RNI NO. KARKAN/2006/27779|Monday, July 13, 2026
You are here: Home » breaking news » ಗೋಕಾಕ:ಜಯ ಕರ್ನಾಟಕ ಸಂಘಟನೆಯ ದುಪದಾಳ ಗ್ರಾಮ ಘಟಕದ ಅಧ್ಯಕ್ಷರಾಗಿ ಸಲೀಮ ಮುಲ್ಲಾ ಆಯ್ಕೆ

ಗೋಕಾಕ:ಜಯ ಕರ್ನಾಟಕ ಸಂಘಟನೆಯ ದುಪದಾಳ ಗ್ರಾಮ ಘಟಕದ ಅಧ್ಯಕ್ಷರಾಗಿ ಸಲೀಮ ಮುಲ್ಲಾ ಆಯ್ಕೆ 

ಜಯ ಕರ್ನಾಟಕ ಸಂಘಟನೆಯ ದುಪದಾಳ ಗ್ರಾಮ ಘಟಕದ ಅಧ್ಯಕ್ಷರಾಗಿ ಸಲೀಮ ಮುಲ್ಲಾ ಆಯ್ಕೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 17 :

 

ಜಯ ಕರ್ನಾಟಕ ಸಂಘಟನೆಯ ಗೋಕಾಕ ತಾಲೂಕಿನ ದುಪದಾಳ ಗ್ರಾಮ ಘಟಕದ ಅಧ್ಯಕ್ಷರಾಗಿ ಸಲೀಮ ಮುಲ್ಲಾ ಅವರನ್ನು ನೇಮಕ ಮಾಡಲಾಗಿದೆ ಎಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಜಾನ ತಳವಾರ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕನ್ನಡ ಭಾಷೆಯ ಬಗ್ಗೆ ಆಸಕ್ತಿ ಹೊಂದಿರುವ ದುಪದಾಳ ಗ್ರಾಮದ ಸಲೀಮ ಮುಲ್ಲಾ ಅವರನ್ನು ಜಯ ಕರ್ನಾಟಕ ಸಂಘಟನೆಯ ದುಪದಾಳ ಗ್ರಾಮ ಘಟಕದ ಜವಾಬ್ದಾರಿ ನೀಡಲಾಗಿದ್ದು, ಗ್ರಾಮದಲ್ಲಿ ಸಂಘಟನೆಯನ್ನು ಬಲ ಪಡಿಸಿ ಕನ್ನಡ ವಾತಾವರಣ ನಿರ್ಮಿಸಲು ಕನ್ನಡದ ಕಾರ್ಯಗಳನ್ನು ಮಾಡ ಕಾರ್ಯಕರ್ತರು ಸಹಕರಿಸಬೇಕೆಂದು ಕೋರಲಾಗಿದೆ.

Related posts: