ಗೋಕಾಕ:ವಿದ್ಯಾರ್ಥಿ ವಸತಿ ನಿಲಯಗಳನ್ನು ಸ್ಯಾನಿಟೈಜರ್‍ನಿಂದ ಶುಚಿತ್ವಗೊಳಿಸಿ : ಮುಖ್ಯಮಂತ್ರಿ ಅವರಿಗೆ ಶಾಸಕ ಸತೀಶ ಪತ್ರ
ವಿದ್ಯಾರ್ಥಿ ವಸತಿ ನಿಲಯಗಳನ್ನು ಸ್ಯಾನಿಟೈಜರ್‍ನಿಂದ ಶುಚಿತ್ವಗೊಳಿಸಿ : ಮುಖ್ಯಮಂತ್ರಿ ಅವರಿಗೆ ಶಾಸಕ ಸತೀಶ ಪತ್ರ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 31 :
ವಿದ್ಯಾರ್ಥಿ ವಸತಿ ನಿಲಯಗಳನ್ನು ಸ್ಯಾನಿಟೈಜರ್‍ನಿಂದ ಶುಚಿತ್ವಗೊಳಿಸಿ ಪುನರ್ ಪ್ರಾರಂಭಿಸುವಂತೆ ಶಾಸಕ ಸತೀಶ ಜಾರಕಿಹೊಳಿ ಅವರು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರದ ಮೂಲಕ ವಿನಂತಿಸಿದ್ದಾರೆ.
ಕೋವಿಡ್-19ರ ಹೆಚ್ಚಳದಿಂದಾಗಿ ರಾಜ್ಯದಲ್ಲಿನ ಮೇಟ್ರಿಕ್ ನಂತರದ ಎಲ್ಲ ವಸತಿ ನಿಲಯಗಳನ್ನು ಕೋವಿಡದ ಚಿಕಿತ್ಸಾ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ. ಆದರೆ ವಿವಿಧ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳು ಸಮೀಪಿಸಿರುವದರಿಂದ ಮತ್ತು ವಿದ್ಯಾರ್ಥಿಗಳ ಆರೋಗ್ಯ ಮತ್ತು ವಿದ್ಯಾಭ್ಯಾಸದ ಹಿತದೃಷ್ಠಿಯಿಂದ ಎಲ್ಲ ವಸತಿ ನಿಲಯಗಳನ್ನು ಸ್ಯಾನಿಟೈಜರ್‍ನಿಂದ ಶುಚಿತ್ವಗೊಳಿಸಿ ಪುನರ್ ಪ್ರಾರಂಭಿಸುವಂತೆ ವಿದ್ಯಾರ್ಥಿ ಬಂಧುತ್ವ ಸಂಘಟನೆಯ ರಾಜ್ಯ ಸಂಚಾಲಕರು ಮನವಿ ಮಾಡಿ ಕೊಂಡಿದ್ದು ಸದರೀಯವರ ಮನವಿಯನ್ನು ಪರಿಗಣಿಸಿ ಎಲ್ಲ ಇಲಾಖೆಗಳ ವಸತಿ ನಿಲಯಗಳನ್ನು ಪುನರ್ ಪ್ರಾರಂಭಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲು ಪತ್ರದಲ್ಲಿ ವಿನಂತಿಸಿದ್ದಾರೆ.