ಗೋಕಾಕ:ಬಿಸಿಎ ಅಂತಿಮ ವರ್ಷದ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರ ಉತ್ತಮ ಸಾಧನೆ

ಬಿಸಿಎ ಅಂತಿಮ ವರ್ಷದ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರ ಉತ್ತಮ ಸಾಧನೆ
ಗೋಕಾಕ ಜು 10 : ನಗರದ ಶ್ರೀ ಸಿದ್ದಲಿಂಗೇಶ್ವರ ಬಿಸಿಎ ಮಹಾವಿದ್ಯಾಲಯದ ಮೇ – ಜೂನ್ ತಿಂಗಳಲ್ಲಿ ನಡೆದ ಬಿ.ಸಿ.ಎ ಅಂತಿಮ ಪರೀಕ್ಷೆಯಲ್ಲಿ ಐದು ಜನ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿದ್ದಾರೆ.
ಕುಮಾರಿ ದೀಪಾ ಸನದಿ ಶೇಕಡಾ 94.1 % ಅಂಕ ಪಡೆದು ಪ್ರಥಮ, ಕುಮಾರಿ ಲಕ್ಷ್ಮೀ ಮಲ್ಲಾಪೂರ ಶೇಕಡಾ 93.8 % ಅಂಕ ಪಡೆದು ದ್ವಿತೀಯ, ಕುಮಾರಿ ಮೇಘಾ ಗೌಡರ ಶೇಕಡಾ 92.3% ಅಂಕ ಪಡೆದು ತೃತೀಯ, ಕುಮಾರಿ ಸುಷಮೀತಾ ಶೆಟ್ಟಿ ಶೇಕಡಾ 92.1 % ಹಾಗೂ ಕುಮಾರಿ ಗೀತಾ ಮಾರಿಹಾಳ ಶೇಕಡಾ 92.1 % ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ
ವಿದ್ಯಾರ್ಥಿಗಳು ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು, ಸಂಸ್ಥೆಯ ನಿರ್ದೇಶಕರುಗಳ, ಸಂಸ್ಥೆಯ ಆಡಳಿತಾಧಿಕಾರಿ, ಪ್ರಾಚಾರ್ಯ ಮತ್ತು ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.