RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಮುಖರ್ಜಿಯವರ ಪುಣ್ಯಸ್ಮರಣೆ ಅಂಗವಾಗಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ‌ಸಸಿ ನೆಡುವ ಕಾರ್ಯಕ್ರಮ

ಗೋಕಾಕ:ಮುಖರ್ಜಿಯವರ ಪುಣ್ಯಸ್ಮರಣೆ ಅಂಗವಾಗಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ‌ಸಸಿ ನೆಡುವ ಕಾರ್ಯಕ್ರಮ 

ಮುಖರ್ಜಿಯವರ ಪುಣ್ಯಸ್ಮರಣೆ ಅಂಗವಾಗಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ‌ಸಸಿ ನೆಡುವ ಕಾರ್ಯಕ್ರಮ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 2 :

 
ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಪುಣ್ಯಸ್ಮರಣೆಯ ನಿಮಿತ್ತ ಗೋಕಾಕ ಹಾಗೂ ಅರಬಾಂವಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪದಾಧಿಕಾರಿಗಳು ಶುಕ್ರವಾರದಂದು ತಾಲೂಕಿನ ಅರಬಾಂವಿ ಗ್ರಾಮದ ಮುಸ್ಲಿಂ ಸಮುದಾಯದ ಸ್ಮಶಾನ ಆವರಣದಲ್ಲಿ 100 ಸಸಿಗಳನ್ನು ನೆಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಶಫೀ ಜಮಾದರ, ಮುಖರ್ಜಿಯವರು ತಮ್ಮ ಬದುಕಿನುದ್ದಕ್ಕೂ ಪ್ರಖರ ರಾಷ್ಟ್ರೀಯತೆಯನ್ನೇ ಪ್ರತಿಪಾದಿಸಿದ್ದರು. ದೇಶ ವಿಭಜನೆಯ ವೇಳೆ ಅದನ್ನ ಪ್ರಬಲವಾಗಿ ವಿರೋಧಿಸಿದ್ದರು. ಅಖಂಡ ಭಾರತದ ಪರಿಕಲ್ಪನೆಯ ಕನಸು ಉಳ್ಳವರಾಗಿದ್ದರು’ ಎಂದು ಹೇಳಿದರು

ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತ ಮೋರ್ಚಾದ ಇಕಬಾಲ ಸರಕಾವಾಸ , ಮಲ್ಲಿಕಜಾನ ತಲವಾರ, ಅಬ್ಬಾಸ ದೇಸಾಯಿ, ರಿಯಾಜ ಯಾದವಾಡ, ಅಬ್ಬು ಮುಜಾವರ ,ರಪೀಕ ಗುಳೆದಗುಡ್ಡ ಸೇರಿದಂತೆ ಇತರರು ಉಪಸ್ಥಿತರಿದ್ದರು

Related posts: