ಪುತ್ತೂರು:ನಿರಂತರ ಸಾಹಿತ್ಯ ಪುರಸ್ಕಾರ ಪ್ರದಾನ, ಪುಸ್ತಕ ಲೋಕಾರ್ಪಣೆ ಹಾಗೂ ಬಹುಭಾಷಾ ಕವಿಗೋಷ್ಠಿ

ನಿರಂತರ ಸಾಹಿತ್ಯ ಪುರಸ್ಕಾರ ಪ್ರದಾನ, ಪುಸ್ತಕ ಲೋಕಾರ್ಪಣೆ ಹಾಗೂ ಬಹುಭಾಷಾ ಕವಿಗೋಷ್ಠಿ
ಪುತ್ತೂರು: 26 – ಇಲ್ಲಿಯ ಸಂತ ಫಿಲೋಮಿನಾ ಜ್ಯೂಬಿಲಿ ಮೆಮೋರಿಯಲ್ ಹಾಲ್ ದರ್ಬೆದಲ್ಲಿ ರವಿವಾರ ದಿನಾಂಕ 28 ರಂದು ಬೆಳಿಗ್ಗೆ 9-30 ಗಂಟೆಗೆ ನಿರಂತರ ಪ್ರಕಾಶನ, ಗದಗ, ಮಕಾನದಾರ ಸಾಹಿತ್ಯ ಪ್ರತಿಷ್ಠಾನ, ಗಜೇಂದ್ರಗಡ ಹಾಗೂ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವರ ಸಹಯೋಗದಲ್ಲಿ ನಿರಂತರ ಸಾಹಿತ್ಯ ಪುರಸ್ಕಾರ ಪ್ರದಾನ, ಪುಸ್ತಕ ಲೋಕಾರ್ಪಣೆ ಹಾಗೂ ಬಹುಭಾಷಾ ಕವಿಗೋಷ್ಠಿ ಸಮಾರಂಭ ಜರುಗಲಿದ್ದು, ಕಾರ್ಯಕ್ರಮದ ಉದ್ಘಾಟಕರಾಗಿ ಕರ್ನಾಟಕ ಘನ ಸರಕಾರದ ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ ಅವರು, ಶುಭ ಶಂಸನೆ ಆಗಿ ಪುತ್ತೂರು ಮಾಯ್ ದೆ ದೇವುಸ್ ಚರ್ಚ್ನ ಧರ್ಮಗುರುಗಳಾದ ವಂ. ಫಾದರ್ ಲಾರೆನ್ಸ್ ಮಸ್ಕರೇನ್ದಸ್ ಅವರು ಆಗಮಿಸಲಿದ್ದಾರೆ. ಹಿರಿಯ ಬಹುಭಾಷಾ ಕವಿ, ಚಲನಚಿತ್ರ ನಟರಾದ ಮುಹಮ್ಮದ್ ಬಡ್ದುರು ಅವರು ಫ್ಲಾವಿಯಾ ಅಲ್ಬುಕರ್ಕ ರವರ “ಸಖಿ ಸೂಸಿದ ಸೌಗಂಧ” ಚುಟುಕು ಸಂಕಲನ ಲೋಕಾರ್ಪಣೆ ಮಾಡಲಿದ್ದಾರೆ. ಕೃತಿಕಾರರ ಪರಿಚಯವನ್ನು ಶ್ರೀಮತಿ ಕುಮುದಾಕ್ಷಿ ವಿ. ಅವರು, ಕೃತಿ ಪರಿಚಯವನ್ನು ಶಿವಮೊಗ್ಗ ಕುವೆಂಪು ವಿಶ್ವ ವಿದ್ಯಾಲಯದ ಡಾ.ಹಸೀನಾ ಎಚ್.ಖಾದ್ರಿ ಮಾಡಲಿದ್ದು, ಪ್ರಶಸ್ತಿ ಪುರಸ್ಕಾರದ ಕುರಿತು ಹಿರಿಯ ಗಜಲ್ ಕವಯತ್ರಿ ಡಾ. ರೇಣುಕಾತಾಯಿ ಎಂ. ಸಂತಬಾ ಅವರು ಮತನಾಡಲಿದ್ದಾರೆ. ಪುತ್ತೂರಿನ ಶ್ರೀಮತಿ ಫ್ಲಾವಿಯಾ ಅಲ್ಬುಕರ್ಕ್ ಅವರು ನಿರಂತರ ಸಾಹಿತ್ಯ ಪುರಸ್ಕಾರ ಸ್ವೀಕರಿಸಲಿದ್ದಾರೆ. ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ಅವರು ಪುರಸ್ಕಾರ ಪ್ರದಾನ ಮಾಡಲಿದ್ದಾರೆ. ಹಿರಿಯ ಲೇಖಕ, ವಕೀಲರಾದ ಬಿ.ಪುರಂದರ ಭಟ್ ಅವರಿಂದ ಆಶಯ ಭಾಷಣ, ಪವಿತ್ರಾತ್ಮರ ಇಗರ್ಜಿ ಮುಕ್ಕ ಧರ್ಮಗುರುಗಳಾದ ವಂ. ಸ್ಪ್ಯಾನಿ ಪಿಂಟೋ ಇವರಿಂದ ಶುಭನುಡಿ ನೆರವೇರಲಿದೆ. ಗದಗ ನ್ಯಾಯಾಂಗ ಇಲಾಖೆಯ ನಿವೃತ್ತ ಅಧಿಕಾರಿ ಹಾಗೂ ನಿರಂತರ ಪ್ರಕಾಶನದ ಪ್ರಕಾಶಕ ಎ.ಎಸ್.ಮಕಾನದಾರಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಈದೆ ಸಂದರ್ಭದಲ್ಲಿ ಬಹುಭಾಷಾ ಕವಿಗೋಷ್ಠಿ ಮತ್ತು ಚುಟುಕು ಕವಿಗೋಷ್ಠಿ ಕಾರ್ಯಕ್ರಮಗಳು ನೆರವೇರಲಿದ್ದು,ಕನ್ನಡ, ತುಳು, ಹಿಂದಿ, ಬ್ಯಾರಿ, ಮರಾಠಿ, ಕೊಂಕಣಿ,ವಿವಿಧ ಭಾಷೆಗಳ ಜೊತೆಗೆ ಪಟ್ಟೇಗಾರ ಭಾಷೆಯಲ್ಲಿ ಗದುಗಿನ ಗಣೇಶ ಪವಾರ, ಕೊಂಕಣಿ ಭಾಷೆಯಲ್ಲಿ ಪುತ್ತೂರಿನ ಫ್ಲಾವಿಯಾ ಅಲ್ಬುಕರ್ಕ್ ಸೇರಿದಂತೆ ರಾಜ್ಯದ ಅನೇಕ ಸಾಹಿತಿಗಳಿಂದ ಬಹುಭಾಷಾ ಕವಿಗೋಷ್ಠಿ ಜರುಗಲಿದೆ. ಕಾರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಕಾನದಾರ ಸಾಹಿತ್ಯ ಪ್ರತಿಷ್ಟಾನದ ಸಂಚಾಲಕ, ಕವಿ ಎಂ.ಎಸ್. ಮಕಾನದಾರ ಪತ್ರಿಕಾ ಪ್ರಕಟಣೆ ಮೂಲಕ ಕೊರಿದ್ದಾರೆ
