ಗೋಕಾಕ:ವಿವೇಕಾನಂದರು ಹಿಂದೂ ಧರ್ಮದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದ್ದರು : ಅರುಣ ಪೂಜೇರಾ
ವಿವೇಕಾನಂದರು ಹಿಂದೂ ಧರ್ಮದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದ್ದರು : ಅರುಣ ಪೂಜೇರಾ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 12 :
ಸ್ವಾಮಿ ವಿವೇಕಾನಂದರು ಅಪ್ರತಿಮ ದೇಶಭಕ್ತರಾಗಿ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದ್ದರು ಎಂದು ಎಸ್.ಎಲ್.ಜೆ ಪದವಿಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಅರುಣ ಪೂಜೇರಾ ಹೇಳಿದರು
ಮಂಗಳವಾರದಂದು ನಗರದ ಲಕ್ಷ್ಮೀ ಎಜುಕೇಶನ್ ಟ್ರಸ್ಟಿನ ವಿವಿಧ ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸ್ವಾಮೀ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮತನಾಡುತ್ತಿದ್ದರು.
ಆತ್ಮ ಶಕ್ತಿಯ ಮೇಲೆ ವಿಶ್ವಾಸವಿಟ್ಟು ಏಕ್ರಾಗತೆ ಹಾಗೂ ಧೈರ್ಯದಿಂದ ಕಾರ್ಯಪ್ರವೃತ್ತರಾದರೆ ಚಾರಿತ್ರ್ಯವಂತ ವ್ಯಕ್ತಿಗಳಾಗಿ ದೇಶವನ್ನು ಬಲಿಷ್ಠಗೋಳಿಸಬೇಕೆಂಬ ಸಂದೇಶವನ್ನು ವಿವೇಕಾನಂದರು ನೀಡಿದರು. ಯುವಶಕ್ತಿಯ ಮಹತ್ವವನ್ನು ಅರಿತು ಅದನ್ನು ಜಾಗೃತಗೋಳಿಸಲು ಶ್ರಮಿಸಿದರು. ಇಂದಿನ ಯುವ ಪೀಳಿಗೆ ಅವರ ಆದರ್ಶಗಳನ್ನು ಆಚರಣೆಗೆ ತರುವುದರೊಂದಿಗೆ ದೇಶವನ್ನು ಸಮೃದಗೋಳಿಸಲು ಶ್ರಮಿಸುವಂತೆ ಕರೆ ನೀಡಿದರು
ಕಾರ್ಯಕ್ರಮವನ್ನು ಟ್ರಸ್ಟಿನ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಉದ್ಘಾಟಿಸಿದರು.
ವೇದಿಕೆಯ ಮೇಲೆ ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರಾದ ಐ.ಎಸ್.ಪವಾರ, ಎನ್.ಕೆ ಮಿರಾಸಿ, ಎಚ್.ಎಸ್.ಅಡಿಬಟ್ಟಿ, ಬಿ.ಕೆ.ಕುಲಕರ್ಣಿ , ಎಚ್.ವ್ಹಿ ಪಾಗನಿಸ, ಪಿ.ವ್ಹಿ ಚಚಡಿ ಇದ್ದರು.
ಉಪನ್ಯಾಸಕ ಎಸ್.ಎಚ್.ತಿಪ್ಪನ್ನವರ ಸ್ವಾಗತಿಸಿ ವಂದಿಸಿದರು