ಗೋಕಾಕ:ಗೋಕಾಕ ಜೈಲಿನಲ್ಲಿ ವಿಚಾರಣಾಧೀನ ಕೈದಿ ನೇಣಿಗೆ ಶರಣು

ಗೋಕಾಕ ಜೈಲಿನಲ್ಲಿ ವಿಚಾರಣಾಧೀನ ಕೈದಿ ನೇಣಿಗೆ ಶರಣು
ಗೋಕಾಕ ಡಿ 23 : ಗೋಕಾಕ ನಗರದ ಜೈಲಿನಲ್ಲಿ ವಿಚಾರಣಾಧೀನ ಕೈದಿ ನೇಣಿಗೆ ಶರಣಾದ ಘಟನೆ ಬುಧವಾರದಂದು ಸಾಯಂಕಾಲ ನಡೆದಿದ್ದು, ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಮೋದಿನ ಅಲಿ ಗೋಟೆ (24) ನೇಣಿಗೆ ಶರಣಾಗಿರುವ ಕೈದಿ ಕೋಲೆ ಪ್ರಕರಣದಲ್ಲಿ ಬಂಧಿತನಾಗಿದ್ದು, ಬುಧವಾರದಂದು ಸಾಯಂಕಾಲ ಜೈಲಿನ ಹೊರಭಾಗದಲ್ಲಿ ಬೆಡಸಿಟ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.ವಿಚಾರಣಾಧೀನ ಕೈದಿಯನ್ನು ಕಳೆದ 15 ದಿನಗಳ ಹಿಂದಷ್ಟೇ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಗೋಕಾಕ ಜೈಲಿಗೆ ಕರೆತರಲಾಗಿತ್ತು . ಈ ಕುರಿತು ಗೋಕಾಕ ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.