RNI NO. KARKAN/2006/27779|Thursday, July 3, 2025
You are here: Home » breaking news » ಗೋಕಾಕ:ಕೌಜಲಗಿ ಅರ್ಬನ್ ಬ್ಯಾಂಕ್ ಚುನಾವಣೆ: ರಾಜೇಂದ್ರ ಸಣ್ಣಕ್ಕಿ ಗುಂಪಿಗೆ ಜಯ

ಗೋಕಾಕ:ಕೌಜಲಗಿ ಅರ್ಬನ್ ಬ್ಯಾಂಕ್ ಚುನಾವಣೆ: ರಾಜೇಂದ್ರ ಸಣ್ಣಕ್ಕಿ ಗುಂಪಿಗೆ ಜಯ 

ಕೌಜಲಗಿ ಅರ್ಬನ್ ಬ್ಯಾಂಕ್ ಚುನಾವಣೆ: ರಾಜೇಂದ್ರ ಸಣ್ಣಕ್ಕಿ ಗುಂಪಿಗೆ ಜಯ

 
ನಮ್ಮ ಬೆಳಗಾವಿ ಇ – ವಾರ್ತೆ, ಕೌಜಲಗಿ ಮಾ 28 :

 
ಪಟ್ಟಣದ ಪ್ರತಿಷ್ಠಿತ ಕೌಜಲಗಿ ಅರ್ಬನ್ ಕೋ-ಆಪ್ ಕ್ರೆಡಿಟ್ ಬ್ಯಾಂಕಿನ ಆಡಳಿತ ಮಂಡಳಿ ಆಯ್ಕೆಗೆ ಭಾನುವಾರದಂದು ಜರುಗಿದ ಚುನಾವಣೆಯಲ್ಲಿ ಡಾ. ರಾಜೇಂದ್ರ ಸಣ್ಣಕ್ಕಿ ಗುಂಪಿಗೆ ಭರ್ಜರಿ ಜಯ ಲಭಿಸಿದೆ.
ಪಟ್ಟಣದ ಬಸವೇಶ್ವರ ಪೇಟೆಯಲ್ಲಿರುವ ಅರ್ಬನ್ ಬ್ಯಾಂಕಿನ ನೂತನ ಕಟ್ಟಡದಲ್ಲಿ ಸನ್ 2022 -2027 ನೇ ಸಾಲಿನ ಸಾಮಾನ್ಯ ಆಡಳಿತ ಮಂಡಳಿಗೆ ಒಟ್ಟು 13 ಅಭ್ಯರ್ಥಿಗಳ ಆಯ್ಕೆ ಮಾಡಬೇಕಾಗಿತ್ತು. 7 ಸಾಮಾನ್ಯ, 1 ಹಿಂದುಳಿದ “ಅ” ವರ್ಗ, 1 ಹಿಂದುಳಿದ ವರ್ಗ”ಬ” ಇಬ್ಬರು ಮಹಿಳೆಯರು,1ಪರಿಶಿಷ್ಟ ಜಾತಿ,1 ಪರಿಶಿಷ್ಟ ಪಂಗಡ ವರ್ಗಗಳಿಗೆ ಸ್ಥಾನಗಳು ಮೀಸಲಾಗಿರಿಸಲಾಗಿದ್ದವು. ಸ್ಥಳೀಯ ಡಾ. ರಾಜೇಂದ್ರ ಸಣ್ಣಕ್ಕಿ ಮತ್ತು ಭೋವಿ-ಲೋಕಣ್ಣವರ-ಪರುಶೆಟ್ಟಿ 2 ಗುಂಪುಗಳಲ್ಲಿ ತೀವ್ರ ಪೈಪೆÇೀಟಿ ಇದ್ದದ್ದು ಏರ್ಪಟ್ಟಿತ್ತು. ಒಟ್ಟು 13 ಸ್ಥಾನಗಳಿಗೆ 28 ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದರು. ಉಭಯ ಗುಂಪುಗಳಲ್ಲಿ ಸಣ್ಣಪುಟ್ಟ ವಾಗ್ವಾದಗಳನ್ನು ಹೊರತುಪಡಿಸಿದರೆ ಒಟ್ಟಾಗಿ ಶಾಂತಿಯುತವಾಗಿ ಮತದಾನ ಜರುಗಿತು.
