RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:7 ದಿನಗಳ ಕಾಲ.ಮತಕ್ಷೇತ್ರದ ಮತದಾರರ ಮುಖಂಡರ ಅಭಿಪ್ರಾಯ ಪಡೆದು ಮುಂದಿನ ನಡೆ ಪ್ರಕಟ : ಅಶೋಕ ಪೂಜಾರಿ

ಗೋಕಾಕ:7 ದಿನಗಳ ಕಾಲ.ಮತಕ್ಷೇತ್ರದ ಮತದಾರರ ಮುಖಂಡರ ಅಭಿಪ್ರಾಯ ಪಡೆದು ಮುಂದಿನ ನಡೆ ಪ್ರಕಟ : ಅಶೋಕ ಪೂಜಾರಿ 

7 ದಿನಗಳ ಕಾಲ.ಮತಕ್ಷೇತ್ರದ ಮತದಾರರ  ಮುಖಂಡರ ಅಭಿಪ್ರಾಯ  ಪಡೆದು  ಮುಂದಿನ ನಡೆ ಪ್ರಕಟ : ಅಶೋಕ ಪೂಜಾರಿ

ಗೋಕಾಕ ಏ 10 : ಮುಂಬರುವ 7 ದಿನಗಳ ಕಾಲ ಗೋಕಾಕ ಮತಕ್ಷೇತ್ರದ ಮತದಾರರನ್ನು ಮತ್ತು ಮುಖಂಡರನ್ನು ಭೇಟಿಯಾಗಿ ಅವರ ಅಭಿಪ್ರಾಯ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳೊಣ ಎಂದು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಅಶೋಕ್ ಪೂಜಾರಿ ಹೇಳಿದರು.
ಸೋಮವಾರದಂದು ನಗರಸಭೆ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಅವರ ಅಭಿಮಾನಿಗಳ, ಕಾರ್ಯಕರ್ತರ, ಹಿತೈಷಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದ ವರಿಷ್ಠರು ಸಾರ್ವತ್ರಿಕ  ಚುನಾವಣೆಯಲ್ಲಿ ಗೋಕಾಕ ಕ್ಷೇತ್ರದ ಅಭ್ಯರ್ಥಿ ನೀನೆ  ಎಂದು ಹೇಳಿದ್ಥರು. ಕಾಂಗ್ರೆಸ್ ಪಕ್ಷದ ನಾಯಕರ  ಮಾತಿನ ಪ್ರಕಾರ ನಾನು ಟಿಕೆಟ್ ಗಾಗಿ  ಯಾವುದೇ ಲಾಬಿ ನಡೆಸಲಿಲ್ಲ , ಇದರ ಬದಲು ನಾನು ಪಕ್ಷ ಸಂಘಟನೆ ಮಾಡಿದ್ದೇನೆ. ಅಧಿಕೃತವಾಗಿ ನಾನು ಕೂಡಾ  ಚುನಾವಣೆಗೆ ಅರ್ಜಿ ಸಲ್ಲಿಸಿದ್ದೆ. ಆದರೆ ದೆಹಲಿಯಲ್ಲಿ ನನಗೆ ಟಿಕೆಟ್ ತಪ್ಪಿ ಡಾ.