RNI NO. KARKAN/2006/27779|Monday, February 16, 2026
You are here: Home » breaking news » ಗೋಕಾಕ:ನಾಳೆ ಡಾ.ಸಿ.ಕೆ.ನಾವಲಗಿ ಅವರ “ಎಸಳು ಯಾಲಕ್ಕಿ ಗೊನಿ” ಅಭಿನಂದನ ಗ್ರಂಥ ಬಿಡುಗಡೆ : ಶ್ರೀ ಮುರುಘರಾಜೇಂದ್ರ ಸ್ವಾಮೀಜಿ

ಗೋಕಾಕ:ನಾಳೆ ಡಾ.ಸಿ.ಕೆ.ನಾವಲಗಿ ಅವರ “ಎಸಳು ಯಾಲಕ್ಕಿ ಗೊನಿ” ಅಭಿನಂದನ ಗ್ರಂಥ ಬಿಡುಗಡೆ : ಶ್ರೀ ಮುರುಘರಾಜೇಂದ್ರ ಸ್ವಾಮೀಜಿ 

ನಾಳೆ ಡಾ.ಸಿ.ಕೆ.ನಾವಲಗಿ ಅವರ “ಎಸಳು ಯಾಲಕ್ಕಿ ಗೊನಿ” ಅಭಿನಂದನ ಗ್ರಂಥ ಬಿಡುಗಡೆ : ಶ್ರೀ ಮುರುಘರಾಜೇಂದ್ರ ಸ್ವಾಮೀಜಿ

ಗೋಕಾಕ ಮಾ 25 : ಇಲ್ಲಿನ ಡಾ. ಸಿ.ಕೆ.ನಾವಲಗಿ ಷಷ್ಟಿಪೂರ್ತಿ ಅಭಿನಂದನ ಸಮಿತಿ ಖ್ಯಾತ ಜಾನಪದ ವಿದ್ವಾಂಸ ಡಾ. ಸಿ.ಕೆ. ನಾವಲಗಿ ಅವರ ಷಷ್ಟಿಪೂರ್ತಿ ಅಭಿನಂದನ ಸಮಾರಂಭ ಹಾಗೂ “ಎಸಳು ಯಾಲಕ್ಕಿ ಗೊನಿ” ಅಭಿನಂದನ ಗ್ರಂಥ ಸಮರ್ಪಣೆ ನಾಳೆ ಭಾನುವಾರ ದಿ. 26ರಂದು ಮುಂಜಾನೆ  10.30ಕ್ಕೆ ಮಹಾಲಕ್ಷ್ಮೀ ಸಭಾ ಭವನದಲ್ಲಿ ಜರುಗಲಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಡಂಬಳ-ಗದಗ ತೋಂಟದಾರ್ಯ ಸಂಸ್ಥಾನಮಠದ ಜಗದ್ಗುರು ಡಾ. ತೊಂಟದ ಸಿದ್ದರಾಮ ಸ್ವಾಮೀಜಿ ವಹಿಸಲಿದ್ದು, ಸಂಮುಖ- ಅಧ್ಯಕ್ಷತೆಯನ್ನು ಶೂನ್ಯ ಸಂಪಾದನಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ವಹಿಸಲಿದ್ದಾರೆ.
ಉದ್ಘಾಟನೆಯನ್ನು ಕೆ.ಎಂ.ಎಫ್. ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ನೆರವೇರಿಸಿ  ‘ಎಸಳು ಯಾಲಕ್ಕಿ ಗೊನಿ’ ಬಿಡುಗಡೆಗೊಳಿಸಲಿದ್ದಾರೆ.                
ಅಭಿನಂದನ ಗ್ರಂಥದ ಪ್ರಧಾನ ಸಂಪಾದಕ ಡಾ. ಗುರುಲಿಂಗ ಕಾಪಸೆ ಮತ್ತು ಸಂಪಾದಕ ಡಾ. ವೀರಣ್ಣ ರಾಜೂರ ಪಾಲ್ಗೊಳ್ಳಲಿದ್ದಾರೆ. ಗ್ರಂಥ ಸಮರ್ಪಣೆಯನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷ ಜಾನಪದ ವಿದ್ವಾಂಸ ನಾಡೋಜ ಡಾ. ಗೊ.ರೂ.ಚನ್ನಬಸಪ್ಪ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಚಿಕ್ಕಮಕ್ಕಳ ತಜ್ಞ ವೈದ್ಯ ಡಾ. ಮಹಾಂತೇಶ ಕಡಾಡಿ ಆಗಮಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಡಾ. ಗುರುಲಿಂಗ ಕಾಪಸೆ, ಡಾ. ವೀರಣ್ಣ ರಾಜೂರ, ಪ್ರೊ. ಎಂ.ಆರ್.ಉಳ್ಳೇಗಡ್ಡಿ, ಡಾ. ಎಸ್.ಬಿ.ಮೂಲಿಮನಿ, ಪ್ರೊ. ಚಂದ್ರಶೇಖರ ಅಕ್ಕಿ, ಮೋಹನ ಗುಂಡ್ಲೂರ್, ಡಿ.ಬಿ.ಹಿರೇಮಠ ಮತ್ತು ಆರ್.ವೈ.ದುಗ್ಗಾಣಿ ಅವರಿಗೆ ಗೌರವ ಸಮರ್ಪಣೆ ನಡೆಯಲಿದೆ ಎಂದು ಗ್ರಂಥ ಸಮಿತಿಯ ಗೌರವಾಧ್ಯಕ್ಷರಾದ  ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts: