ಘಟಪ್ರಭಾ:ಕಲುಷಿತಗೊಂಡ ಘಟಪ್ರಭಾ ನದಿಯ ನೀರು : ಜನರಲ್ಲಿ ಆಂತಕ
ಕಲುಷಿತಗೊಂಡ ಘಟಪ್ರಭಾ ನದಿಯ ನೀರು : ಜನರಲ್ಲಿ ಆಂತಕ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಜೂ 6 :
ಇಲ್ಲಿಗೆ ಸಮೀಪದ ಧುಪದಾಳ ಹತ್ತಿರ ಇರುವ ಘಟಪ್ರಭಾ ನದಿಯ ನೀರು ತೀರಾ ಕಲುಷಿತಗೊಂಡಿದ್ದು ರೋಗ ರುಜಿನುಗಳು ಹರಡುವ ಸಾದ್ಯತೆ ಇದೆ.
ಧುಪದಾಳ ಗ್ರಾಮದ ಅತೀ ಸಮೀಪದಲ್ಲಿ ಘಟಪ್ರಬಾ ನದಿಯು ಹರಿಯುತ್ತಿದ್ದು ಗ್ರಾಮದ ಜನರು ಬಟ್ಟೆ ತೊಳೆಯಲು, ಸ್ನಾನ ಮಾಡಲು, ದನಕರುಗಳ ಮೈ ತೊಳೆಯಲು ಈ ನದಿಯ ನೀರನ್ನೇ ಅವಲಂಬಿಸಿದ್ದಾರೆ. ಆದರೆ ಕೆಲ ತಿಂಗಳಿಂದ ಧುಪದಾಳ ಜಲಾಶಯದ ನೀರನ್ನು ಬಿಡುತ್ತಿಲ್ಲವಾದ್ದರಿಂದ ನದಿಯ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ಬಹಳಷ್ಟು ಕಲುಷಿತಗೊಂಡು ದುರ್ವಾಸನೆ ಹೊಡೆಯುತ್ತಿದೆ. ಅದೇ ನೀರು ಧುಪದಾಳ ಹಾಗೂ ಕೊಣ್ಣೂರ ಊರುಗಳಿಗೆ ಕುಡಿಯುಲು ಉಪಯೋಗಿಸುತ್ತಿದ್ದು, ಕಲುಷಿತ ನೀರಿನಿಂದ ಅನೇಕ ರೋಗ ರುಜಿನಗಳು ಹರಡುವ ಸಾದ್ಯತೆ ಇರುತ್ತದೆ. ಕಾರಣ ಸಂಬಂದಿಸಿದ ಅಧಿಕಾರಿಗಳು ಧುಪದಾಳ ಜಲಾಶಯ ನಿರನ್ನು ಬಿಟ್ಟು ಕಲುಷಿತ ನೀರು ಮುಂದೆ ಹರಿದು ಹೋಗುವಂತೆ ಮಾಡಬೇಕೆಂದು ನಾಗರಿಕರ ಆಗ್ರಹವಾಗಿದೆ.