ಮಹಾಂತೇಶ ಕಡಾಡಿ ಅವರಿಗೆ ವರಿಷ್ಠರು ಟಿಕೆಟ್ ಘೋಷಿಸಿದ್ದಾರೆ. ಅದಕ್ಕೆ ನನ್ನ ವಿರೋಧ ವಿಲ್ಲ, ಆದರೆ ನನ್ನ ನಂಬಿದ ಜನರು ಹಿತರಕ್ಷಣೆಗೆ ಮಾಡುವುದು ನನ್ನ ಆದ್ಯ ಕರ್ತವ್ಯವಾಗಿದ್ದು, ಅವರ ಹಿತರಕ್ಷಣೆಗೆ  ನಾನು ಬದ್ದವಾಗಿದ್ದು, ನಾನು ತಗೆದುಕೊಳ್ಳುವ ನಿರ್ಧಾರಕ್ಕೆ ಅವರು  ಬದ್ದ ಎಂದು ಹೇಳಿದ್ದಾರೆ.   ಸ್ವತಂತ್ರ ಗೋಕಾಕಕ್ಕಾಗಿ ನಮ್ಮ ನಡೆ ಇದ್ದು . ಅದು ಸಫಲವಾಗಿಲ್ಲ ಕಾಂಗ್ರೆಸ್ ಪಕ್ಷದ ಮುಖಂಡರು ಟಿಕೆಟ್ ಬಗ್ಗೆ ನನಗೆ ಭರವಸೆ ನೀಡಿದ್ದಾರೆ ಅವರ ಮಾತಿಗೆ ಬೆಲೆ ಕೊಟ್ಟು ಸ್ವಲ್ಪ ದಿನ ಕಾಯ್ದು ಮುಂದಿನ ನಿರ್ಧಾರ ತಗೆದುಕೊಳ್ಳಲಾಗುವುದು ಅಲ್ಲಿಯವರೆಗೆ ಬರುವ 7 ದಿನಗಳವರೆಗೆ ಕ್ಷೇತ್ರದ ಮತದಾರರು, ಮುಖಂಡರನ್ನು ಭೇಟಿಯಾಗಿ ಅವರ ಅಭಿಪ್ರಾಯವನ್ನು ಸಂಗ್ರಸುತ್ತೇನೆ ಅಲ್ಲಿಯವರೆಗೆ ನನ್ನ ಬೆಂಬಲಿಗರು, ಹಿತೈಷಿಗಳು ಸಮಾಧಾನದಿಂದ ಇರಬೇಕು  ಈ ಹೊರಾಟ ನನ್ನ ಕೊನೆಯ ಹೋರಾಟವಾಗಿದೆ ಎಂದು ಅಶೋಕ್ ಹೇಳಿದರು .
ಕಾಂಗ್ರೆಸ್ ಮುಖಂಡ ಸಿದ್ದಲಿಂಗ ದಳವಾಯಿ ಮಾತನಾಡಿ
ಅಶೋಕ್ ಪೂಜಾರಿ ಅವರನ್ನು ಕಾಂಗ್ರೆಸ್ ಪಕ್ಕಕ್ಕೆ ಸೇರಿಸುವವಾಗ ಟಿಕೆಟ್ ನೀಡುತ್ತೇವೆ ಎಂದು ಭರವಸೆಯನ್ನು ಸಿದ್ದರಾಮಯ್ಯ ಸೇರಿದಂತೆ ಅನೇಕ ನಾಯಕರು  ನೀಡಿದ್ದರು. ಗೋಕಾಕ ಟಿಕೆಟ್ ವಿಚಾರವಾಗಿ ದೆಹಲಿ ಮಟ್ಟದಲ್ಲಿ ಸ್ವಲ್ಪಗೊಂದಲ ವಿದೆ.  ಯಾರು ಬಂಡಯ ಏಳಬಾರದು. ಎರಡು ದಿನದಲ್ಲಿ ಅಶೋಕ್ ಪೂಜಾರಿ ಅವರಿಗೆ ಮರು ಟಿಕೆಟ್  ಸಿಗುವ ಸಾಧ್ಯತೆ ಇದೆ. ಕಾರ್ಯಕರ್ತರು  ಸಮಾಧಾನದಿಂದ ಇರಬೇಕು ಯಾರು ತಪ್ಪು ನಿರ್ಧಾರ ತಗೆದುಕೊಳ್ಳಬಾರದು ಎಂದು ಹೇಳಿದರು. 
ಈ ಸಂದರ್ಭದಲ್ಲಿ ಅಶೋಕ್ ಪೂಜಾರಿ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.

Related posts: