RNI NO. KARKAN/2006/27779|Thursday, October 16, 2025
You are here: Home » breaking news » ಗೋಕಾಕ:ಕೌಜಲಗಿಯಲ್ಲಿ 85 ಲಕ್ಷ ರೂ. ವೆಚ್ಚದ ಬಸ್ ನಿಲ್ದಾಣ ಉದ್ಘಾಟನೆ

ಗೋಕಾಕ:ಕೌಜಲಗಿಯಲ್ಲಿ 85 ಲಕ್ಷ ರೂ. ವೆಚ್ಚದ ಬಸ್ ನಿಲ್ದಾಣ ಉದ್ಘಾಟನೆ 

ಕೌಜಲಗಿಯಲ್ಲಿ 85 ಲಕ್ಷ ರೂ. ವೆಚ್ಚದ ಬಸ್ ನಿಲ್ದಾಣ ಉದ್ಘಾಟನೆ
87.40 ಲಕ್ಷ ರೂ. ವೆಚ್ಚದ ನೂತನ ಶಾಲಾ ಕೊಠಡಿಗಳನ್ನು ಉದ್ಘಾಟಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 19 :

 

ಪ್ರಯಾಣಿಕರ ಅನುಕೂಲಕ್ಕಾಗಿ ಸುಸಜ್ಜಿತ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದ್ದ ಸಾರಿಗೆಗಳನ್ನು ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಸ್ ಸೇವೆಯನ್ನು ಆರಂಭಿಸುವಂತೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಗುರುವಾರದಂದು ಕೌಜಲಗಿಯಲ್ಲಿ ಸಾರಿಗೆ ಇಲಾಖೆಯ ಹಿಂದುಳಿದ ಪ್ರದೇಶಾಭಿವೃದ್ಧಿ ಯೋಜನೆಯಡಿ 85 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಯಾಣಿಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಸಾರಿಗೆಗಳನ್ನು ಆರಂಭಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿಕೊಡುವಂತೆ ಅವರು ತಿಳಿಸಿದರು.
ಸುತ್ತಮುತ್ತಲಿನ ಗ್ರಾಮಗಳಿಗೆ ಕೌಜಲಗಿಯು ಕೇಂದ್ರಸ್ಥಾನವಾಗಿದ್ದು ಈ ಮಾರ್ಗವಾಗಿ ಓಡಿಸಲಾಗುತ್ತಿರುವ ಕೆಲವೊಂದು ಸಾರಿಗೆಗಳನ್ನು ಕೋವಿಡ್ ಹಿನ್ನೆಲೆಯಲ್ಲಿ ರದ್ದುಪಡಿಸಿದ್ದು, ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಲಾಭ-ನಷ್ಠವನ್ನು ಗಮನಿಸದೇ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಹಿಂದಿನ ಸಾರಿಗೆಗಳನ್ನು ಪುನರ್‍ಆರಂಭಿಸಬೇಕು ಎಂದು ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮ ಪಂಚಾಯತಿಯಿಂದ ಬಸ್ ನಿಲ್ದಾಣ ನಿರ್ಮಾಣಕ್ಕೆ 36 ಗುಂಟೆ ನಿವೇಶನವನ್ನು ನೀಡಲಾಗಿದೆ.
