RNI NO. KARKAN/2006/27779|Saturday, July 12, 2025
You are here: Home » breaking news » ಗೋಕಾಕ: ದಿನಸಿ,ಗುಟ್ಕಾ , ಸಿಗರೇಟು ವಸ್ತುಗಳ ಮಾರಾಟದ ಬೆಲೆ ಕೃತಕವಾಗಿ ಮೇಲೇರಿಕೆ : ಕಣ್ಮುಚ್ಚಿ ಕುಳಿತ ಟಾಸ್ಕ್ ಪೋರ್ಸ್ ತಂಡ

ಗೋಕಾಕ: ದಿನಸಿ,ಗುಟ್ಕಾ , ಸಿಗರೇಟು ವಸ್ತುಗಳ ಮಾರಾಟದ ಬೆಲೆ ಕೃತಕವಾಗಿ ಮೇಲೇರಿಕೆ : ಕಣ್ಮುಚ್ಚಿ ಕುಳಿತ ಟಾಸ್ಕ್ ಪೋರ್ಸ್ ತಂಡ 

ದಿನಸಿ,ಗುಟ್ಕಾ , ಸಿಗರೇಟು ವಸ್ತುಗಳ ಮಾರಾಟದ ಬೆಲೆ ಕೃತಕವಾಗಿ ಮೇಲೇರಿಕೆ : ಕಣ್ಮುಚ್ಚಿ ಕುಳಿತ ಟಾಸ್ಕ್ ಪೋರ್ಸ್ ತಂಡ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಏ 27 :

 

ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯ ಸರಕಾರ 14 ದಿನಗಳ ಕಾಲ ಜನತಾ ಕರ್ಪ್ಯೂ ವಿಧಿಸಿರುವ ಬೆನ್ನಲ್ಲೇ ದಿನಸಿ ಹಾಗೂ ಗುಟ್ಕಾ , ಸಿಗರೇಟು ವಸ್ತುಗಳ ಮಾರಾಟದ ಬೆಲೆ ಕೃತಕವಾಗಿ ಮೇಲೇರತೊಡಗಿದೆ. ಇದನ್ನು ನಿಯಂತ್ರಿಸಬೇಕಾದ ಸ್ಥಳೀಯ ಟಾಸ್ಕ್ ಪೋರ್ಸ್ ತಂಡ ಕಣ್ಮುಚ್ಚಿ ಕುಳಿತಿದೆ ಎಂಬ ವ್ಯಾಪಕ ಆಕ್ರೋಶ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಗ್ರಾಹಕರ ಹಿತ ಕಾಪಾಡಲು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಯಾವುದೇ ಟಾಸ್ಕ್ ಪೋರ್ಸ್ ಗಳು ಕೆಲಸ ಮಾಡುತ್ತಿಲ್ಲ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಅಂಗಡಿಕಾರರ ವಿರುದ್ಧ ಕ್ರಮ ಕೈಗೊಂಡಿರುವ ಒಂದೇ ಒಂದು ನಿದರ್ಶನ ತಾಲೂಕಿನಲ್ಲಿ ಕಂಡು ಬಂದಿಲ್ಲ ದುರಂತ ವೆಂದರೆ ಕರ್ಫ್ಯೂ ಹೆಸರಿನಲ್ಲಿ ಪೊಲೀಸರು ಹಾಗೂ ನಗರಸಭೆಯ ಅಧಿಕಾರಿಗಳು ಇಂತಹ ವ್ಯಾಪಾರಸ್ಥರ ವಿರುಧ್ಧ ಕ್ರಮ ಜರುಗಿಸುವ ಗೋಜಿಗೆ ಹೋಗದೆ ರಸ್ತೆಯಲ್ಲಿ ತಮ್ಮ ಅವಶ್ಯಕತೆ ಅನುಗುಣವಾಗಿ ತಿರುಗಾಡುವ ಸಾರ್ವಜನಿಕರಿಗೆ ಲಾಟಿ ರುಚಿ ತೋರಿಸುವಲ್ಲಿ ನಿರತರಾಗಿರುವುದು ನಮ್ಮ ದುರಂತವೆಂದು ಬಡವರು ಮಾತನಾಡಿಕೊಳ್ಳುತ್ತಿದ್ದಾರೆ.
ಟಾಸ್ಕ ಪೋರ್ಸ ತಂಡದ ನಿರ್ಲಕ್ಷ್ಯದ ಸದುಪಯೋಗ ಪಡೆದುಕೊಂಡಿರುವ ವ್ಯಾಪಾರಸ್ಥರು ದಿನಸಿ ಹಾಗೂ ಗುಟ್ಕಾ, ಪಾಸಶಾಫ್ ಮತ್ತಿತರ ವಾಣಿಜ್ಯ ಚುಟುವಟಿಕೆಯಲ್ಲಿ ತೋಡಗಿರುವವರು ತಮ್ಮಲ್ಲಿ ವಸ್ತುಗಳು ಸಂಗ್ರಹ ಇದ್ದರು ಸಹ ಅನಗತ್ಯ ಬೆಲೆ ಏರಿಸಿ ಸಾರ್ವಜನಿಕರನ್ನು ಹಾಡು ಹಗಲೆ ದೋಚುತ್ತಿದ್ದಾರೆ. ಗ್ರಾಹಕರು ಇದರ ಬಗ್ಗೆ ಪ್ರಶ್ನಿಸಿದರೆ ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎಂಬ ನೆಪ ಹೇಳಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆ.

