ಗೋಕಾಕ:ಗ್ರಂಥಾಲಯವು ಜ್ಞಾನಾರ್ಜನೆಯ ಮಹತ್ವದ ಹೆಜ್ಜೆಯಾಗಿದೆ : ನ್ಯಾಯಾಧೀಶ ಸಂಪತಕುಮಾರ ಬಳ್ಳೋಲಗಿಡದ ಅಭಿಮತ

ಗ್ರಂಥಾಲಯವು ಜ್ಞಾನಾರ್ಜನೆಯ ಮಹತ್ವದ ಹೆಜ್ಜೆಯಾಗಿದೆ : ನ್ಯಾಯಾಧೀಶ ಸಂಪತಕುಮಾರ ಬಳ್ಳೋಲಗಿಡದ ಅಭಿಮತ
ಗೋಕಾಕ ಜೂ 12 : ಗ್ರಂಥಾಲಯವು ಜ್ಞಾನಾರ್ಜನೆಯ ಮಹತ್ವದ ಹೆಜ್ಜೆಯಾಗಿದ್ದು,ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಇಲ್ಲಿನ
ಪ್ರಧಾನ ಕಿರಿಯ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಸಂಪತಕುಮಾರ ಬಳ್ಳೋಲಗಿಡದ ಹೇಳಿದರು.
ಶುಕ್ರವಾರದಂದು ನಗರದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠದಲ್ಲಿ ನೂತನವಾಗಿ ನಿರ್ಮಿಸಿದ ಗ್ರಂಥಾಲಯ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಗಿದು ಹೋಗದ ಸಂಪತ್ತು ಎಂದರೆ ಅದು ಜ್ಞಾನ ಸಂಪತ್ತು. ಆ ಸಂಪತ್ತಿನ ಬೆಳವಣಿಗೆಗೆ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು, ಅದಕ್ಕಾಗಿ ಈ ಗ್ರಂಥಾಲಯದ ಸದುಪಯೋಗವನ್ನು ಪಡೆದುಕೊಂಡು ಜ್ಞಾನ ಸಂಪಾದನೆಯನ್ನು ಮಾಡಿ ಅರ್ಥಪೂರ್ಣ ಬದುಕನ್ನು ನಿರ್ಮಿಸಿಕೊಳ್ಳಿ” ಎಂದು ಹೇಳಿದರು.
ಕಾರ್ಯಕ್ರಮ ಸಾನಿಧ್ಯವನ್ನು ಸಂಸ್ಥೆಯ ಅಧ್ಯಕ್ಷ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ಶೂನ್ಯ ಸಂಪಾದನ ಮಠದ ಕಿರಿಯ ಶ್ರೀ ಬಸವಪ್ರಭು ಸ್ವಾಮಿಗಳು, ನ್ಯಾಯವಾದಿ ಸಂಘದ ಅಧ್ಯಕ್ಷ ಸುಭಾಷ ಬಿರಾದಾರ ಪಾಟೀಲ, ನ್ಯಾಯವಾದಿಗಳಾದ ಶಂಕರ ಗೋರೋಶಿ, ಎ.ಸಿ.ಕಂಡರಟ್ಟಿ, ನಿರ್ದೇಶಕರುಗಳಾದ ಮಲ್ಲಿಕಾರ್ಜುನ ಈಟಿ, ವಿವೇಕ ಜತ್ತಿ, ಮುರಗೇಶ ಹುಕ್ಕೇರಿ, ವೀಣಾ ಹಿರೇಮಠ, ಸುಷ್ಮಾ ಪಾಟೀಲ, ರಾಜೇಶ್ವರಿ ಬೆಟ್ಟದಗೌಡರ, ಮಲ್ಲಿಕಾರ್ಜುನ ರೋಟ್ಟಿ, ಭೀಮಶಿ ಹಡಗಿನಾಳ, ಆಡಳಿತಾಧಿಕಾರಿ ಅಡಿವೇಶ ಗವಿಮಠ, ಪ್ರಾಚಾರ್ಯ ಎಸ್.ಕೆ.ಮಠದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
