RNI NO. KARKAN/2006/27779|Tuesday, December 30, 2025
You are here: Home » breaking news » ಗೋಕಾಕ:ಗೋಕಾಕ ನಗರದಲ್ಲಿ ವಿದ್ಯುತ್ ದ್ವಿಚಕ್ರ ವಾಹನಕ್ಕೆ ಬೆಂಕಿ

ಗೋಕಾಕ:ಗೋಕಾಕ ನಗರದಲ್ಲಿ ವಿದ್ಯುತ್ ದ್ವಿಚಕ್ರ ವಾಹನಕ್ಕೆ ಬೆಂಕಿ 

ಗೋಕಾಕ ನಗರದಲ್ಲಿ ವಿದ್ಯುತ್ ದ್ವಿಚಕ್ರ ವಾಹನಕ್ಕೆ ಬೆಂಕಿ

ಗೋಕಾಕ ಏ 13 : ನಗರದ ನಿವಾಸಿ ದಿಲೀಪ್ ಜಯಕುಮಾರ್ ಮೆಳವಂಕಿ ಅವರು ವಿದ್ಯುತ್ ( ಪರಿಸರ ಸ್ನೇಹಿ) ದ್ವಿಚಕ್ರ ವಾಹನ ಸಂಖ್ಯೆ : ಕೆಎ 49 ಇಎ 7227 ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಉರಿದ ಘಟನೆ ಗುರುವಾರದಂದು ಮಧ್ಯಾಹ್ನ ಜರುಗಿದೆ.
ಆನಂದ ಟಾಕೀಸ್ ರಸ್ತೆಯಲ್ಲಿರುವ ದಿಲೀಪ್ ಮೆಳವಂಕಿ ಅವರು ತಮ್ಮ ಮನೆಯ ಮುಂದೆ ವಾಹನವನ್ನು ನಿಲುಗಡೆ ಗೋಳಿಸಿದ್ದರು. ಬಿಸಿಲಿನ ತಾಪಕ್ಕೆ ವಾಹನದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಇದನ್ನು ಗಮನಿಸಿದ ವಾಹನ ಮಾಲೀಕರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ಪರಿಣಾಮ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ‌. ಬ್ಯಾಟರಿ ಸ್ಫೋಟಕ್ಕೆ ನಿಖರವಾದ ಕಾರಣ ತಕ್ಷಣವೇ ತಿಳಿದುಬಂದಿಲ್ಲ ಎಂದು ಹೇಳಲಾಗುತ್ತಿದೆ.

Related posts: