ಗೋಕಾಕ:ಕರೋನಾ ಹಿನ್ನೆಲೆ : ಪತ್ರಕರ್ತ ಮಂಜುನಾಥ ಹಾಡಿರೋ ಐಯ್ಯಯೋ ಅಣ್ಣಾ ಹಾಡು ಪೂಲ್ ವೈರಲ್
ಕರೋನಾ ಹಿನ್ನೆಲೆ : ಪತ್ರಕರ್ತ ಮಂಜುನಾಥ ಹಾಡಿರೋ ಐಯ್ಯಯೋ ಅಣ್ಣಾ ಹಾಡು ಪೂಲ್ ವೈರಲ್
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 12 :
ಹಾಡು ಕೇಳಲು ಈ ಲಿಂಕ್ ಕ್ಲಿಕ್ಕ ಮಾಡಿ
ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವಾಗ ಕೊರೊನಾ ವೈರಸ್ ಬಗ್ಗೆ ತಲೆಕೆಡಿಸಿಕೊಳ್ಳದ ಜನರು ಮನಸ್ಸಿಗೆ ಬಂದಂತೆ ವರ್ತಿಸಿ ಬೇಕ್ಕಾಬಿಟ್ಠಿ ರಸ್ತೆಯಲ್ಲಿ ಆಡ್ಡಾಡುತ್ತಿರುವ ಸಾರ್ವಜನಿಕರಿಗೆ ವರ್ತನೆಗೆ ಬೇಸತ್ತು “ಐಯ್ಯಯೋ ಅಣ್ಣಾ ಬಂತು ಕರೋನಾ ಬೀದಿಗೆ ನಿ ಬಂದ್ರೆ ತಿಥಿ ಊಟ ಫೀಕ್ಸಣ್ಣಾ” ಎಂಬ ಸಾಹಿತ್ಯ ಬರೆದು ಪಕ್ಕಾ ರಾಕಿಂಗ್ ಶೈಲಿಯಲ್ಲಿ ಹಾಡಿರುವ ಗೋಕಾಕ ತಾಲೂಕಿನ ಶಿಂಧಿಕುರಬೇಟ ಗ್ರಾಮದ ಪತ್ರಕರ್ತ ಹಾಗೂ ಹವ್ಯಾಸಿ ಹಾಡುಗಾರ ಮಂಜುನಾಥ್ ಹುಡೇದ ಹಾಡಿದ ಹಾಡು ಈಗ ಸಾಮಾಜಿಕ ಜಾಲತಾಣಗಳಲ್ಲಿ ಪೂಲ್ ವೈರಲ್ ಆಗುತ್ತಿದೆ.
ಹಾಡಿನ ಉದ್ದಕ್ಕೂ ಕೊರೋನಾ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ಮೂಡಿಸವ ಸಾಹಿತ್ಯ ಪೊನಿಸಿರುವ ಮಂಜುನಾಥ ಅವರ ಹಾಡಿಗೆ ತಕ್ಕಂತೆ ಗೋಕಾಕಿನ ನ್ಯೂ ಸ್ವರ್ಧಾ ಸ್ಪೂಡಿಯೋ ನ ಶಿವಾಜಿ ಪಾಟೀಲ ಅವರು ರಿಕಾಡಿಂಗ್ ಮಾಡಿದ್ದಾರೆ ಕರ್ತವ್ಯ ನಿರತ ಪೊಲೀಸರು ಕೊರೋನಾ ಮುಖವಾಡ ಧರಿಸಿ ಜನರಲ್ಲಿ ಜಾಗೃತಿ ಮೂಡಿಸುವ ದೃಶ್ಯಗಳು , ರಸ್ತೆಗಳಲ್ಲಿ ಕರೋನಾ ಕುರಿತು ಬರೆದಿರುವ ನಾಲ್ನುಡಿಗಳ ದೃಶ್ಯಗಳು, ಸ್ವಯಂ ಪ್ರೇರಿತರಾಗಿ ಕೆಲವು ಕಡೆ ಬೀದಿಗಳನ್ನು ಬಂದ ಮಾಡಿರುವ ದೃಶ್ಯ, ಸಾಮಾಜಿಕ ಅಂತರ ಕಾಯ್ದುಕೋಳ್ಳುವ ದೃಶ್ಯಗಳು ಬಹಳ ಅರ್ಥಪೂರ್ಣವಾಗಿ ಅಡಿಟ್ ಮಾಡಲಾಗಿದೆ .