ಇನ್ನೊಂದೆಡೆ ಗುಟ್ಕಾ, ಸಿಗರೇಟ್, ಬೀಡಾ ಮತ್ತಿತರ ವಸ್ತುಗಳ ದರ ದುಪ್ಪಟಾಗಿದೆ ಸರಕು ಸಾಗಾಣಿಕೆಯಲ್ಲಿ ವ್ಯತ್ಯಯವಾಗಿದೆ ಎಂದು ನೆಪ ಹೇಳಿ ಗುಟ್ಕಾ ,ಸಿಗರೇಟುಗಳು ಬೆಲೆ ಹೆಚ್ಚಿಸಲಾಗಿದೆ ಕೆಲವು ಬೇಕರಿ ಪದಾರ್ಥಗಳ ದರದಲ್ಲೂ ಹೆಚ್ಚಳವಾಗಿದ್ದು ಗ್ರಾಹಕರರು ಪರಿತಪ್ಪಿಸುತ್ತಿದ್ದಾರೆ.
ಕಳೆದ ವಾರಕ್ಕೆ ಹೋಲಿಸಿದರೆ ಈ ವಾರದ ಅವಧಿಯಲ್ಲಿ ಅಕ್ಕಿ ,ಬೆಳೆಕಾಳು , ಅಡುಗೆ ಎಣ್ಣೆ , ಸಕ್ಕರೆ, ಬೆಲ್ಲ, ಹಿಟ್ಟು ಮತ್ತಿತರ ದಿನಸಿ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಕೃತಕ ಅಭಾವ ಸೃಷ್ಟಿಸಿ ಹಾಗೂ ಸರಕು ಸಾಗಾಣಿಕೆ ನೆಪ ಹೇಳಿ ಮುಂದಿನ 14 ದಿನಗಳ ಕಾಲ ಜಾರಿಯಲ್ಲಿರುವ ಜನತಾ ಕರ್ಪ್ಯೂ ವೇಳೆ ಅಗತ್ಯ ವಸ್ತುಗಳು, ಗುಟ್ಕಾ ,ಸಿಗರೇಟು ಇತ್ಯಾದಿ ವಸ್ತುಗಳ ದರಗಳ ಮೇಲೆ ನಿಯಂತ್ರಣ ಹೇರುವ ಅಗತ್ಯವಿದೆ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಇದರ ಬಗ್ಗೆ ಗೋಕಾಕ ಡಿ.ವಾಯ್.ಎಸ್.ಪಿ ಜಾವೇದ ಇನಾಂದಾರ ಅವರ ಗಮನ ಹರಿಸಿದಾಗ ನಗರಸಭೆ ಸಿಬ್ಬಂದಿಗಳೊಂದಿಗೆ ಸೇರಿ ಅಂಗಡಿಕಾರರ ಮೇಲೆ ಕಾರ್ಯಾಚರಣೆ ನಡೆಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ. ಇವರ ಭರವಸೆ ಮುಂದಿನ 14 ದಿನಗಳಲ್ಲಿ ಜನರ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Related posts: