ಗೋಕಾಕ:ಮುರುಘರಾಜೇಂದ್ರ ಶ್ರೀಗಳ 50ನೇ ಜನ್ಮ ದಿನ : ಭಕ್ತಾಧಿಗಳಿಂದ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಣೆ
ಮುರುಘರಾಜೇಂದ್ರ ಶ್ರೀಗಳ 50ನೇ ಜನ್ಮ ದಿನ : ಭಕ್ತಾಧಿಗಳಿಂದ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಣೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 24 :
ನಗರದ ಶ್ರೀ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ 50ನೇ ಜನ್ಮ ದಿನದ ಪ್ರಯುಕ್ತ ಭಕ್ತಾಧಿಗಳು ಇಲ್ಲಿನ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಗಳನ್ನು ವಿತರಿಸಿ, ಬಸವೇಶ್ವರ ವೃತ್ತದಲ್ಲಿ ಶ್ರೀ ಬಸವೇಶ್ವರ ಮೂರ್ತಿಗೆ ಮಾರ್ಲಾಪಣೆ ಮಾಡಿದರು.
ಇದೇ ಸಂದರ್ಭದಲ್ಲಿ ಚೆನ್ನಬಸವೇಶ್ವರ ವಿದ್ಯಾಪೀಠದ ಶಾಲಾ ಮಕ್ಕಳಿಂದ ಹಾಗೂ ಬಿಸಿಇ ಕಾಲೇಜಿನ ವಿದ್ಯಾರ್ಥಿಗಳು ಬಸವೇಶ್ವರ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಸಿಹಿ ಹಂಚಿದರು.
ಈ ಸಂದರ್ಭದಲ್ಲಿ ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ, ಡಾ.ಶಾಂತಕುಮಾರ್, ಮುಖಂಡರುಗಳಾದ ಬಸನಗೌಡ ಪಾಟೀಲ, ಮಲ್ಲಿಕಾರ್ಜುನ ಈಟಿ, ಡಾ.ಸಿ.ಕೆ ನಾವಲಗಿ, ಸುಮಿತ್ರಾ ಗುರಾಣಿ, ಎಸ್.ಎಸ್.ಅಂಗಡಿ, ಪ್ರಶಾಂತ್ ಕುರಬೇಟ, ಬಸವರಾಜ ಖಾನಪ್ಪನವರ, ಎಸ್.ಕೆ ಮಠದ, ಭೀಮಶಿ ಭರಮನ್ನವರ, ಬಸವರಾಜ ಹತ್ತರಕಿ, ರವಿ ಉಪ್ಪಿನ, ಶಂಕರ ಗೋರೋಶಿ, ಮೈಲಾರಲಿಂಗ ಉಪ್ಪಿನ, ಅಡಿವೇಶ ಗವಿಮಠ, ಶಕುಂತಲಾ ಕಟ್ಟಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.