ಗೋಕಾಕ:ಗೋಕಾಕ ನೂತನ ಜಿಲ್ಲೆಗೆ ಆಗ್ರಹಿಸಿ ಶೀಘ್ರ ಮುಖ್ಯಮಂತ್ರಿ ಬಳಿ ನಿಯೋಗ : ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ

ಗೋಕಾಕ ನೂತನ ಜಿಲ್ಲೆಗೆ ಆಗ್ರಹಿಸಿ ಶೀಘ್ರ ಮುಖ್ಯಮಂತ್ರಿ ಬಳಿ ನಿಯೋಗ : ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ
ಗೋಕಾಕ ಜು 14 : ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ನೂತನ ಜಿಲ್ಲೆ ಎಂದು ಘೋಷಿಸುವಂತೆ ಬರುವ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ,ಉಪ ಮುಖ್ಯಮಂತ್ರಿ ಹಾಗೂ ಬೆಳಗಾವಿ ಪ್ರಾದೇಶಿಕ ಆಯುಕ್ತರಲ್ಲಿ ನಿಯೋಗ ಹೋಗಿ ಗೋಕಾಕ ನೂತನ ಜಿಲ್ಲಾ ಮಾಡುವಂತೆ ಒತ್ತಾಯಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಹೇಳಿದರು
ಸೋಮವಾರದಂದು ನಗರದ ತಮ್ಮ ಸ್ವ-ಗೃಹದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ದಿವಂಗತ ಜೆ.ಎಚ್.ಪಟೇಲ್ ಅವರ ಸರಕಾರ ಗೋಕಾಕ ಜಿಲ್ಲೆಯಂದು ಘೋಷಿಸಿ ಕಾರಣಾಂತರಗಳಿಂದ ಹಿಂದೆ ಪಡೆದಿತ್ತು. ಅಂದಿನಿಂದ ಇಂದಿನವರೆಗೂ ಗೋಕಾಕ ಜಿಲ್ಲೆಗಾಗಿ ನಿರಂತರ ಹೋರಾಟಗಳು ನಡೆಯುತ್ತಾ ಬಂದಿದ್ದು, ಸರಕಾರದ ನಿರ್ಣಯಗಳು ರಾಜಕೀಯ ವ್ಯವಸ್ಥೆಯ ಪೂರಕ ನಿರ್ಣಯಗಳಾಗಿ ಬಿಟ್ಟಿವೆ ಹಾಗಾಗಿ ಬೆಳೆಗಾವಿ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಮಹಿಳಾ ಮಕ್ಕಳ ಕಲ್ಯಾಣ ಸಚಿವರು ಇದಕ್ಕೆ ವೇಗ ಒದಗಿಸಿ ಜಿಲ್ಲೆ ವಿಭಜನೆ ಮಾಡುವ ಕಾರ್ಯ ಮಾಡಬೇಕು.
ಜನಗಣತಿ ಆದೇಶದಲ್ಲಿ ಜಿಲ್ಲೆ ತಾಲೂಕು ಗ್ರಾಮಗಳ, ಹೋಬಳಿ ಸಂಬಂಧಿಸಿದಂತೆ ಡಿಸೆಂಬರ ತಿಂಗಳ ಒಳಗಾಗಿ ತಾವು ವಿಗಂಡಣೆಯ ಪ್ರಕ್ರಿಯೆ ನಡೆಸಬೇಕು ಎಂದು ಕೇಂದ್ರ ಸರಕಾರ ಹೇಳಿದೆ. ಹಾಗಾಗಿ ಸರಕಾರ ಆದಷ್ಟು ಬೇಗ ಡಿಸೆಂಬರ್ ಒಳಗಾಗಿ ಜಿಲ್ಲೆ ವಿಭಜನೆಯ ಪೂರಕವಾದ ನಿರ್ಣಯ ತಗೆದುಕೊಂಡು ಗೋಕಾಕ ಜಿಲ್ಲೆಯನ್ನು ಮಾಡಬೇಕು. ಬೆಳಗಾವಿ ಜಿಲ್ಲೆ ವಿಭಜನೆಗೆ ಮಿನಮೇಷ ಏಕೆ ? ಎಂದು ಪ್ರಶ್ನಿಸಿದ ಕಾಂಗ್ರೆಸ್ ಮುಖಂಡ ಪೂಜಾರಿ ಸರಕಾರ ಅದನ್ನು ಸ್ವಷ್ಟ ಪಡಿಸಬೇಕು ಎಂದು ಆಗ್ರಹಿಸಿದರು.
