RNI NO. KARKAN/2006/27779|Wednesday, January 14, 2026
You are here: Home » breaking news » ಬೆಳಗಾವಿ:ರಾಜ್ಯೋತ್ಸವ ಮೆರವಣಿಗೆ ವೇಳೆ ಯವಕರ ಮಧ್ಯೆ ಹೊಡೆದಾಟ : ಒಬ್ಬನಿಗೆ ಗಂಭೀರ ಗಾಯ

ಬೆಳಗಾವಿ:ರಾಜ್ಯೋತ್ಸವ ಮೆರವಣಿಗೆ ವೇಳೆ ಯವಕರ ಮಧ್ಯೆ ಹೊಡೆದಾಟ : ಒಬ್ಬನಿಗೆ ಗಂಭೀರ ಗಾಯ 

ರಾಜ್ಯೋತ್ಸವ ಮೆರವಣಿಗೆ ವೇಳೆ ಯವಕರ ಮಧ್ಯೆ ಹೊಡೆದಾಟ : ಒಬ್ಬನಿಗೆ ಗಂಭೀರ ಗಾಯ

ಬೆಳಗಾವಿ ನ 1: ರಾಜ್ಯೋತ್ಸವ ಮೆರವಣಿಗೆ ವೇಳೆ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಯುವಕರ ಮಧ್ಯೆ ಹೊಡೆದಾಟವಾಗಿ ಯುವಕನೊಬ್ಬ ಗಂಭೀರ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆ ತುರ್ತು ನಿಗಾ ಘಟಕಕ್ಕೆ ಕಳಿಸಲಾಯಿತು.

ಗಾಯಗೊಂಡವನನ್ನು ಗೋಕಾಕ ತಾಲೂಕು ಅಂಕಲಗಿಯ ಲಕ್ಕಪ್ಪ ಪೂಜಾರಿ (30) ಎಂದು ಗುರುತಿಸಲಾಗಿದೆ. ಅನ್ಯಭಾಷಿಕ ಕೆಲವು ಪಡ್ಡೆ ಯುವಕರು ಏಕಾಏಕಿ ಕಲ್ಲು ತೂರಿ ದಾಳಿ ಮಾಡಿ ಹಲ್ಲೆ ನಡೆಸಿದರು ಎಂದು ಹೇಳಲಾಗುತ್ತಿದ್ದು ಇನ್ನೊಂದೆಡೆ ಮೆರವಣಿಗೆ ಹೊರಟವರೇ ಕ್ಷುಲಕ ಕಾರಣಕ್ಕೆ ಹೊಡೆದಾಡಿಕೊಂಡಿದ್ದಾರೆ ಎಂದು ಸಹ ಹೇಳಲಾಗುತ್ತಿದೆ.


ಗಂಭೀರ ಗಾಯಗೊಂಡು ಅಸ್ವಸ್ಥನಾದ ಯುವಕ ಜಿಲ್ಲಾಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ಬಂದೋಬಸ್ತನಲ್ಲಿದ್ದ ಪೊಲೀಸರು ಪರಿಶೀಲಿಸಿದರು.

Related posts: