ಘಟಪ್ರಭಾ:ಉದ್ಯಮಿ ಜಯಶ್ರೀಲ ಶೆಟ್ಟಿ ಮನೆಯ ಮೇಲೆ ಐಟಿ ದಾಳಿ : ಮುಂದುವರೆದ ತಪಾಸಣೆ
ಉದ್ಯಮಿ ಜಯಶ್ರೀಲ ಶೆಟ್ಟಿ ಮನೆಯ ಮೇಲೆ ಐಟಿ ದಾಳಿ : ಮುಂದುವರೆದ ತಪಾಸಣೆ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಅ 9 :
ಪ್ರಥಮ ದರ್ಜೆ ಗುತ್ತಿಗೆದಾರ ಹಾಗೂ ಉದ್ಯಮಿಯಾಗಿರುವ ಇಲ್ಲಿನ ಮಹಾಂತೇಶ ನಗರದ ನಿವಾಸಿ ಜಯಶೀಲ ಶೆಟ್ಟಯವರ ಮನೆಯ ಮೇಲೆ ಐಟಿ ಅಧಿಕಾರಿಗಳು ಸತತ 2 ದಿನಗಳಿಂದ ದಾಳಿ ನಡೆಸಿ ತಪಾಸಣೆ ಮಾಡುತ್ತಿದ್ದಾರೆ.
ಎರಡು ವರ್ಷದಲ್ಲಿ ಇದು ಎರಡನೇ ಐಟಿ ದಾಳಿಯಾಗಿದ್ದು 2019ರಲ್ಲಿ ಇವರ ಮನೆ, ಆಫೀಸ್ ಹಾಗೂ ಬಾರ್‍ಗಳ ಮೇಲೆ ಐಟಿ ದಾಳಿ ನಡೆದಿತ್ತು. ಈಗ ಮತ್ತೆ ಗುರುವಾರ ಬೆಳಿಗ್ಗೆ 7 ಗಂಟೆಗೆ 4 ಇನೋವಾ ಕಾರ್‍ನಲ್ಲಿ ಕರ್ನಾಟಕ ಹಾಗೂ ಹೊರ ರಾಜ್ಯಗಳಿಂದ ಬಂದ 16 ಜನ ಐಟಿ ಅಧಿಕಾರಿಗಳು ಸತತವಾಗಿ ಜಯಶೀಲ ಶೆಟ್ಟಿಯವರ ಮನೆ ಹಾಗೂ ಆಫೀಸ್‍ನಲ್ಲಿ ತಪಾಸಣೆ ನಡೆಸುತ್ತಿದ್ದಾರೆ.
ಆಫೀಸ್‍ನಲ್ಲಿ 40ಲಕ್ಷ ಹಣ ಐಟಿ ಅಧಿಕಾರಿಗಳಿಗೆ ಸಿಕ್ಕಿದೆ ಎಂದು ತಿಳಿದು ಬಂದಿದ್ದು ಮನೆಯಲ್ಲಿರುವ ಆಭರಣಗಳ ಬಗ್ಗೆಯೂ ಮಾಹಿತಿ ಪಡೆದು ಎಲ್ಲಾ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ. ಐಟಿ ಅಧಿಕಾರಿಗಳು ಗುರುವಾರ ಬೆಳಿಗ್ಗೆಯಿಂದ ರಾತ್ರಿ 10 ಗಂಟೆ ತನಕ ತಪಾಸಣೆ ನಡೆಸಿ ಮತ್ತೆ ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ತಪಾಸಣೆಯನ್ನು ಮುಂದುವರಿಸಿದ್ದಾರೆ.
ಜಯಶೀಲಶೆಟ್ಟಿಯವರು ನೀರಾವರಿ ಇಲಾಖೆಯ ದೊಡ್ಡ ಗುತ್ತಿಗೆದಾರರಾಗಿದ್ದು ಅಲ್ಲದೆ ಹಲವಾರು ಬಾರ್ & ರೆಸ್ಟೋರೆಂಟ್ ಮಾಲಿಕರು ಮತ್ತು ಗ್ಯಾಸ್ ಏಜೆನ್ಸಿ ಸಹ ಇದ್ದು ಅವರು ಬೆಳಗಾವಿ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಆದಾಯ ತೆರಿಗೆ ಕಟ್ಟುವ ಓರ್ವ ಉದ್ಯಮಿ ಸಹ ಆಗಿದ್ದಾರೆ.