ಘಟಪ್ರಭಾ:ಘಟಪ್ರಭಾದಲ್ಲಿ ಸೂರ್ಯ ನಮಸ್ಕಾರ ಕಾರ್ಯಕ್ರಮ
ಘಟಪ್ರಭಾದಲ್ಲಿ ಸೂರ್ಯ ನಮಸ್ಕಾರ ಕಾರ್ಯಕ್ರಮ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಜ 14 :
ಭಾರತ ದೇಶದ ಪ್ರಧಾನಿ ನರೆಂದ್ರ ಮೋದಿಜಿಯವರು ಅಜಾದಿಕಾ ಅಮೃತ ಮಹೋತ್ಸ ಆಚರಣೆಗೆ ಕರೆ ಕೊಟ್ಟ ಹಿನ್ನಲೆಯಲ್ಲಿ ಸ್ವತಂತ್ರ ಭಾರತದ 75 ನೇ ವರ್ಷಾಚರಣೆಯ ನಿಮಿತ್ತ ಜೆ.ಜಿ.ಆಸ್ಪತ್ರೆಯ ಅಂಗ ಸಂಸ್ಥೆಗಳಾದ ಆಯುರ್ವೇದ ಮೇಡಿಕಲ್ ಕಾಲೇಜ, ನರ್ಸಿಂಗ ಸ್ಕೂಲ, ಹಾಗೂ ನಿಸರ್ಗೋಫಚಾರಕೇಂದ್ರ ಇವುಗಳ ಸಂಯುಕ್ತ ಆಶ್ರಯದಲ್ಲಿ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ನಿಸರ್ಗೋಪಚಾರ ಕೇಂದ್ರದ ಆವರಣದಲ್ಲಿ ಶುಕ್ರವಾರ ಮಕರ ಸಂಕಮಣದಂದು ಆಯೊಜಿಸಲಾಗಿತ್ತು.
ಕಾರ್ಯಕ್ರದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಆಯರ್ವೇದ ಮೇಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ|| ಜೆ.ಕೆ ಶರ್ಮಾ ಮಾತನಾಡುತ್ತ ಯೋಗ ಹಾಗೂ ಸೂರ್ಯ ನಮಸ್ಕಾರದಿಂದ ದೇಹಕ್ಕಾಗುವ ಲಾಭಗಳನ್ನು ತಿಳಿಸುತ್ತ ಸೂರ್ಯ ಸಮಸ್ಕಾರವನ್ನು ಪ್ರತಿದಿನ ಮಾಡುವದರಿಂದ ಮನುಷ್ಯನು ಅರೋಗ್ಯವಂತನಾಗುವದಲ್ಲದೆ ಏಕಾಗ್ರತೆ ಹೊಂದುತ್ತಾನೆ. ಆದ್ದರಿಂದ ಪ್ರತಿ ದಿನ ಯೋಗ ಹಾಗೂ ಸುರ್ಯ ನಮಸ್ಕಾರ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಜೆ.ಜಿ.ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಬಿ.ಕೆ.ಎಚ್ ಪಾಟೀಲ,ನಸಿಂಗ ಕಾಲೇಜಿನ ಪ್ರಾಂಶುಪಾಲರಾದ ಡಾ||ಸಿದ್ದುಸಿಂಗ ಹಜೇರಿ, ಡೀನ ಡಾ|| ಅನೀಲ ಬಾಗಲಕೋಟಿ,ಸಿಬ್ಬಂದಿ ವರ್ಗದವರು ಇದ್ದರು. ಡಾ|| ರಾಜು ಜಾಮಗೌಡರ ಎಲ್ಲರನ್ನು ಸ್ವಾಗತಿಸಿ ವಂದಿಸಿದರು.