ಬೆಳಗಾವಿ:ಯಾವ ವಿದ್ಯಾರ್ಥಿಗಳು ಬ್ಲೂವೇಲ್ ಚಿತ್ರ ಬಿಡಿಸಿಕೊಂಡಿಲ್ಲ : ಪ್ರಾಧ್ಯಾಪಕಿ ಗುಲ್ತಾಜ ಖಾನ ಸ್ವಷ್ಟನೆ
ಯಾವ ವಿದ್ಯಾರ್ಥಿಗಳು ಬ್ಲೂವೇಲ್ ಚಿತ್ರ ಬಿಡಿಸಿಕೊಂಡಿಲ್ಲ : ಪ್ರಾಧ್ಯಾಪಕಿ ಗುಲ್ತಾಜ ಖಾನ ಸ್ವಷ್ಟನೆ
ಬೆಳಗಾವಿ ಸೆ 20: ತಮ್ಮ ಸಹಪಾಠಿ ವಿಧ್ಯಾರ್ಥಿನೀಯರ ಮುಂದೆ ನಾವು ಬ್ಲೂವೇಲ್ ಗೇಮ್ ಆಡುತ್ತಿದೆವೆಂದು ತೋರಿಸಿಕೋಳ್ಳಲು ತಮ್ಮ ಕೈ ಮೇಲೆ ಸುಮಾರು 25 ವಿದ್ಯಾರ್ಥಿಗಳು ಬ್ಲೂವೇಲ್ ಚಿತ್ರ ಬಿಡಿಸಿಕೊಂಡಿದ್ದಾರೆಂದು ಎಂಬ ಸುದ್ದಿ ಸುಳ್ಳು ಎಂದು ಬೆಳಗಾವಿ ಕೇಂದ್ರಿಯ ವಿದ್ಯಾಲಯದ ಪ್ರಾಧ್ಯಾಪಕಿ ಗುಲ್ತಾಜ ಖಾನ ಮಾಧ್ಯಮದವರಿಗೆ ಸ್ವಷ್ಟ ಪಡಿಸಿದ್ದಾರೆ
ಬೆಳಗಾವಿಯ ಕೇಂದ್ರಿಯ ವಿದ್ಯಾಲಯದ ಸುಮಾರು 25 ವಿದ್ಯಾರ್ಥಿಗಳು ತಮ್ಮ ಕೈಯಲ್ಲಿ ತಿಮಿಂಗಿಲ ಚಿತ್ರ ಬಿಡಿಸಿಕೊಂಡು ಬ್ಲೂವೇಲ್ ಮಹಾಮಾರಿ ಆಟಕ್ಕೆ ಬೆನ್ನು ಬಿದ್ದಿದ್ದಾರೆ ಎಂಬುದನ್ನು ನಿರಾಕರಿಸಿದ ಅವರು ಅಪಘಾತದಲ್ಲಿ ಆದ ಗಾಯವನ್ನು ಬ್ಲೂವೇಲ್ ಗೇಮ್ ಎಂದು ಬಿಂಬಿಸಲಾಗಿದೆ ಎಂದು ಪ್ರತಿಕ್ರಿಯೆ ನೀಡಿದರು.
ಈ ವಿಷಯವಾಗಿ ವಿದ್ಯಾರ್ಥಿಗಳು ಮತ್ತು ಪಾಲಕರನ್ನು ಕರೆಸಿ ವಿಚಾರಿಸಿದಾಗ ಇಂತಹ ಘಟನೆ ಎಲ್ಲಿಯೂ ನಡೆದಿಲ್ಲ. ಅಲ್ಲದೇ, ನಮ್ಮಲ್ಲಿರುವ ಎಲ್ಲಾ ಮಕ್ಕಳನ್ನು ನಾವು ತಿಂಗಳಿಗೊಮ್ಮೆ ಕೌನ್ಸಿಲಿಂಗ್ ಮಾಡುತ್ತೇವೆ. ನಮ್ಮಲ್ಲಿ ಯಾವ ಮಕ್ಕಳು ಬ್ಲೂವೇಲ್ ಗೇಮ್ ಆಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ
