ಗೋಕಾಕ:ಅಂಗಡಿ ಮಹಾವಿದ್ಯಾಲದ 65 ವಿದ್ಯಾರ್ಥಿಗಳ ಪ್ರಥಮ ಶ್ರೇಣಿಯಲ್ಲಿ ಪಾಸಾಗಿ ಅತ್ಯುತ್ತಮ ಸಾಧನೆ
ಅಂಗಡಿ ಮಹಾವಿದ್ಯಾಲದ 65 ವಿದ್ಯಾರ್ಥಿಗಳ ಪ್ರಥಮ ಶ್ರೇಣಿಯಲ್ಲಿ ಪಾಸಾಗಿ ಅತ್ಯುತ್ತಮ ಸಾಧನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 15 :
ನಗರದ ಕೆಎಲ್‍ಇ ಸಂಸ್ಥೆಯ ಸಿ.ಎಸ್.ಅಂಗಡಿ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದ 23 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 104 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, ಕಲಾ ವಿಭಾಗದಲ್ಲಿ 20 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 54 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, ವಾಣಿಜ್ಯ ವಿಭಾಗದಲ್ಲಿ 16 ಅತ್ಯುನ್ನತ ಶ್ರೇಣಿ, 65 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ವಿಜ್ಞಾನ ವಿಭಾಗ: ವೈಷ್ಣವಿ ಶಿರಾಳಕರ 568(95) ಗಣಿತ ವಿಷಯದಲ್ಲಿ 100 ಅಂಕ ಪಡೆದು ಕಾಲೇಜಿಗೆ ಪ್ರಥಮ, ಬಿಬಿಆಯೇಶಾ. ಪಟೇಲ 560(93.30) ದ್ವಿತೀಯ, ವರ್ಷಾ ರೇಲೇಕರ 559(93.10) ತೃತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗ: ಭೀಮಾಂಬಿಕಾ ಕಾಮಕರ 556(93) ಪ್ರಥಮ, ದೀಪಾ ಮೇಟಿ 555(92.50) ದ್ವಿತೀಯ, ಶಿವಾನಂದ ಕಡ್ಡಿ 553(92) ತೃತೀಯ ಸ್ಥಾನ ಪಡೆದಿದ್ದಾರೆ.
ಕಲಾ ವಿಭಾಗ: ಆರತಿ ಐದುಡ್ಡಿ 565(94.16) ಹಾಗೂ ರಾಜ್ಯಶಾಸ್ತ್ರ ವಿಷಯದಲ್ಲಿ 100 ಅಂಕ ಪಡೆದು ಕಾಲೇಜಿಗೆ ಪ್ರಥಮ, ನಿಂಗರಾಜ ಬೆಡಸೂರ 561(93.50) ಕನ್ನಡ ವಿಷಯದಲ್ಲಿ 100 ಅಂಕ ಪಡೆದು ದ್ವಿತೀಯ, ಮುತ್ತೆಪ್ಪ ವಡೇರ 554(92.33) ತೃತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಯನ್ನು ಕೆಎಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ನಿರ್ದೇಶಕ ಜಯಾನಂದ ಮುನವಳ್ಳಿ, ಸ್ಥಳೀಯ ಆಡಳಿತ ಮಂಡಳಿಯ ಅಧ್ಯಕ್ಷ ಎಮ್.ಡಿ.ಚುನಮರಿ, ಆಡಳಿತಾಧಿಕಾರಿ ಜಿ.ಎಮ್.ಅಂದಾನಿ ಮತ್ತು ಪ್ರಾಚಾರ್ಯರು ಹಾಗೂ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.