ಗೋಕಾಕ:ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಸಂಶೋಧಕರಾಗಿ ದೇಶದ ಕೀರ್ತಿ ಹೆಚ್ಚಿಸಿ : ಎಸ್.ಎಸ್.ಕುಂಬಾರ
ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಸಂಶೋಧಕರಾಗಿ ದೇಶದ ಕೀರ್ತಿ ಹೆಚ್ಚಿಸಿ : ಎಸ್.ಎಸ್.ಕುಂಬಾರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 28 :
ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಸಂಶೋಧಕರಾಗಿ ದೇಶದ ಕೀರ್ತಿ ಹೆಚ್ಚಿಸುವಂತೆ ಇಲ್ಲಿನ ಎಸ್.ಎಲ್.ಜೆ ಫ್ರೌಢಶಾಲೆಯ ಶಿಕ್ಷಕ ಎಸ್.ಎಸ್.ಕುಂಬಾರ ಹೇಳಿದರು.
ಸೋಮವಾರದಂದು ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಖ್ಯಾತ ವಿಜ್ಞಾನಿ ಡಾ.ಸಿ.ವ್ಹಿ ರಾಮನ್ ನವರ ಸಂಶೋಧಿಸಿದ ರಾಮನ್ ಏಪೇಕ್ಟಗೆ ನೋಬೆಲ್ ಪ್ರಶಸ್ತಿ ದೊರೆತು ದೇಶದ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸಿದ ಹಿನ್ನೆಲೆಯಲ್ಲಿ ಈ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ವಿದ್ಯಾರ್ಥಿಗಳು ವಿಜ್ಞಾನ ಕುರಿತು ಹೆಚ್ಚಿನ ಆಸಕ್ತಿ ವಹಿಸಿ ರಾಮನ್ ರಂತೆ ಸಂಶೋಧಕರಾಗಿರಿ. ವೈಜ್ಞಾನಿಕ ಯುಗದಲ್ಲೂ ದೇಶದಲ್ಲಿ ಮೂಢನಂಬಿಕೆಗಳು ಇನ್ನೂ ಆಚರಣೆಯಲ್ಲಿರುವದು ವಿಷಾದನೀಯ ಇದನ್ನು ಹೋಗಲಾಡಿಸಲು ವಿದ್ಯಾರ್ಥಿಗಳು ಮುಂದಾಗುವಂತೆ ಕರೆ ನೀಡಿದರು.
ವೇದಿಕೆಯಲ್ಲಿ ಪ್ರಾಚಾರ್ಯ ಐ.ಎಸ್.ಪವಾರ, ಉಪನ್ಯಾಸಕರಾದ ಎಸ್.ಬಿ.ಕೋಲಕಾರ, ಆರ್.ಎನ್ ಬೆಳವಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಸಚೀನ ಪಾಟೀಲ, ಲಕ್ಷ್ಮೀ ಅಮಣ್ಣನವರ ಇದ್ದರು.ವಿದ್ಯಾರ್ಥಿನೀ ಗೀತಾ ಸೋಮನಟ್ಟಿ, ಸ್ವಾಗತಿಸಿದರು, ತಸ್ಕೀನ ನಜಿಯಾ ಅಖಾನಿ ನಿರೂಪಿಸಿದರು, ಅರುಣಸಿಂಗ ರಜಪೂತ ವಂದಿಸಿದರು.