RNI NO. KARKAN/2006/27779|Monday, August 4, 2025
You are here: Home » breaking news » ಬೆಳಗಾವಿ:ಡಿಜೆ ಹಳ್ಳಿ, ಕೆಜೆ ಹಳ್ಳಿಯ ಗಲಾಟೆಗೆ ನಮ್ಮ ಪಕ್ಷಕ್ಕೆ ಯಾವ ಸಂಬಂಧವಿಲ್ಲ : ಸಚಿವ ರಮೇಶ ಜಾರಕಿಹೊಳಿ

ಬೆಳಗಾವಿ:ಡಿಜೆ ಹಳ್ಳಿ, ಕೆಜೆ ಹಳ್ಳಿಯ ಗಲಾಟೆಗೆ ನಮ್ಮ ಪಕ್ಷಕ್ಕೆ ಯಾವ ಸಂಬಂಧವಿಲ್ಲ : ಸಚಿವ ರಮೇಶ ಜಾರಕಿಹೊಳಿ 

ಡಿಜೆ ಹಳ್ಳಿ, ಕೆಜೆ ಹಳ್ಳಿಯ ಗಲಾಟೆಗೆ ನಮ್ಮ ಪಕ್ಷಕ್ಕೆ ಯಾವ ಸಂಬಂಧವಿಲ್ಲ : ಸಚಿವ ರಮೇಶ ಜಾರಕಿಹೊಳಿ

ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ಅ 15 :

ಬೆಂಗಳೂರಿನ ಡಿಜೆ ಹಳ್ಳಿ, ಕೆಜೆ ಹಳ್ಳಿಯಲ್ಲಿ  ನಡೆದ ಗಲಾಟೆ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಪ್ರತಿಕ್ರಿಯೆ ನೀಡಿದ್ದು, ಬೆಂಗಳೂರಿನ ಗಲಾಟೆ ಅದು ಕಾಂಗ್ರೆಸ್‌ ಗಲಾಟೆ ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿದರು. 

ಶನಿವಾರ‌ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 74 ನೇ ಸ್ವಾತಂತ್ರೋತ್ಸವ ದಿನಾಚರಣೆ ಧ್ವಜಾರೋಹಣ ನೆರವೇರಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಗಲಾಟೆಗೆ ನಮ್ಮ ಪಕ್ಷಕ್ಕೆ ಯಾವ ಸಂಬಂಧವಿಲ್ಲ. ಕಾಂಗ್ರೆಸ್ ಪಕ್ಷದವರು ಸತ್ಯಶೋಧನಾ ಸಮಿತಿ ರಚಿಸಿದ್ದಾರೆ. ಅದರಿಂದ ಸಂತ್ಯಾಂಶ ಹೊರ ಬರಲಿದೆ. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರು ಓರ್ವ ಒಳ್ಳೆಯ ಶಾಸಕನಾಗಿದ್ದಾರೆ. ಅವರಿಗೆ ಅನ್ಯಾಯ ಆಗಬಾರದಾಗಿತ್ತು. 

ಈ ಹಿನ್ನಲೆಯಲ್ಲಿ ಸರ್ಕಾರ ಶಾಸಕ ಶ್ರೀನಿವಾಸ ಮೂರ್ತಿ ಅವರಿಗೆ ಎಲ್ಲ ರೀತಿಯ ಸಹಕಾರ ನೀಡಲಿದೆ. ಈ‌ ಕುರಿತು ಸಚಿವ ಸಂಪುಟದಲ್ಲಿ  ಕಠಿಣ ನಿರ್ಧಾರ ತಗೆದುಕೊಳ್ಳಲಾಗುವುದು ಎಂದು ಹೇಳಿದರು. ಅಲ್ಲದೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಪೊಲೀಸರು ಸಮರ್ಥರಿದ್ದಾರೆ. ಈ  ಪ್ರಕರಣವನ್ನು  ನಿಭಾಯಿಸುತ್ತಾರೆ. ಈ ವಿಷಯ ವಿಚಾರಣೆ ಹಂತದಲ್ಲಿದಲ್ಲಿ ಇರುವುದರಿಂದ ಈ ವಿಷಯವಾಗಿ ಮಾಡುವುದು ಸರಿಯಲ್ಲ ಎಂದು ರಮೇಶ ಜಾರಕಿಹೊಳಿ ಅವರು ಹೇಳಿದ್ದಾರೆ.

Related posts: