ಗೋಕಾಕ:ಚಂದ್ರಯಾನ 3 ಯಶಸ್ವಿಯಾಗಿದ್ದು ಭಾರತದ ಹೆಮ್ಮೆ : ಇಸ್ರೋ ಅಧ್ಯಕ್ಷ ಡಾ.ಎಸ್.ಸೋಮನಾಥ ಅಭಿಮತ

ಚಂದ್ರಯಾನ 3 ಯಶಸ್ವಿಯಾಗಿದ್ದು ಭಾರತದ ಹೆಮ್ಮೆ : ಇಸ್ರೋ ಅಧ್ಯಕ್ಷ ಡಾ.ಎಸ್.ಸೋಮನಾಥ ಅಭಿಮತ
ಗೋಕಾಕ ಮಾ 1 : ಸಮಾಜದಲ್ಲಿ ಮಾನವರು ತಮ್ಮ ಕಾಯಕವನ್ನು ನಿಷ್ಠೆಯಿಂದ ನಿರ್ವಹಿಸಬೇಕು ಎಂದು ಬಸವಣ್ಣನವರು ಹೇಳಿದ್ದಾರೆ. ಅಂತಹ ಕಾರ್ಯವನ್ನು ಶ್ರೀ ಶೂನ್ಯಸಂಪಾದನ ಮಠ ಮಾಡುತ್ತಿದೆ ಎಂದು ಇಸ್ರೋ ಅಧ್ಯಕ್ಷ ಡಾ.ಎಸ್.ಸೋಮನಾಥ ಹೇಳಿದರು.
ಶುಕ್ರವಾರದಂದು ಶೂನ್ಯ ಸಂಪಾದನ ಮಠದ ವತಿಯಿಂದ ಹಮ್ಮಿಕೊಂಡ ಹಮ್ಮಿಕೊಂಡ 19 ನೇ ಶರಣ ಸಂಸ್ಕೃತಿ ಉತ್ಸವದ ಮೊದಲನೇ ದಿನದ ಕಾರ್ಯಕ್ರಮದಲ್ಲಿ ಕಾಯಕಶ್ರೀ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
3 ಸಾವಿರ ಕಿಲೋಮೀಟರ್ ದೂರದ ಚಂದ್ರಯಾನ 3 ಯಶಸ್ವಿಯಾಗಿದ್ದು ಭಾರತದ ಹೆಮ್ಮೆ .ಎರಡನೇ ಚಂದ್ರಯಾನ ಯಶಸ್ಸಿಯಾಗಿ ಚಂದ್ರನ ಮೇಲೆ ಇಳಿಸಲು ವಿಫಲವಾದಾಗ ಇಸ್ರೋದ ಎಲ್ಲಾ ವಿಜ್ಞಾನಿಗಳು ಬೇಸರಪಡದೆ ಆದ ತಪ್ಪನ್ನು ಸರಿಪಡೆಸಿಕೊಂಡು 3ನೇ ಚಂದ್ರಯಾನವನ್ನು ಯಶಸ್ವಿಯಾಗಿ ಚಂದ್ರನಮೇಲೆ ಕಳುಹಿಸಲು ಸಾಧ್ಯವಾಯಿತು ಎಂದು ಇಸ್ರೋದ ಕಾರ್ಯವನ್ನು ನೆನಪಿಸಿದ ಅವರು ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಸಹಕಾರ ಬಹಳ ಮುಖ್ಯವಾಗಿತ್ತು ಎಂದು ನೆನಪಿಸಿದರು . ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷ ಗಗನಯಾನವನ್ನು ಚಂದ್ರನ ಮೇಲೆ ಕಳುಹಿಸಲಿದ್ದೇವೆ.ಆ ಕಾರ್ಯವು ಸಹ ಇಸ್ರೋದ ವಿಜ್ಞಾನಿಗಳು ಮಾಡುತ್ತಿದ್ದಾರೆ. ಇಂದು ಜಗತ್ತು ಇಸ್ರೋದ ಕಾರ್ಯವನ್ನು ಕೊಂಡಾಡುತ್ತಿದ್ದೆ. ವೈಜ್ಞಾನಿಕವಾಗಿ ಹಲವು ಕಂಪನಿಗಳು ಇಸ್ರೋಗೆ ಪರಿಕರಗಳನ್ನು ಒದಗಿಸುತ್ತಿವೆ ಎಲ್ಲರ ಸಹಕಾರದಿಂದ ಇಸ್ರೋ ಕಾರ್ಯನಿರ್ವಹಿಸುತ್ತಿದೆ.ಶ್ರೀ ಮಠ ಇಸ್ರೋದ ಸಣ್ಣ ಕಾರ್ಯವನ್ನು ಗುರುತಿಸಿ ಕಾಯಕಶ್ರೀ ಪ್ರಶಸ್ತಿ ನೀಡಿ ಗೌರವಸಿದ್ದು ನಮ್ಮ ಭಾಗ್ಯ ಎಂದು ಶ್ರೀಮಠದ ಕಾರ್ಯವನ್ನು ಕೊಂಡಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿಜೆಪಿ ಮುಖಂಡ ಶಂಕರಗೌಡ ಪಾಟೀಲ 12 ನೇ ಶತಮಾನದಲ್ಲಿ ಅನುಭವ ಮಂಟಪವನ್ನು ನೆನಪಿಸುವ ಕಾರ್ಯ ಶ್ರೀಗಳು ಮಾಡುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ನೇತೃತ್ವದವನ್ನು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು. ದಿವ್ಯ ಸಾನಿಧ್ಯವನ್ನು ಸಾಣೆಹಳ್ಳಿಯ ತರಳಬಾಳು ಜಗದ್ಗುರು ಶಾಖಮಠದ ಡಾ.ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು , ಘಟಪ್ರಭಾ ಕೆಂಪಯ್ಯಸ್ವಾಮಿಮಠ ಗುಬ್ಬಲಗುಡ್ಡದ ಡಾ..ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಹಳ್ಳೂರಿನ ಶ್ರೀ ಅಡಿಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎ.ಬಿ.ಪಾಟೀಲ, ಜೆ.ಎಸ್.ಪಾಟೀಲ, ಸಮಿತಿ ಅಧ್ಯಕ್ಷ ಸಂತೋಷ ಸೋನವಾಲಕರ, ಕೋಶಾಧ್ಯಕ್ಷ ಬಸವರಾಜ ಮುರುಗೋಡ, ಕಾರ್ಯದರ್ಶಿ ಮಂಜುನಾಥ್ ಸಣ್ಣಕ್ಕಿ, ಬಸನಗೌಡ ಪಾಟೀಲ, ಮಲ್ಲಿಕಾರ್ಜುನ ಈಟಿ, ಡಾ.ಚಂದ್ರು ಕೂಲಿಗೋಡ, ಮಹಾಂತೇಶ ಕಲ್ಲೋಳಿ ಉಪಸ್ಥಿತರಿದ್ದರು.