ಗೋಕಾಕ:ಉಪ್ಪಾರ ಸೊಸೈಟಿಗೆ ಅಧ್ಯಕ್ಷರಾಗಿ ಪರಶುರಾಮ ಶಿಂಗಳಾಪೂರ, ಉಪಾಧ್ಯಕ್ಷೆಯಾಗಿ ಲಕ್ಷ್ಮೀ ಖಾನಪ್ಪನವರ ಅವಿರೋಧ ಆಯ್ಕೆ
ಉಪ್ಪಾರ ಸೊಸೈಟಿಗೆ ಅಧ್ಯಕ್ಷರಾಗಿ ಪರಶುರಾಮ ಶಿಂಗಳಾಪೂರ, ಉಪಾಧ್ಯಕ್ಷೆಯಾಗಿ ಲಕ್ಷ್ಮೀ ಖಾನಪ್ಪನವರ ಅವಿರೋಧ ಆಯ್ಕೆ
ಗೋಕಾಕ ಜ 24 : ನಗರದ ದಿ.ಗೋಕಾಕ ಉಪ್ಪಾರರ ಔದ್ಯೋಗಿಕ ಸಹಕಾರಿ ಸಂಘ ನಿಯಮಿತ ಗೋಕಾಕ ಸೊಸೈಟಿಯ ನೂತನ ಅಧ್ಯಕ್ಷರಾಗಿ ಪರಶುರಾಮ ಶಿಂಗಳಾಪೂರ ಉಪಾಧ್ಯಕ್ಷೆಯಾಗಿ ಶ್ರೀಮತಿ ಲಕ್ಷ್ಮೀ ಬಸವರಾಜ ಖಾನಪ್ಪನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ .
ಗುರುವಾರ ಸೊಸೈಟಿಯ ಸಭಾಂಗಣದಲ್ಲಿ ನಡೆದ ಚುನಾವಣೆ ಸಭೆಯಲ್ಲಿ ಆಡಳಿತ ಮಂಡಳಿ ಸಭೆಯಲ್ಲಿ ಅವಿರೋಧ ಆಯ್ಕೆ ನಡೆಯಿತು. ಚುನಾವಣೆ ಅಧಿಕಾರಿಯಾಗಿದ್ದ ಸುರೇಶ್ ಬಿರಾದಾರ ಪಾಟೀಲ ಅವರು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಹಾಗೂ ನಿರ್ದೇಶಕರಿಗೆ ಆದೇಶ ಪತ್ರ ವಿತರಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾರುತಿ ಜಡೆನ್ನವರ, ಭೀಮಶಿ ಖಾನಪ್ಪನವರ , ಮಾಯಪ್ಪ ತಹಶೀಲ್ದಾರ್, ಬಸಪ್ಪ ರಂಕನಕೊಪ್ಪ, ಲಕ್ಷ್ಮೀ ಭಿ. ಕಿತ್ತೂರ, ನಿಂಗಪ್ಪ ಹುಳ್ಳಿ, ಸತೆಪ್ಪ ಬಡೆಪ್ಪಗೋಳ, ಗಣಪತಿ ತಹಶೀಲ್ದಾರ್, ಯಲಪ್ಪ ಹೆಜ್ಜಗಾರ, ಸಿದ್ಧಾರೂಢ ಪಾತ್ರೂಟ, ರಾಜು ಮೇದಾರ ಹಾಗೂ ಮುಖಂಡರುಗಳಾದ ಅಡಿವೆಪ್ಪ ಕಿತ್ತೂರು, ಬಸವರಾಜ ಖಾನಪ್ಪನವರ, ಜಗದೀಶ್ ಶಿಂಗಳಾಪೂರ ,ಸಂಜು ಜಡೆನ್ನವರ ಉಪಸ್ಥಿತರಿದ್ದರು