RNI NO. KARKAN/2006/27779|Friday, August 1, 2025
You are here: Home » breaking news » ಗೋಕಾಕ:ಶರಣ ಸಂಸ್ಕೃತಿ ಉತ್ಸವ ರಾಷ್ಟ್ರ, ರಾಜ್ಯದಲ್ಲಿ ವಿಶಿಷ್ಟಪೂರ್ವವಾಗಿ ಆಚರಣೆಯಾಗುತ್ತಿದೆ : ಅಶೋಕ ಪೂಜಾರಿ ಅಭಿಮತ್

ಗೋಕಾಕ:ಶರಣ ಸಂಸ್ಕೃತಿ ಉತ್ಸವ ರಾಷ್ಟ್ರ, ರಾಜ್ಯದಲ್ಲಿ ವಿಶಿಷ್ಟಪೂರ್ವವಾಗಿ ಆಚರಣೆಯಾಗುತ್ತಿದೆ : ಅಶೋಕ ಪೂಜಾರಿ ಅಭಿಮತ್ 

ಶರಣ ಸಂಸ್ಕೃತಿ ಉತ್ಸವ ರಾಷ್ಟ್ರ, ರಾಜ್ಯದಲ್ಲಿ ವಿಶಿಷ್ಟಪೂರ್ವವಾಗಿ ಆಚರಣೆಯಾಗುತ್ತಿದೆ : ಅಶೋಕ ಪೂಜಾರಿ ಅಭಿಮತ್

ಗೋಕಾಕ ಫೆ 1 : ರಾಷ್ಟ್ರ, ರಾಜ್ಯದಲ್ಲಿ ವಿಶಿಷ್ಟಪೂರ್ಣ ಮತ್ತು ವೈಶಿಷ್ಟ್ಯತೆಯಿಂದ ಕಳೆದ 2 ದಶಕಗಳಿಂದ ಶರಣ ಸಂಸ್ಕೃತಿ ಉತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗೀತ ಎಂದು ಕಾಂಗ್ರೆಸ್ ಧುರೀಣ ಅಶೋಕ ಪೂಜಾರಿ ಹೇಳಿದರು.

ಶನಿವಾರದಂದು ನಗರದ ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಲಿಂಗೈಕ್ಯ ಶ್ರೀ ಬಸವ ಮಹಾಸ್ವಾಮಿಗಳ ಪುಣ್ಯಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಂಡ 20ನೇ ಶರಣ ಸಂಸ್ಕೃತಿ ಉತ್ಸವದ ಷಟಸ್ಥಳ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು

ನಾವು ಯಾರನ್ನು ಮುಖಾಮುಖಿ ನೋಡಲಾರದ ಮಹಾನ ಸಾಧಕ ಮಹನೀಯರನ್ನು ಗೋಕಾಕಕ್ಕೆ ಕರೆಯಿಸಿ ಅವರನ್ನು ಗೌರವಿಸುವ ಕಾರ್ಯ ಮಹತ್ತರವಾಗಿದೆ. ಬದುಕು ಜೀವನ ಕಷ್ಷಕರವಾಗದೆ ನೆಮ್ಮದಿಯ ಜೀವನ ಕಾಣಬೇಕು ಎಂದು ವಚನ ಸಾಹಿತ್ಯ ಹೇಳಿದೆ. ಹಾಗಾಗಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗಬೇಕು‌ ಜಗತ್ತಿನ ಯಾವುದೇ ಧರ್ಮದ ಅಂತಿಮ ಘಟ್ಟ ಮುಕ್ತಿಯನ್ನು ಹೊಂದುವುದು ಎಂದು ಎಲ್ಲ ಧರ್ಮಗಳು ಸಾರಿ ಹೇಳಿವೆ. ಬಸವಣ್ಣನವರ ತತ್ವಗಳನ್ನು ಜಗತ್ತಿಗೆ ತಲುಪಿಸಲು ನಾವು ಹಿಂದೆ ಬಿದ್ದಿದ್ದೆವೆ. ಪ್ರಸ್ತುತ ವಿದ್ಯಮಾನಗಳಲ್ಲಿ ನಾವೆಲ್ಲರೂ ಸೇರಿ ಬಸವಣ್ಣನವರ ತತ್ವಗಳನ್ನು ನಾಡಿಗೆ ಪರಿಚಯಿಸುವ ಕಾರ್ಯಮಾಡಬೇಕಾಗಿದೆ ಎಂದು ಹೇಳಿದರು.

ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಕಿತ್ತೂರ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಉಪ ಕುಲಪತಿ ಸಿ.ಎಂ . ತ್ಯಾಗರಾಜ
ಶಿಕ್ಷಣವನ್ನು ಕೊಡುವ ಜೊತೆಗೆ ಉದ್ಯೋಗ ಒದಗಿಸುವ ಕಾರ್ಯವನ್ನು ಶ್ರೀಮಠ ಮಾಡುತ್ತಿದ್ದೆ. ವಿದ್ಯಾರ್ಥಿಗಳು ಉದ್ಯೋಗ ಪಡೆಯುವ ಮೊದಲು ಆರೋಗ್ಯವಂತರಾಬೇಕು ಅಂದಾಗ ಮಾತ್ರ ಕಾಯಕದಲ್ಲಿ ನಮ್ಮನ್ನು ನಾವು ತೊಡಗಿಕೊಳ್ಳಲಲು ಸಾಧ್ಯ. ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಸದುಪಯೋಗ ಪಡೆಸಿಕೊಳಬೇಕು. ಜೀವನ ಅನ್ನುವುದು ನಾವು ಇನ್ನೊಬ್ಬರ ಮುಂದೆ ಮಾಡುವ ನಾಟಕವಲ್ಲ ಅದನ್ನು ಗಂಭೀರವಾಗಿ ತಗೆದುಕೊಂಡು ಸಾಧನೆಯಡೆ ಮುನ್ನಡೆಯಬೇಕು. ದೇಶದಾದ್ಯಂತ ಇಂದು ಉದ್ಯೋಗಗಳು ದೊರೆಯುವುದು ಕಷ್ಷಕರವಾಗಿದ್ದು, ಶರಣ ಸಂಸ್ಕೃತಿ ಉತ್ಸವ ಆ ಕಷ್ಟವನ್ನು ದೂರು ಮಾಡುತ್ತಿದೆ. ವಿದ್ಯಾರ್ಥಿಗಳು ಸಿಕ್ಕ ಅವಕಾಶವನ್ನು ಸದುಪಯೋಗ ಪಡೆಸಿಕೊಂಡು ಒಳ್ಳೆಯ ಸಾಧಕರಾಗಬೇಕು.ಯಾರು ಒಮ್ಮೆ ಬೆಳೆದು ಸಾಧಕರಾಗಿಲ್ಲ. ಒಂದೊಂದು ಮೆಟ್ಟಿಲುಗಳನ್ನು ಹತ್ತಿ ಸಾಧಕರಾಗಿದ್ದಾರೆ. ಕಾಲ ಕೊಟ್ಟಂತ ಕರೆಗೆ ಸ್ವಂದಿಸಿದರೆ ಸಾಧಕರಾಗಲು ನಮ್ಮನ್ನು ಯಾರು ತಡೆಯಲು ಸಾಧ್ಯವಿಲ್ಲ. ವಿಶ್ವವಿದ್ಯಾಲಯಗಳು ಉದ್ಯೋಗ ಸೃಷ್ಟಿಸುವ ಕಾರಖಾನೆ ಅಲ್ಲ. ವಿದ್ಯಾರ್ಥಿ ಜೀವನದಲ್ಲಿ ಗುರುಗಳನ್ನು ನೀಡಿದಂತಹ ಗುರಿಗಳನ್ನು ಸಾಧಿಸಿದಾಗ ನಾವು ಉದ್ಯೋಗ ಪಡೆಯಲು ಸಾಧ್ಯ. ಆ ನಿಟ್ಟಿನಲ್ಲಿ ನಾವು ವಿದ್ಯಾಭ್ಯಾಸ ಮಾಡಬೇಕು. ಯಶಸ್ಸು ಕಂಡಕಂಡಲಿ ಬೆಳೆಯುವ ಸಾಧಾರಣ ಹೂವಲ್ಲ, ಪವಿತ್ರವಾದ ಮನಸ್ಸಿನಲ್ಲಿ ಬೆಳೆಯುವ ಪುಷ್ಪವಾಗಿದೆ ಅದನ್ನು ಅರಿತುಕೊಂಡು ಮುಂದೆ ಸಾಗಬೇಕು. ಉದ್ಯೋಗಮೇಳದ ಸದುಪಯೋಗ ಪಡೆಸಿಕೊಂಡು ಉದ್ಯೋಗವಂತರಾಗಬೇಕು ಎಂದು ಕರೆ ನೀಡಿದರು.
ಉದ್ಯೋಗ ಮೇಳದಲ್ಲಿ 37 ಬಹುರಾಷ್ಟ್ರೀಯ ಕಂಪನಿಗಳು ಭಾಗವಹಿಸಿದ್ದವು ಉದ್ಯೋಗ ಮೇಳದಲ್ಲಿ , ಸುಮಾರು 4 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿ, ಐದನೂರಕ್ಕೂ ಅಧಿಕ ವಿದ್ಯಾರ್ಥಿಗಳು ಉದ್ಯೋಗವಕಾಶವನ್ನು ಪಡೆದುಕೊಂಡರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಸುಣ್ಣದೋಳಿಯ ಶಿವಾನಂದ ಮಹಾಸ್ವಾಮಿಗಳು ಹಾಗೂ ಗೋಕಾಕನ ಶ್ರೀ ರಾಚೋಟೇಶ್ವರ ಮಹಾಸ್ವಾಮಿಗಳು ವಹಿಸಿದ್ದರು. ಷಟಸ್ಥಳ ಧ್ವಜಾರರೋಣವನ್ನು ಪಿಎಸ್ಐ ಲಕ್ಷ್ಮಣ ಅಗಸರ ನೆರೆವೇರಿಸಿದರು
ಇದಕ್ಕೂ ಮೊದಲು ಅಕ್ಷರ, ಅರಿವು, ಆರೋಗ್ಯ ಕಾರ್ಯಕ್ರಮದ ಜಾಥಾವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಜಾಗೃತಿ ಮೂಡಿಸಿತು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಪೌರಾಯುಕ್ತ ರಮೇಶ ಜಾಧವ್ , ಸಮಿತಿಯ ಗೌರವಾಧ್ಯಕ್ಷ ಶಶಿಧರ ದೇಮಶೆಟ್ಟಿ, ಅಧ್ಯಕ್ಷರಾದ ಬಸವರಾಜ ಕೊಟಗಿ, ಕಾರ್ಯದರ್ಶಿ ಸಂಜಯ ಶಿಂಧಿಹಟ್ಟಿ, ಬಸವರಾಜ ಮುರುಗೋಡ ಲಿಂಗಾಯತ ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಭಾರತಿ ಮರೆನ್ನವರ
ಉಪಸ್ಥಿತರಿದ್ದರು.

Related posts: