ಗೋಕಾಕ:ಸರಕಾರ ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕು : ಅಶೋಕ ಪೂಜಾರಿ ಆಗ್ರಹ

ಸರಕಾರ ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕು : ಅಶೋಕ ಪೂಜಾರಿ ಆಗ್ರಹ
ಗೋಕಾಕ ಡಿ 6 : ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಕಳೆದ ಒಂದು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರಕಾರ ಇದರ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಉತ್ತರ ಕರ್ನಾಟಕ ವಿಕಾಸ ವೇದಿಕೆ ಅಧ್ಯಕ್ಷ ಅಶೋಕ್ ಪೂಜಾರಿ ಹೇಳಿದರು
ಶನಿವಾರದಂದು ನಗರದ ತಮ್ಮ ಸ್ವಗೃಹದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು
ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಿಸಿದಾಗ ಸಮಗ್ರ ಉತ್ತರ ಕರ್ನಾಟಕದ ಅಭಿವೃದ್ಧಿ ಆಗುತ್ತದೆ ಎಂಬ ಆಸೆ ಇತ್ತು ಆದರೆ ಅದು ಇಲ್ಲಿಯವರೆಗೆ ಈಡೇರಿಲ್ಲ ಇದು ನಮ್ಮ ದುರ್ದೈವ. ಸುವರ್ಣ ಸೌಧ ನಿರ್ಮಾಣವಾಗಿ 13 ವರ್ಷದವಾದರೂ ಇಲ್ಲಿಯವರೆಗೆ ಆಡಳಿತಾತ್ಮಕ ಶಕ್ತಿ ಕೇಂದ್ರ ಆಗಿಲ್ಲ. ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಸುವರ್ಣಸೌಧದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಸರಕಾರ ಬೆಳಗಾವಿಯನ್ನು ಎರಡನೇ ರಾಜ್ಯಧಾನಿ ಎಂದು ಬರಿ ಮಾತಿನಲ್ಲಿ ಹೇಳಿದೆ ಆದರೆ ಇಲ್ಲಿಯವರೆಗೆ ಅದು ಅಧಿಕೃತವಾಗಿ ಈಡೇರಲಿಲ್ಲ. ಬೆಳಗಾವಿಯಿಂದಲೇ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಿ ಅಭಿವೃದ್ಧಿ ಹೊಂದಬೇಕು ಎಂಬ ಸದಾಶಯೆ ಉತ್ತರ ಕರ್ನಾಟಕ. ಜನರದ್ದಾಗಿದೆ.
ಉತ್ತರ ಕರ್ನಾಟಕದ ಜನರ ಬೇಡಿಕೆಗಳಾದ ಕಿತ್ತೂರ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಸಚಿವಾಲಯ, ಕಿತ್ತೂರ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರ ರಚನೆ,ಉತ್ತರ ಕರ್ನಾಟಕಕ್ಕೆ ವಿಶೇಷ ಅನುದಾನ ಸೇರಿದಂತೆ ಅನೇಕ ಬೇಡಿಕೆಗಳು ಕಳೆದ ದಶಕಗಳಿಂದ ಇವೆ. ಬರುವ ದಿನಗಳಲ್ಲಿ ಇವುಗಳು ಈಡೇರಿದೆ ಹೋದರೆ ಉತ್ತರ ಕರ್ನಾಟಕದ ಜನರು ಅನಿವಾರ್ಯವಾಗಿ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದ ಅವರು ಉತ್ತರ ಕರ್ನಾಟಕ ಭಾಗದ ಶಾಸಕರು ಸಚಿವರು ಇದರ ಬಗ್ಗೆ ಕಾಳಜಿ ಹೊಂದಿ ಸದನದಲ್ಲಿ ಧ್ವನಿ ಎತ್ತಬೇಕು ಎಂದು ಅಶೋಕ ಪೂಜಾರಿ ಆಗ್ರಹಿಸಿದರು.
ಡಿಸೆಂಬರ್ ತಿಂಗಳಲ್ಲಿ ಇವುಗಳು ಈಡೇರದೆ ಹೋದರೆ ಜನವರಿಯಲ್ಲಿ ಈ ಹೋರಾಟವನ್ನು ತಿವ್ರಗೋಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಚಳಿಗಾಲದ ಅಧಿವೇಶನವು ಸೋಮವಾರದಿಂದ ಪ್ರಾರಂಭ ವಾಡುತ್ತಿದ್ದು, 10 ದಿನಗಳ ಅಧಿವೇಶನದಲ್ಲಿ 5 ದಿನ ಉತ್ತರ ಕರ್ನಾಟಕದ ಬಗ್ಗೆ ಚರ್ಚೆಯಾಗಬೇಕು. ಕಬ್ಬು ಬೆಳೆಗಾರರ ಸಮಸ್ಯೆ, ನೀರಾವರಿ ಸಮಸ್ಯೆ ಸೇರಿದಂತೆ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಬೇಕು ಎಂದು ಹೇಳಿದರು.
ಇನ್ನು ಬೆಳಗಾವಿ ಜಿಲ್ಲೆ ವಿಭಜನೆ ಮಾಡವಲ್ಲಿ ಸರಕಾರ ಕಾಳಜಿ ತೋರಿ ಚಳಿಗಾಲದ ಅಧಿವೇಶನದಲ್ಲಿ ಒಂದು ಸ್ವಷ್ಟ ನಿಲುವು ತಾಳಿ ಗೋಕಾಕ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಅಶೋಕ ಪೂಜಾರಿ ಸರಕಾರವನ್ನು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರೋ.ಅರ್ಜುನ ಪಂಗಣ್ಣವರ, ಉದಯ ಕರಜಿಗಿಮಠ, ನಿಂಗಪ್ಪ ಅಮಿನಬಾವಿ, ಪ್ರವೀಣ ನಾಯಿಕ ಉಪಸ್ಥಿತರಿದ್ದರು
