ಗೋಕಾಕ:ಸಂಗೊಳ್ಳಿ ರಾಯಣ್ಣನ ಜನ್ಮ ಮತ್ತು ಹುತಾತ್ಮ ದಿನದಂದು ರಾಜ್ಯದಲ್ಲೆಡೆ ಸರ್ಕಾರಿ ಗೌರವಸೂಚಿಸಲು ಆದೇಶ : ಮಾರುತಿ ಮರ್ಡಿ ಮೌರ್ಯ ಅಭಿನಂದನೆ
ಸಂಗೊಳ್ಳಿ ರಾಯಣ್ಣನ ಜನ್ಮ ಮತ್ತು ಹುತಾತ್ಮ ದಿನದಂದು ರಾಜ್ಯದಲ್ಲೆಡೆ ಸರ್ಕಾರಿ ಗೌರವಸೂಚಿಸಲು ಆದೇಶ : ಮಾರುತಿ ಮರ್ಡಿ ಮೌರ್ಯ ಅಭಿನಂದನೆ
ನಮ್ಮ ಬೆಳಗಾವಿ ಇ – ವಾರ್ತೆ, ಅ 14 :
ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜನ್ಮ ದಿನ ಆಗಸ್ಟ್ 15 ಮತ್ತು ಹುತಾತ್ಮರಾದ ದಿನ ಜನವರಿ 26ರಂದು ರಾಜ್ಯದಲ್ಲೆಡೆ ಸರ್ಕಾರಿ ಗೌರವಸೂಚಿಸಲು ಆದೇಶ ಮಾಡಿರುವ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿಯವರಿಗೆ ಹಾಲುಮತ ಮಹಾಸಭಾದ ರಾಜ್ಯ ಸಂಚಾಲಕ ಮಾರುತಿ ಮರ್ಡಿ ಮೌರ್ಯ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು ರಾಯಣ್ಣನವರ ಅರಾಧಕರು ಕಳೆದ 6 ವರ್ಷಗಳಿಂದ
ರಾಯಣ್ಣನವರ ಬಗ್ಗೆ ಹೆಚ್ಚು, ಹೆಚ್ಚು ಪ್ರಚಾರ ಮಾಡುತ್ತಾ, ಆಗಸ್ಟ್ 15 ಸ್ವಾತಂತ್ರೋತ್ಸವ – ರಾಯಣ್ಣೋತ್ಸವ, ಜನವರಿ 26, ಗಣರಾಜ್ಯೋತ್ಸವ – ರಾಯಣ್ಣನವರ ಬಲಿದಾನ ದಿವಸವನ್ನಾಗಿಸಲು, ರಾಯಣ್ಣನವರ ಹೆಸರು ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ನಾಮಕರಣ ಮಾಡಲು, ಆನಂದರಾವ್ ಸರ್ಕಲ್ ಮೇಲ್ಸುತೆವೆಗೆ ನಾಮಕರಣ ಮಾಡಲು ಹೀಗೆ ಹಲವಾರು ವಿಷಯಗಳ ಜೊತೆಗೆ, ಸರಕಾರಿ ಶಾಲೆಗಳು, ಕಛೇರಿಗಳಿಗೆ ರಾಯಣ್ಣನವರ ಭಾವಚಿತ್ರಗಳನ್ನು ನೀಡುತ್ತಾ, ರಾಜ್ಯದೆಲ್ಲೆಡೆ ರಾಯಣ್ಣನವರ ಮೂರ್ತಿಗಳನ್ನು ಸ್ಥಾಪನೆಯಾಗುತ್ತಿರುವುದರಿಂದ ರಾಯಣ್ಣನವರ ಶಕ್ತಿ
ರಾಜ್ಯವ್ಯಾಪಿ, ದೇಶವ್ಯಾಪಿ ಪಸರಿಸಿದೆ. ಇಂತಹ ಹೋರಾಟಗಾರರನ್ನು ಪಡೆದ ಭಾರತ ಧನ್ಯವಾಗಿದೆ ರಾಯಣ್ಣನವರಿಗೆ ಗೌರವ ಸಲ್ಲಿಸಲು ಆದೇಶ ಹೊರಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಹಾಲುಮತ ಮಹಾಸಭಾ ವತಿಯಿಂದ ಮಾರುತಿ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