ಹಾಡಿನ ಉದ್ದಕ್ಕೂ ಗಾಯಕ ಮಂಜುನಾಥ ಅವರು ಕರೋನಾ ಕುರಿತು ಹಾಡಿರುವ ಹಾಡಿನಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಮರೆತಿಲ್ಲ ಬದಲಾಗಿ ಎಳೆಎಳೆಯಾಗಿ ಬಿಡಿಸಿಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.
ಮನುಷ್ಯನ ಮಹದಾಸೆ, ಅತಿಯಾತು ದುರ್ಯಾಸೆ , ಕರೋನಾ ವೈರಸ್ಸೆ ಹಿಂಗೈತೆ ಈ ವರಸೆ . ಜಗತ್ತೆ ಕೆಟ್ಟುಬಂದು ಬಿಕ್ಕಿ ಬಿಕ್ಕಿ ಅಳತೈತೇ ,ಕಣ್ಣೀರೆ ಸಾವಿನಂಗೆ ಧಾರಾಕಾರ ಸುರಿದೈತೆ , ಮನೆಯಲ್ಲೇ ಹಮ್ಮಕೊಂಡಿರು ಏನು ಆಗಲ್ಲ ,ನೀನು ಹೊರಗಬಂದ್ರೆ ಸೂರ್ಯ ಹುಟ್ಟೋದ ನಿಲ್ಲಸೋಲ್ಲಾ ಎಂಬ ಅರ್ಥಗರ್ಭಿತ ಸಾಹಿತ್ಯವನ್ನು ರಚಿಸಿ ಹಾಡುವಲ್ಲಿ ಮಂಜುನಾಥ ಹುಡೇದ ಯಶಸ್ವಿಯಾಗಿದ್ದಾರೆ .
ಸದ್ಯ ದಿಗ್ಗವಿಜಯ ನ್ಯೂಸ್ ದಲ್ಲಿ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿರುವ ಮಂಜುನಾಥ ಹುಡೇದ ಅವರು ಗೋಕಾಕಿನ ಮಧುರ ಸಂಗೀತ ಗೆಳಯರ ಬಳಗ ಆರ್ಕ್ರೇಸ್ಟ್ರಾ ದಲ್ಲಿ ರಾಜ್ಯದ ಮೂಲೆ ಮೂಲೆಗಳಲ್ಲಿ ಹಾಡಿ ತಮ್ಮ ಸ್ವರ ಮಾಧುರ್ಯವನ್ನು ತೋರ್ಪಡಿಸಿದ್ದಾರೆ. ಸಂಗೀತ ತರಗತಿಗಳಿಗೆ ಹೊಗದ ಮಂಜುನಾಥ್ ಭಾವಗೀತೆ, ಭಕ್ತಿಗೀತೆಗಳು , ಚಲನಚಿತ್ರ ಗೀತೆಗಳನ್ನು ಎಲ್ಲರ ಮನ ಮುಟ್ಟುವಂತೆ ಹಾಡುತ್ತಾರೆ. ಕೊರೋನಾ ವೇರಸ್ ಬಗ್ಗೆ ಜಾಗೃತಿ ಮೂಡಿಸುವ ಹಾಡಂತು ಅತ್ಯಂತ ಸೋಗಸಾಗಿ , ಭಾವನಾತ್ಮಕವಾಗಿ ಹಾಡಿ ಎಲ್ಲರ ಗಮನ ಸೆಳೆದಿದ್ದಾರೆ