ಗೋಕಾಕ:ಮಹಾತ್ಮ ಗಾಂಧಿ ವಿಶ್ವಕ್ಕೆ ಪಿತಾಮಹ : ರಾಜೇಂದ್ರ ಗೌಡಪ್ಪಗೋಳ
ಮಹಾತ್ಮ ಗಾಂಧಿ ವಿಶ್ವಕ್ಕೆ ಪಿತಾಮಹ : ರಾಜೇಂದ್ರ ಗೌಡಪ್ಪಗೋಳ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 3 :
ಶಾಂತಿ, ಅಹಿಂಸೆ ಸತ್ಯ ಮಾರ್ಗದ ಮೂಲಕ ಜಗತ್ತನ್ನೆ ಗೆಲ್ಲಬಹುದು ಎಂದು ಸಾರಿದ ಮಹಾತ್ಮ ಗಾಂಧಿ ವಿಶ್ವಕ್ಕೆ ಪಿತಾಮಹ ಎಂದು ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಹೇಳಿದರು.
ಅವರು, ನಗರದ ಶಾಸಕರ ಗೃಹ ಕಚೇರಿಯಲ್ಲಿ ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲದಿಂದ ಹಮ್ಮಿಕೊಂಡ ಮಹಾತ್ಮ ಗಾಂಧಿ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ ಶಾಸ್ತ್ರಿಯವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಗಾಂಧಿಜಿ ಮತ್ತು ಶಾಸ್ತ್ರಿಜಿಯವರ ಭಾವಚಿತ್ರಕ್ಕೆ ಪೂಜೆ, ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಅಹಿಂಸಾ ಮಾರ್ಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ಯದಿಂದ ಗ್ರಾಮೀಣ ಅಭಿವೃದ್ಧಿ ಸಾಧ್ಯ ಎಂಬ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿಯವರು ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛ ಭಾರತ ಅಭಿಯಾನ ಹಾಗೂ ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡಿದ್ದಾರೆ.
ಮಹಾತ್ಮ ಗಾಂಧಿ ಸೇರಿದಂತೆ ಸ್ವತಂತ್ರ ಹೋರಾಟಗಾರರ ವಿಚಾರಧಾರೆಗಳನ್ನು ಮಕ್ಕಳಿಗೆ ತಿಳಿಸಬೇಕು. ಗಾಂಧಿಜಿಯವರ ವಿಚಾರಧಾರೆಗಳು ಇಂದಿನ ಯುವಜನತೆಗೆ ಪ್ರೇರಣೆಯಾಗಬೇಕು. ಲಾಲ್ ಬಹದ್ದೂರ ಶಾಸ್ತ್ರಿಯವರು ಟಪ್ಪಟ ಗಾಂಧಿವಾದಿಯಾಗಿ ಗಾಂಧಿ ತತ್ವದಂತೆ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಶಾಸಕರ ಸಹಾಯಕ ಸುರೇಶ ಸನದಿ, ಒಬಿಸಿ ಮೋರ್ಚಾ ಅಧ್ಯಕ್ಷ ಲಕ್ಷ್ಮಣ ಖಡಕಭಾಂವಿ, ಮುಖಂಡರಾದ ಶ್ಯಾಮಾನಂದ ಪೂಜೇರಿ, ಶಶಿಧರ ದೇಮಶೆಟ್ಟಿ, ಲಕ್ಕಪ್ಪ ತಹಶೀಲದಾರ, ಲಕ್ಕಪ್ಪ ಭಂಡಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಲ್ಲಿಕಜಾನ ತಳವಾರ, ಶಶಿಕಾಂತ ಕುರಬೇಟ, ಯುವ ಮೋರ್ಚಾದ ಮಂಜುನಾಥ ಪ್ರಭುನಟ್ಟಿ, ರಮೇಶ ಭಂಡಿ, ಗುರುರಾಜ ಶಾಸ್ತ್ರಿಗೊಲ್ಲರ, ಅರ್ಜುನ ಜರತಾರಕರ, ವಿರೇಂದ್ರ ಎಕ್ಕೇರಿಮಠ, ಇಮ್ರಾನ ಖಲೀಫ, ಕೇದಾರಿ ಸುಭಂಜಿ, ಬೀರಪ್ಪ ಖಿಲಾರಿ, ಬಾಳೇಶ ಗಿಡ್ಡನವರ ಸೇರಿದಂತೆ ಅನೇಕರು ಇದ್ದರು.