ಕಳೆದ 4 ದಶಕಗಳಿಂದ ಇಲ್ಲಿನ ಜನರು ಶಾಂತಿಯುತವಾಗಿ ಹೋರಾಟ ಮಾಡುತ್ತಾ ಬಂದಿದ್ದರು ಸಹ ಸರಕಾರ ಇತರ ಬಗ್ಗೆ ಯಾವುದೇ ಪ್ರಕ್ರಿಯೆ ನೀಡಿಲ್ಲಾ. ಸಿದ್ದರಾಮಯ್ಯ ಅವರು ಗಟ್ಟಿ ಮುಖ್ಯಮಂತ್ರಿ ಇದ್ದಾರೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಸಹ ಹೋರಾಟದಿಂದ ತಮ್ಮ ರಾಜಕೀಯ ಜೀವನವನ್ನು ಕಟ್ಟಿಕೊಂಡವರು ಹಾಗಾಗಿ ಈ ಇಬ್ಬರು ಗಟ್ಟಿಯಾಗಿ ನಿಂತರೆ ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಗೋಕಾಕ ಜಿಲ್ಲೆ ಆಗುವುದರಲ್ಲಿ ಎರೆಡು ಮಾತ್ತಿಲ್ಲಾ. ಹಾಗಾಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಮಹಿಳಾ ಮಕ್ಕಳ ಸಚಿವರು ಕೂಡಿ ಜಿಲ್ಲೆಯ ಎಲ್ಲಾ ಶಾಸಕರ ಸಭೆ ಕರೆದು ಅವರ ಅಭಿಪ್ರಾಯ ಪಡೆದು ಜಿಲ್ಲಾ ವಿಂಗಡನೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರೋ ಅರ್ಜುನ್ ಪಂಗಣ್ಣವರ ಮಾತನಾಡಿ ಕಳೆದ ಎರೆಡ್ಮೂರು ದಶಕಗಳಿಂದ ರಾಜಕೀಯದಲ್ಲಿರುವ ರಾಜಕಾರಣಿಗಳು ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ನೂತನ ಜಿಲ್ಲಾ ಕೇಂದ್ರವನ್ನಾಗಿ ಮಾಡಿ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ಸೇರಿಸಕೊಳ್ಳಬೇಕು ಇಲ್ಲದಿದ್ದರೆ ಇತಿಹಾಸವೇ ಅವರನ್ನು ಪ್ರಶ್ನಿಸುವ ಕಾಲ ಬಂದಾಗ ಅವರಲ್ಲಿ ಉತ್ತರ ವಿರುವುದಿಲ್ಲ ಹಾಗಾಗಿ ಆದಷ್ಟು ಬೇಗ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡೆಸಿಕೊಂಡು ಗೋಕಾಕ ನೂತನ ಜಿಲ್ಲೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ದಸ್ತಗಿರಿ ಪೈಲವಾನ್, ಪುಟ್ಟು ಖಾನಾಪೂರೆ, ಡಾ. ಪ್ರವಿಣ ನಾಯಿಕ, ಮಲ್ಲಪ್ಪ ಜಿಟ್ಟೆನ್ನರವ, ಸಂಜೀವ ಪೂಜಾರಿ ಉಪಸ್ಥಿತರಿದ್ದರು.