ಗೋಕಾಕ:ಅಗ್ನಿಪಥ’ ವಿರೋಧಿಸಿ ಗೋಕಾಕದಲ್ಲಿ ಪ್ರತಿಭಟನೆ
‘ಅಗ್ನಿಪಥ’ ವಿರೋಧಿಸಿ ಗೋಕಾಕದಲ್ಲಿ ಪ್ರತಿಭಟನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 18 :
ಸೇನಾ ಅಲ್ಪಾವಧಿ ನೇಮಕಾತಿ ಯೋಜನೆ ‘ಅಗ್ನಿಪಥ’ ಖಂಡಿಸಿ ಶನಿವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಯುಥ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಅಗ್ನಿಪಥ ಯೋಜನೆ ಇದು ನಮ್ಮ ದೇಶದ ರಕ್ಷಣಾ ಇಲಾಖೆಗೆ ಉಪಯುಕ್ತವಾದ ಯೋಜನೆ ಅಲ್ಲ. ಕಾರಣ ಇಷ್ಟೆ, ನೀವು ಕೆಲವು ಜನರಿಗೆ ಟ್ರೈನಿಂಗ್ ಕೊಟ್ಟು ನಾಲ್ಕು ವರ್ಷದಲ್ಲಿ ಅವರಿಗೆ ರಿಟೈರ್ಡ್ ಮಾಡಿದ್ರೆ ಯಾವ ಸೈನಿಕ ಕೂಡ ವೆಲ್ ಟ್ರೈನ್ಡ್ ಆಗಿ ಹೋರಬರೋದಿಲ್ಲ. ನಾಲ್ಕು ವರ್ಷದಲ್ಲಿ ಹೆಚ್ಚು ಕಡಿಮೆ ಅರ್ಧದಷ್ಟು ಕಾಲ ರಜೆಯಲ್ಲೆ ಹೋಗುತ್ತೆ. ಟ್ರೈನಿಂಗ್ 50% ಕೂಡ ಆಗೋದಿಲ್ಲ. ಹಾಗಾಗಿ ಇದು ವಿಫಲ ಯೋಜನೆಯಾಗಿದೆ. ಇದನ್ನು ಕೂಡಲೆ ಕೈ ಬಿಡಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.