RNI NO. KARKAN/2006/27779|Friday, August 1, 2025
You are here: Home » breaking news » ಗೋಕಾಕ:ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡನೆ ಖಂಡಿಸಿ ಯುಥ್ ಕಾಂಗ್ರೆಸ್ ಹಾಗೂ ಐ.ಎನ್ ಸಿ.ಯು.ಸಿ ಕಾರ್ಯಕರ್ತರ ಪ್ರತಿಭಟನೆ

ಗೋಕಾಕ:ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡನೆ ಖಂಡಿಸಿ ಯುಥ್ ಕಾಂಗ್ರೆಸ್ ಹಾಗೂ ಐ.ಎನ್ ಸಿ.ಯು.ಸಿ ಕಾರ್ಯಕರ್ತರ ಪ್ರತಿಭಟನೆ 

ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡನೆ ಖಂಡಿಸಿ ಯುಥ್ ಕಾಂಗ್ರೆಸ್ ಹಾಗೂ ಐ.ಎನ್ ಸಿ.ಯು.ಸಿ ಕಾರ್ಯಕರ್ತರ ಪ್ರತಿಭಟನೆ

ಗೋಕಾಕ ಏ 4 : ಲೋಕಸಭೆಯಲ್ಲಿ ವಿವಾದಿತ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡನೆ ಮಾಡಿದ್ದನ್ನು ಖಂಡಿಸಿ ಇಲ್ಲಿನ ಯುಥ್ ಕಾಂಗ್ರೆಸ್ ಹಾಗೂ ಐ.ಎನ್ ಸಿ.ಯು.ಸಿ ಸೇಲ್ ದ ಕಾರ್ಯಕರ್ತರು ಮತ್ತು ಮುಸ್ಲಿಂ ಸಮುದಾಯದ ಜನರು ಶುಕ್ರವಾರದಂದು ಪ್ರತಿಭಟನೆ ನಡೆಸಿ ತಹಶೀಲ್ದಾರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಇದೊಂದು ಸಂವಿಧಾನ ವಿರೋಧಿ ಮಸೂದೆಯಾಗಿದ್ದು, ಧಾರ್ಮಿಕ ದ್ವೇಷವನ್ನು ಪ್ರಚೋದಿಸುವ ಸಾಧನವಾಗಿ ಬಳಸಲಾಗುತ್ತಿದೆ. ಅಲ್ಪಸಂಖ್ಯಾತರ ಹಕ್ಕುಗಳನ್ನು ಹತ್ತಿಕ್ಕುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಸೂಚಿಯ ಭಾಗವಾಗಿದೆ’ ಎಂದು ಕಿಡಿಕಾರಿದ ಪ್ರತಿಭಟನಾಕಾರರು ದೇಶದ ಸುಮಾರು 20 ಕೋಟಿ ಮುಸ್ಲಿಮರು ವಕ್ಫ್ ತಿದ್ದುಪಡಿ ವಿಧೇಯಕ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವಾಗ ಅವರ ಅಹವಾಲು ಆಲಿಸದೆ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಿರುವುದು ಪ್ರಜಾಪ್ರಭುತ್ವಕ್ಕೆ ಎಸಗಿದ ದ್ರೋಹ. ಅವರ ಅಸಮಾಧಾನವನ್ನು ಪರಿಗಣಿಸದಿರುವುದು ಮೋದಿಯವರ ಸರ್ವಾಧಿಕಾರಿ ಧೋರಣೆಗೆ ಸಾಕ್ಷಿಯಾಗಿದೆ’ ಎಂದು ಪ್ರತಿಭಟನಾಕಾರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಶಬ್ಬೀರ ಮುಜಾವರ, ಸಾದಿಕ ಲಾಡಖಾನ, ಆಫತಾಬ ಕಮತನೂರ, ಇಮ್ರಾನ್ ತಫಕೀರ, ಜುಬೇರ ಮಿರ್ಜಾಬಾಯಿ, ಮುಫ್ತಿ ಆಸೀಫ್ ಸರಕಾವಾಸ, ಮೌಲಾನಾ ಮೋಯಿನ ದೇವಡಿ, ಅಜೀಜ್ ಶೇಖ್, ಮದಾರಸಾಬ ಕಾಲೇಬಾಯಿ, ಶೌಕತ್ ಖಾಜಿ, ಬಾಬು ಫನಿಬಂದ್, ನಸರುಲ್ಲಾ ಚವ್ಹಾಣ, ರಫೀಕ ಬಾಗವಾನ, ಮುಸಕೀಮ ಕಮತನೂರ, ದಸ್ತಗಿರಿ ಪೈಲವಾನ, ಇಮ್ರಾನ್ ಪೈಲವಾನ, ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು

Related posts: