ್ಕಲಿಗ, ಎಸ್.ಪಿ.ವರಾಳೆ, ಪಿಎಸ್ಐಗಳಾದ ಕೆ.ವಾಲಿಕರ, ಕಿರಣ ಮೋಹಿತೆ, ಎಂ.ಎಂ.ನದಾಫ, ಕರ್ನಾಟಕ ರಕ್ಷಣಾ ವೇದಿಕೆಯ ಬಸವರಾಜ ಖಾನಪ್ಪನವರ, ಕಿರಣ ಢಮಾಮಗರ, ಸೋಮಶೇಖರ್ ಮಗದುಮ್ಮ ,ನಗರಸಭೆಯ ಮಾಜಿ ಸದಸ್ಯರುಗಳು ಉಪಸ್ಥಿತರಿದ್ದರು.

Related posts: