ಸವದತ್ತಿ:ಕೊಟಿವೃಕ್ಷ ಕಾಮಗಾರಿಗಳನ್ನು ವೀಕ್ಷಿಸಿದ ಜಿ ಪಂ ಸಿ ಇ ಒ ದರ್ಶನ್ ಎಚ್ ವಿ
ಕೊಟಿವೃಕ್ಷ ಕಾಮಗಾರಿಗಳನ್ನು ವೀಕ್ಷಿಸಿದ ಜಿ ಪಂ ಸಿ ಇ ಒ ದರ್ಶನ್ ಎಚ್ ವಿ
ನಮ್ಮ ಬೆಳಗಾವಿ ಇ – ವಾರ್ತೆ, ಸವದತ್ತಿ : ಸೆ 16
ಸಮಾಜಿಕ ವಲಯ ಅರಣ್ಯ ಆಶ್ರಯದಲ್ಲಿ ಸವದತ್ತಿ ಹಾಗೂ ರಾಮದುರ್ಗ ತಾಲೂಕು ವ್ಯಾಪ್ತಿಯಲ್ಲಿ ಕೈಗೊಂಡ ಕೋಟಿವೃಕ್ಷ ಆಂದೋಲನ ಕೆಲಸಗಳನ್ನು ಗುರುವಾರದಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ದರ್ಶನ್ ಎಚ್ ವಿ ವಿಕ್ಷೀಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸವದತ್ತಿ ತಾಲೂಕು ವ್ಯಾಪ್ತಿಯ ಮುಗಳಿಹಾಲ್, ದಾಸನಾಲ್, ಸತ್ತಿಗೆರೀ, ಸೊಪ್ಪಡ್ಲ,ಹಾಗೂ ಯರಗಣವಿ ವ್ಯಾಪ್ತಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತ್ ಸಹಯೋಗದಲ್ಲಿ ನಿರ್ಮಿಸಲಾದ ನೆಡುತೋಪು ಗಳನ್ನು ಪರಿವೀಕ್ಷಿಸಿದರು..
ಈ ಸಂದರ್ಭದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಶಂಕರ ಕಲ್ಲೊಳಿಕರ್, ಸಹಾಯಕ ಅರಣ್ಯ ಸಂರಕ್ಷಾಧಿಕಾರಿ ಎಂ ಕೆ ಪಾತ್ರೋಟ, ಶ್ರೀ ಯಶವಂತ್ ಕುಮಾರ್ ಕಾರ್ಯನಿರ್ವಾಹಕ ಅಧಿಕಾರಿಗಳು ತಾ ಪಂ ಸವದತ್ತಿ, ಸಂಗನಗೌಡ ಹಂದ್ರಾಳ ಸಹಾಯಕ ನಿರ್ದೇಶಕರು,ಶಂಕರ್ ಅಂತರಗಟ್ಟಿ ವಲಯ ಅರಣ್ಯಾಧಿಕಾರಿಗಳು , ಸಾಮಾಜಿಕ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು