RNI NO. KARKAN/2006/27779|Saturday, February 14, 2026
You are here: Home » breaking news » ಗೋಕಾಕ:ಮಹಾಂತೇಶ ಕಡಾಡಿಯವರ ಜನಸಂಪರ್ಕ ಕಾರ್ಯಾಲಯದಲ್ಲಿ ಗಾಂಧೀಜಿ ಆಚರಣೆ

ಗೋಕಾಕ:ಮಹಾಂತೇಶ ಕಡಾಡಿಯವರ ಜನಸಂಪರ್ಕ ಕಾರ್ಯಾಲಯದಲ್ಲಿ ಗಾಂಧೀಜಿ ಆಚರಣೆ 

ಮಹಾಂತೇಶ ಕಡಾಡಿಯವರ ಜನಸಂಪರ್ಕ ಕಾರ್ಯಾಲಯದಲ್ಲಿ ಗಾಂಧೀಜಿ ಆಚರಣೆ

ಗೋಕಾಕ ಅ 2 : ಕಾಂಗ್ರೆಸ್ ಮುಖಂಡ ಡಾ. ಮಹಾಂತೇಶ ಕಡಾಡಿಯವರ ಜನಸಂಪರ್ಕ ಕಾರ್ಯಾಲಯದಲ್ಲಿ ಬುಧವಾರದಂದು ಗಾಂಧೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಗಾಂಧಿ ಜಯಂತಿ ಆಚರಿಸಲಾಯಿತು.
ಬಸವೇಶ್ವರ ವೃತ್ತದಿಂದ ನಗರದ ಗಾಂಧಿ ಮೈದಾನದವರೆಗೆ ಪಾದಯಾತ್ರೆ ಹಮ್ಮಿಕೊಂಡು ಗಾಂಧಿ ಪುತ್ಥಳಿವರೆಗೆ ಮಾಲಾರ್ಪಣೆ ಮಾಡಲಾಯಿತು. ನಂತರ ಇಲ್ಲಿನ ರಾಮಲಿಂಗೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕೆಪಿಸಿಸಿ ಕಚೇರಿಯಲ್ಲಿ ನಡೆದ ಗಾಂಧಿ ಜಯಂತಿಯ ನೇರ ಪ್ರಸಾರ ಕಾರ್ಯಕ್ರಮ ವಿಕ್ಷಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಶೋಕ ಪೂಜಾರಿ, ಮಾಯಪ್ಪ ತಹಶೀಲ್ದಾರ, ಗೋಕಾಕ ಗ್ರಾಮೀಣ ಕಾಂಗ್ರೆಸ್ ಘಟಕದ ಅಧ್ಯಕ್ಷ ಪ್ರಕಾಶ್ ಡಾಂಗೆ, ಗೋಕಾಕ ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಜಾಕೀರ್ ನದಾಫ್, ಸಾದಿಕ ಲಾಡಖಾನ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Related posts: