ಗೋಕಾಕ:ಗೋ. ಮಧುಸೂದನ ಗಡಿಪಾರು ಮಾಡುವಂತೆ ಆಗ್ರಹ:ಅಂಬೇಡ್ಕರ ಸೇನೆ ಕಾರ್ಯಕರ್ತರ ಪ್ರತಿಭಟನೆ
ಗೋ. ಮಧುಸೂದನ ಗಡಿಪಾರು ಮಾಡುವಂತೆ ಆಗ್ರಹ:ಅಂಬೇಡ್ಕರ ಸೇನೆ ಕಾರ್ಯಕರ್ತರ ಪ್ರತಿಭಟನೆ
ಗೋಕಾಕ ನ 22: ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ ಅವರ ಕುರಿತು ಅವಮಾನಕಾರಿ ಹೇಳಿಕೆಯನ್ನು ನೀಡಿರುವ ಗೋ. ಮಧುಸೂದನ ಅವರ ಮೇಲೆ ದೇಶ ದ್ರೋಹದ ಆರೋಪದಡಿ ಕೇಸು ದಾಖಲಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿ, ಬುಧವಾರದಂದು ಅಂಬೇಡ್ಕರ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ತಹಶೀಲದಾರರಿಗೆ ಮನವಿ ಅರ್ಪಿಸಿದರು.
ಕಳೆದ ಕೆಲ ದಿನಗಳ ಹಿಂದೆ ಖಾಸಗಿ ಸುದ್ದಿ ವಾಹಿನಿಯಲ್ಲಿ ಚರ್ಚೆಯಲ್ಲಿ ಭಾಗವಹಿಸಿದ್ದ ಬಿಜೆಪಿ ವಕ್ತಾರ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಗೋ ಮಧುಸೂದನ ಅವರು ಡಾ|| ಬಿ.ಆರ್.ಅಂಬೇಡ್ಕರರವರು ಬರೆದಿರುವ ಸಂವಿಧಾನವನ್ನು ನಾವು ಒಪ್ಪಲು ಸಾಧ್ಯವಿಲ್ಲ. ಅದು ಸುಳ್ಳಿನ ಸಂವಿಧಾನ, ಅದು ಸರಿಯಿಲ್ಲ ಎಂದು ಆವೇಶ ಮತ್ತು ಆಕ್ರೋಶಭರಿತವಾಗಿ ಹೇಳಿಕೆಯನ್ನು ನೀಡಿ, ರಾಷ್ಟ್ರೀಯ ಭಾವೈಕ್ಯತೆಗೆ ದಕ್ಕೆಯನ್ನುಂಟು ಮಾಡುವ ರೀತಿಯಲ್ಲಿ ವರ್ತಿಸಿರುತ್ತಾರೆ. ಅಲ್ಲದೇ ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ ಅವರಿಗೆ ಅವಮಾನಿಸಿರುತ್ತಾರೆ. ಸೌಹಾರ್ಧತೆಗೆ ಹೆಸರುವಾಸಿಯಾದ ನಾಡಿನಲ್ಲಿ ಅಶಾಂತಿ ಅರಾಜಕತೆ ಸೃಷ್ಟಿಸುತ್ತಿರು ಇವರ ಮೇಲೆ ದೇಶದ್ರೋಹದ ಆರೋಪದಡಿ ಕೇಸು ದಾಖಲಿಸಿ ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಅಂಬೇಡ್ಕರ ಸೇನೆಯ ಜಿಲ್ಲಾ ಉಸ್ತುವಾರಿ ಅಧ್ಯಕ್ಷ ಭೀಮಪ್ಪ ದೊಡಮನಿ ಸೇರಿದಂತೆ ಅನೇಕರು ಇದ್ದರು.