ನೂತನ ಶಾಲಾ ಕೊಠಡಿಗಳ ಉದ್ಘಾಟನೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಕೌಜಲಗಿಯಲ್ಲಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ 2 ಕೊಠಡಿ ಮತ್ತು ಸರ್ಕಾರಿ ಬಾಲಕೀಯರ ಪ್ರಾಥಮಿಕ ಶಾಲೆಯ 2 ಕೊಠಡಿಗಳನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸಿದರು. ಠೇವಣಿ ವಂತಿಗೆ ಅನುದಾನದಲ್ಲಿ ಸುಮಾರು 42.40 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. 45 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಮಾಧ್ಯಮಿಕ ಶಾಲೆಯ 3 ಕೊಠಡಿಗಳನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ, ಪ್ರಭಾಶುಗರ ನಿರ್ದೇಶಕ ಮಹಾದೇವಪ್ಪ ಭೋವಿ, ಜಿಪಂ ಮಾಜಿ ಸದಸ್ಯ ಪರಮೇಶ್ವರ ಹೊಸಮನಿ, ತಾಪಂ ಸದಸ್ಯರಾದ ಶಾಂತಪ್ಪ ಹಿರೇಮೇತ್ರಿ, ಲಕ್ಷ್ಮಣ ಮಸಗುಪ್ಪಿ, ಯುವ ಮುಖಂಡ ರವಿ ಪರುಶೆಟ್ಟಿ, ಅರ್ಬನ್ ಬ್ಯಾಂಕ್ ಮಾಜಿ ಅಧ್ಯಕ್ಷ ಶಿವಾನಂದ ಲೋಕನ್ನವರ, ಗ್ರಾಪಂ ಮಾಜಿ ಅಧ್ಯಕ್ಷರಾದ ಮಕ್ತುಮಸಾಬ ಖಾಜಿ, ಹೊಳೆಪ್ಪ ಲೋಕನ್ನವರ, ಅಶೋಕ ಉದ್ದಪ್ಪನವರ, ರಾಯಪ್ಪ ಬಳೋಲದಾರ, ಪಿಕೆಪಿಎಸ್ ಅಧ್ಯಕ್ಷ ಜಿ.ಎಸ್. ಲೋಕನ್ನವರ, ಪಿಕೆಪಿಎಸ್ ಮಾಜಿ ಅಧ್ಯಕ್ಷ ಮಹೇಶ ಪಟ್ಟಣಶೆಟ್ಟಿ, ಚಿಕ್ಕೋಡಿ ಡಿಟಿಓ ರಾಜಶೇಖರ ವಾಜಂತ್ರಿ, ಘಟಕ ವ್ಯವಸ್ಥಾಪಕ ಪ್ರಭುಲಿಂಗ ಮಡಿವಾಳರ, ಚಿಕ್ಕೋಡಿ ಎಇ ಶಿವಕುಮಾರ, ಕೆಜಿಎಸ್ ಮುಖ್ಯೋಪಾಧ್ಯಾಯ ವಿಠ್ಠಲ ಹಳ್ಳೂರ, ಕೆಯುಎಸ್ ಮುಖ್ಯೋಪಾಧ್ಯಾಯ ಎಸ್.ಎ. ಮುಲ್ಲಾ, ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಸುಭಾಸ ವಲ್ಯಾಪೂರ, ಕೆಬಿಎಸ್ ಮುಖ್ಯೋಪಾಧ್ಯಾಯ ಮಾಲತೇಶ ಸಣ್ಣಕ್ಕಿ, ಶಿಕ್ಷಕ ಎ.ಎಂ. ಮೋಡಿ, ವೆಂಕಟೇಶ ದಳವಾಯಿ, ಫಕೀರಪ್ಪ ಪೂಜನ್ನವರ, ಹಾಸೀಂಸಾಬ ನಗಾರ್ಚಿ, ಮಹಾದೇವ ಬುದ್ನಿ, ಬಸು ಹಿರೇಮಠ, ಶಂಕರ ಜೋತೆನ್ನವರ, ರಾಮಪ್ಪ ಈಟಿ, ಶಿವಾನಂದ ಭಜಂತ್ರಿ, ಮೈಬೂಬ ಮುಲ್ತಾನಿ, ಅಲ್ಲಾಭಕ್ಷ ಹುನ್ನೂರ, ಮಂಜುನಾಥ ಸಣ್ಣಕ್ಕಿ, ಬಸು ಜೋಗಿ, ಡಾ.ಡಿ.ಎಸ್. ನದಾಫ, ಗ್ರಾಪಂ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related posts: