ಗೋಕಾಕ:ಪ್ರತಿಭೆಗಳನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸುವ ಕಾರ್ಯ ಎಸ್.ಎಸ್.ಅವಾರ್ಡ್ಸ ಮಾಡುತ್ತಿದೆ : ರಾಹುಲ್

ಪ್ರತಿಭೆಗಳನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸುವ ಕಾರ್ಯ ಎಸ್.ಎಸ್.ಅವಾರ್ಡ್ಸ ಮಾಡುತ್ತಿದೆ : ರಾಹುಲ್
ಗೋಕಾಕ ಜ 18 : ಗ್ರಾಮೀಣ ಭಾಗದ ಪ್ರತಿಭೆಗಳನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸುವ ಕಾರ್ಯ ಸತೀಶ ಶುಗರ್ಸ ಅವಾರ್ಡ್ಸ ಮಾಡುತ್ತಿದೆ ಎಂದು ಕಾರ್ಯಕ್ರಮ ರೂವಾರಿ ಹಾಗೂ ಡಿಸಿಸಿ ಮತ್ತು ಆಪೇಕ್ಸ ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ ಹೇಳಿದರು
ರವಿವಾರದಂದು ನಗರದ ಶ್ರೀ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಸತೀಶ್ ಜಾರಕಿಹೊಳಿ ಪೌಂಡೇಶನ್ ವತಿಯಿಂದ ಹಮ್ಮಿಕೊಂಡ ಅಂತಿಮ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಆಸ್ತಿಯನ್ನು ಮಾಡದೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಆ ನಿಟ್ಟಿನಲ್ಲಿ ಸತೀಶ ಶುಗರ್ಸ ಅವಾರ್ಡ್ಸ ಮುಖಾಂತರ ಮಾಡಲಾಗುತ್ತಿದ್ದು, ಈ ಸಾರಿಯ ಸತೀಶ ಶುರ್ಗಸ ಅವಾರ್ಡ್ಸದಲ್ಲಿ ಒಟ್ಟು 4 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದರು ಅದರಲ್ಲಿ ಅಂತಿಮ ಹಂತದ ಸ್ವರ್ಧೆಗಳಲ್ಲಿ 12,00 ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನಗಳನ್ನು ಗೆದಿದ್ದಾರೆ. ರಾಜ್ಯ ಮಟ್ಟದ ಮುಕ್ತ ಗಾಯನ, ಸಮೂಹ ನೃತ್ಯ ಸ್ವರ್ಧೆಗಳನ್ನು ಸಂಘಟಿಸಿ ಪ್ರಥಮ ಬಹುಮಾನ 1 ಲಕ್ಷ,ದ್ವಿತೀಯ 50 ಸಾವಿರ ಮತ್ತು ತೃತೀಯ ಬಹುಮಾನ ನಗದು 25 ಸಾವಿರ ರೂಗಳನ್ನು ನೀಡಲಾಗಿದೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಮಹನೀಯರನ್ನು ಗುರುತಿಸಿ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸುವ ಜೊತೆಗೆ ರಾಷ್ಟ್ರ ಮಟ್ಟದ ಸಾಧನೆ ಗೈದ ಮಹನೀಯರನ್ನು ಸತ್ಕರಿಸಿ ಲಾಗಿದ್ದು, ಮುಂದೆಯೂ ಸಹ ಅನೇಕ ಪ್ರತಿಭೆಗಳನ್ನು ಗುರುತಿಸವ ಕಾರ್ಯ ಮಾಡಲಾಗುವುದು ಎಂದರು.
ಕೋವಿಡ , ಪ್ರವಾಹ ಸೇರಿದಂತೆ ಅನೇಕ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ ಪೌಂಡೇಶನ ವತಿಯಿಂದ ಸಾಮಾಜಿಕ ಕಳಕಳಿಯುಳ್ಳ ಕಾರ್ಯಗಳನ್ನು ಮಾಡುತ್ತಿದ್ದೇವೆ. ಲೋಕೋಪಯೋಗಿ ಇಲಾಖೆಯಿಂದಲೂ ತಂದೆ ಸತೀಶ್ ಜಾರಕಿಹೊಳಿ ಅವರು ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ನಮ್ಮ ಸಮಾಜ ಸೇವೆ ನಿರಂತರವಾಗಿ ನಡೆಯುತ್ತಿದೆ. ಬರೀ ಮಾತನಾಡದೆ ಕೆಲಸಗಳನ್ನು ಮಾಡಿ ರಾಜ್ಯದಲ್ಲಿ ಮಾದರಿ ಕಾರ್ಯಗಳನ್ನು ತಂದೆ ಸತೀಶ ಜಾರಕಿಹೊಳಿ ಅವರು ಮಾಡುತ್ತಿದ್ದಾರೆ. ಅವರ ಸಮಾಜ ಸೇವೆಯನ್ನು ಮುಂದುವರೆಸುವ ಕಾರ್ಯವನ್ನು ನಾನು ಮತ್ತು ಸಹೋದರಿ ಪ್ರಿಯಾಂಕಾ ಅವರು ಮಾಡುತ್ತಿದ್ದೇವೆ ಎಂದ ಅವರು ಮುಂದಿನ ದಿನಗಳಲ್ಲಿ ಸತೀಶ ಶುಗರ್ಸ ಅವಾರ್ಡ್ಸ ಕಾರ್ಯಕ್ರಮವನ್ನು ಇನ್ನು ಆಕರ್ಷಕ ರೀತಿಯಲ್ಲಿ ಸಂಘಟಿಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದು ಸಾಧನೆ ಗೈದ ವಿದ್ಯಾರ್ಥಿಗಳಿಗೆ ಸತ್ಕರಿ,ಗೌರವಿಸಲಾಯಿತು.
ನಂತರ ರಾಜ್ಯ ಮಟ್ಟದ ಮುಕ್ತ ವಿಭಾಗದ ಜನಪದ ಗಾಯನ, ಪ್ರೌಢಶಾಲಾ ಗಾಯನ, ರಾಜ್ಯ ಮಟ್ಟದ ಮುಕ್ತ ವಿಭಾಗದ ಗಾಯನ, ಪ್ರೌಢಶಾಲಾ ಜನಪದ ನೃತ್ಯ ಹಾಗೂ ರಾಜ್ಯ ಮಟ್ಟದ ಮುಕ್ತ ವಿಭಾಗದ ಸಮೂಹ ನೃತ್ಯ ಸ್ವರ್ಧೆಗಳು ಜರುಗಿದವು.
ಈ ಸಂದರ್ಭದಲ್ಲಿ ಚಿಕ್ಕೋಡಿ ಸಂಸದೆ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ, ಸರ್ವತ್ತೋಮ ಜಾರಕಿಹೊಳಿ, ವಾಯ್.ಬಿ.ಪಾಟೀಲ, ಪ್ರಾಚಾರ್ಯ ಪ್ರಕಾಶ ಲಕ್ಷಟ್ಟಿ, ಸಂಘಟಕ ರಿಯಾಜ ಚೌಗಲಾ ಉಪಸ್ಥಿತರಿದ್ದರು .