ಡಾ.ರಾಜೇಂದ್ರ ಸಣ್ಣಕ್ಕಿ ಗುಂಪಿನ ಒಟ್ಟು 8 ಅಭ್ಯರ್ಥಿಗಳು, ಡಾ.ರಾಜೇಂದ್ರ ಯಮನಪ್ಪ ಸಣ್ಣಕ್ಕಿ(ಸಾಮಾನ್ಯ), ಮಾಹಾಂತಪ್ಪ ನೀಲಕಂಠಪ್ಪ ಶಿವನಮಾರಿ (ಸಾಮಾನ್ಯ), ಈರಣ್ಣ ಶಂಕರೆಪ್ಪ ಹುದ್ದಾರ (ಸಾಮಾನ್ಯ), ನೀಲಪ್ಪ ಬಾಳಪ್ಪ ಕೇವಟಿ (ಸಾಮಾನ್ಯ), ಅಶೋಕ ಬಸವಂತಪ್ಪ ಹೊಸಮನಿ (ಸಾಮಾನ್ಯ), ಅಶೋಕ ಸಿದ್ದಪ್ಪ ಪಾಟೀಲ (ಹಿಂ.ಬ.ವ), ಶಿವಲಿಂಗಪ್ಪ ಮಹಾಂತಪ್ಪ ಮರೆನ್ನವರ(ಪ.ಪಂ) ಮತ್ತು ಶೋಭಾದೇವಿ ಗಂಗಾಧರ ಲೋಕಣ್ಣವರ(ಮಹಿಳಾ) ಕ್ಷೇತ್ರಗಳಲ್ಲಿ ಜಯಗಳಿಸಿದ್ದಾರೆ.
ಭೋವಿ-ಲೋಕಣ್ಣವರ-ಪರಶೆಟ್ಟಿ ಗುಂಪಿನ ಒಟ್ಟು 5 ಅಭ್ಯರ್ಥಿಗಳು ಶಿವಾನಂದ ಬಸಪ್ಪ ಲೋಕಣ್ಣವರ (ಸಾಮಾನ್ಯ), ರಮೇಶ ಸುರೇಶ ಪರಶೆಟ್ಟಿ( ಸಾಮಾನ್ಯ), ಸುಭಾಸ ಭೀಮಪ್ಪ ಕೌಜಲಗಿ(ಪ.ಜಾ), ಲಾಡಖಾನ ಕಾಶೀಮಸಾಬ ಮುಲ್ತಾನಿ (ಹಿಂ.ಅ.ವ) ಮತ್ತು ಉಮಾ ಬಸವರಾಜ ಲೋಕಣ್ಣವರ (ಮಹಿಳಾ) ಕ್ಷೇತ್ರಗಳಲ್ಲಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ.
ವಯೋವೃದ್ಧರು, ಅಂಗವಿಕಲರು, ಮಹಿಳೆಯರು, ಸ್ಥಳೀಯ ನಾಗರಿಕರು, ಕೌಜಲಗಿ ಸುತ್ತಲಿನ ರಡ್ಡೇರಟ್ಟಿ, ಕಳ್ಳಿಗುದ್ದಿ, ಮನ್ನಿಕೇರಿ, ಗೋಸಬಾಳ, ಬೆಟಗೇರಿ, ಕುಲಗೋಡ, ಹೊನಕುಪ್ಪಿ ಗ್ರಾಮಗಳ ಬ್ಯಾಂಕಿನ ಶೇರುದಾರ ಮತದಾರರು ಶಾಂತಿಯುತವಾಗಿ ಮತಚಲಾಯಿಸಿದರು. ಮೂಡಲಗಿ ಪೋಲೀಸ್ ವೃತ್ತ ನಿರೀಕ್ಷಕರು,ಕುಲಗೋಡ ಪಿಎಸ್‍ಐ ಮತ್ತು ಪೆÇಲೀಸ್ ಸಿಬ್ಬಂದಿ ಶಾಂತಿಯುತ ಚುನಾವಣೆ ಜರುಗಲು ಉತ್ತಮ ಬಂದೋಬಸ್ತಿಯನ್ನು ನೀಡಿದರು.

Related posts: