ಖಾನಾಪುರ: ಗೋವಾದಿಂದ ಕರ್ನಾಟಕಕ್ಕೆ ಟ್ರಕಿಂಗೆ ಬಂದಿದ್ದ ಬಾಲಕಿಯರನ್ನು ರಕ್ಷಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು
ಗೋವಾದಿಂದ ಕರ್ನಾಟಕಕ್ಕೆ ಟ್ರಕಿಂಗೆ ಬಂದಿದ್ದ ಬಾಲಕಿಯರನ್ನು ರಕ್ಷಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು
ಖಾನಾಪುರ ಅ 29: ಗೋವಾದಿಂದ ನಿನ್ನೆ ಕಣಕುಂಬಿ ವಲಯದ ಚೋರ್ಲಾ ಅಭಯಾರಣ್ಯದಲ್ಲಿ ಟ್ರಕಿಂಗಗೆ ಬಂದಿದ್ದ ಫಾಧರ ಸೇರಿದಂತೆ ಏಳು ಬಾಲಕಿಯರು ಕಾಡಿನಲ್ಲಿ ನಾಪತ್ತೆಯಾದ ಘಟನೆ ನಡೆದಿದ್ದು ನಾಪತ್ತೆಯಾದವರನ್ನು ಒಂದು ದಿನದ ಬಳಿಕ ರಕ್ಷಿಸಲಾಗಿದೆ
ಬಾಲಕಿಯರು ಸಂಪರ್ಕಕ್ಕೆ ಸಿಗದರಿಂದ ಆತಂಕಕ್ಕೊಳಗಾದ ಬಾಲಕಿಯರ ಪಾಲಕರು ಗೋವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಗೋವಾ ಪೊಲೀಸರು ಕರ್ನಾಟಕದ ಖಾನಾಪೂರ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ನಂತರ ಮಾಹಿತಿ ಪಡೆದ ಖಾನಾಪೂರ್ ಪೊಲೀಸರು ಮತ್ತು ಅರಣ್ಯಾಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಮಿಲಾನಿ ಮಾರಿಯಾನೋ ಪಿಂಟೊ(ಚಚ೯ ಫಾದರ್), ಬಾಲಕಿಯರಾದ ಬೆಂಬರಾ ಗೊನಸಾಲ್ವಿಸ್(12), ಸೆನ್ನಸಾ ಸಂಪಾಯಿ (11), ಪಾಲ್ ಫರ್ನಾಂಡಿಸ್ (12), ಸ್ವಿಟ್ನಾಲಾ ಗೋಮ (12), ಜಿಯಾರಾ ಫರ್ನಾಂಡಿಸ್ (12), ಸೆನಾ ಡಿಸೋಜ (12), ಜಿನಯಾ ಡಿಸೋಜ (12) ಎಂಬುವರನ್ನು ರಕ್ಷಿಸಿದ್ದಾರೆ
ನಿನ್ನೆ ಹಾದಿ ತಪ್ಪಿ ಕಾಡಿನಲ್ಲೆ ಕಾಲ ಕಳೆದ ಪರಿಣಾಮ ಬಾಲಕಿಯರು ತೀವ್ರ ಅಸ್ವಸ್ಥರಾಗಿದ್ದು, ಬಾಲಕಿಯರನ್ನು ಪಂಜಿಂ ಆಸ್ಪತ್ರೆಗೆ ದಾಖಲಿಸಲಾಗಿದೆ