ಗೋಕಾಕ:ಸಮ್ಮೇಳನಾಧ್ಯಕ್ಷ ಅಕ್ಕಿ ಅವರಿಗೆ ಕಸಾಪ ವತಿಯಿಂದ ಅಧಿಕೃತ ಆಹ್ವಾನ
ಸಮ್ಮೇಳನಾಧ್ಯಕ್ಷ ಅಕ್ಕಿ ಅವರಿಗೆ ಕಸಾಪ ವತಿಯಿಂದ ಅಧಿಕೃತ ಆಹ್ವಾನ
ಗೋಕಾಕ ನ12 : ಮೂಡಲಗಿಯಲ್ಲಿ ದಿನಾಂಕ 23,24 ರಂದು ನಡೆಯುವ 16ನೇ ಬೆಳಗಾವಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ನಗರದ ಹಿರಿಯ ಸಾಹಿತಿ ಪ್ರೋ ಚಂದ್ರಶೇಖರ ಅಕ್ಕಿ ವರಿಗೆ ಸೋಮವಾರದಂದು ಮೂಡಲಗಿಯ ಕಸಾಪ ತಾಲೂಕು ಘಟಕದ ಪದಾಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ ಸಮ್ಮೇಳನಕ್ಕೆ ಅಧಿಕೃತವಾಗಿ ಆಹ್ವಾನ ನೀಡಿ , ಸತ್ಕರಿಸಿದರು.
ಈ ಹಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಡಾ.ಸಂಜಯ ಶಿಂದಿಹಟ್ಟಿ, ಪದಾಧಿಕಾರಿಗಳಾದ ಬಾಲಶೇಖರ ಬಂದಿ, ಸಂಗಮೇಶ ಗುಜಗೊಂಡ, ಎಸ್.ಎಂ ಕಮದಾಳ, ಡಿ.ವಾಯ್.ಶಿವಾಪೂರ, ಸಿದ್ರಾಮ ದ್ಯಾಗಾನಟ್ಟಿ, ನಿಂಗಪ್ಪ ಸಂಗರೋಜಿಕೊಪ್ಪ, ಚಿದಾನಂದ ಹೂಗಾರ, ಸುಭಾಷ್ ಕುರಣಿ, ಎ.ಎಚ್.ವಂಟಗೂಡಿ, ಬಿ.ಆರ್.ತರಕಾರ, ಗೋಕಾಕ ಘಟಕದ ಅಧ್ಯಕ್ಷೆ ಭಾರತಿ ಮದಬಾವಿ, ಮಹಾಂತೇಶ ತಾವಂಶಿ, ಶಾಮಾನಂದ ಪೂಜಾರಿ, ಪುಷ್ಪಾ ಮುರಗೋಡ, ಮಹಾನಂದ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.