RNI NO. KARKAN/2006/27779|Sunday, July 13, 2025
You are here: Home » breaking news » ಘಟಪ್ರಭಾ:ಶಿಂಧಿಕುರಬೇಟ ಗ್ರಾಮದ ಯಾವುದೇ ವ್ಯಕ್ತಿಗೆ ಕೊರೋನಾ ಸೊಂಕು ಪತ್ತೆಯಾಗಿಲ್ಲ : ವೈದ್ಯಾಧಿಕಾರಿ ಪ್ರವೀಣ ಕರಗಾವಿ ಮಾಹಿತಿ

ಘಟಪ್ರಭಾ:ಶಿಂಧಿಕುರಬೇಟ ಗ್ರಾಮದ ಯಾವುದೇ ವ್ಯಕ್ತಿಗೆ ಕೊರೋನಾ ಸೊಂಕು ಪತ್ತೆಯಾಗಿಲ್ಲ : ವೈದ್ಯಾಧಿಕಾರಿ ಪ್ರವೀಣ ಕರಗಾವಿ ಮಾಹಿತಿ 

ಶಿಂಧಿಕುರಬೇಟ ಗ್ರಾಮದ ಯಾವುದೇ ವ್ಯಕ್ತಿಗೆ ಕೊರೋನಾ ಸೊಂಕು ಪತ್ತೆಯಾಗಿಲ್ಲ : ವೈದ್ಯಾಧಿಕಾರಿ ಪ್ರವೀಣ ಕರಗಾವಿ ಮಾಹಿತಿ

 

 
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಎ 3 :

 

 
ಶಿಂಧಿಕುರಬೇಟ ಗ್ರಾಮದ ಯಾವುದೇ ವ್ಯಕ್ತಿಗೆ ಕೊರೋನಾ ಸೊಂಕು ಪತ್ತೆಯಾಗಿಲ್ಲ ಎಂದು ಶಿಂದಿಕುರಬೇಟ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪ್ರವೀಣ ಕರಗಾವಿ ತಿಳಿಸಿದರು.
ಅವರು ಸಮೀಪದ ಶಿಂದಿಕುರಬೇಟ ಗ್ರಾಮದಲ್ಲಿ ಕೆಲವರಿಗೆ ಕೊರೋನಾ ಸೊಂಕು ಹರಡಿದೆ ಎಂದು ವದಂತಿಗಳಿಂದ ಜನರು ಆತಂಕಕ್ಕೆ ಒಳಗಾಗಿರುವ ಕುರಿತು ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಕರೆದ ಜಾಗೃತಿ ಸಭೆಯಲ್ಲಿ ಮಾತನಾಡುತ್ತ,
ದೆಹಲಿ ಜಮಾತಗೆ ಹೋಗಿದ್ದ ವ್ಯಕ್ತಿಯೊಂದಿಗೆ ಗ್ರಾಮದ 10 ಜನರು ಸಂಚರಿಸಿದ ಕಾರಣ ಅವರನ್ನು ಮುಂಜಾಗ್ರತಾ ಕ್ರಮವಾಗಿ ಮಲ್ಲಾಪೂರ ಪಿ.ಜಿ ಮೂರಾರ್ಜಿ ದೇಸಾಯಿ ವಸತಿ ಶಾಲೆಯ ಕೊರೋನಾ ನಿಗಾ ಘಟಕದಲ್ಲಿ ಇರಿಸಲಾಗಿದೆ ಅವರು ಎಲ್ಲರೂ ಆರೋಗ್ಯವಂತರಾಗಿದ್ದಾರೆ. ಗ್ರಾಮದ ಜನರು ಹೆದರುವುದು ಸಹಜ ಆದರೆ ನಿಗಾದಲ್ಲಿರುವ ಯಾರಿಗೂ ಕೊರೋನಾ ಲಕ್ಷಣಗಳು ಇಲ್ಲ. ನಿಯಮದಂತೆ 14 ದಿನಗಳ ಕೊರೆಂಟೈನ್ ಅವಧಿ ಮುಗಿದ ಕೂಡಲೇ ಅವರನ್ನು ಮನೆಗಳಿಗೆ ಕಳುಹಿಸಲಾಗುವುದು. ಇದರಿಂದ ಶಿಂದಿಕುರಬೇಟ ಹಾಗೂ ಘಟಪ್ರಭಾ ಜನರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾ.ಪಂ ಪಿ.ಡಿ.ಒ ಸಾಯಿಶ್ವರಿ ಮೆಣಶಿನಕಾಯಿ, ಗ್ರಾಮ ಜನರು ಗಾಳಿ ಸುದ್ಧಿಗಳಿಗೆ ಕಿವಿಗೂಡಬಾರದು. ಗ್ರಾಮದ ಯಾರೊಬ್ಬರಿಗೂ ಕೊರೋನಾ ಪತ್ತೆಯಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಕೆÀಲವರನ್ನು ಕೊರೆಂಟೈನ್‍ಲ್ಲಿ ಇಡಲಾಗಿದೆ. ಸರ್ಕಾರದ ಈ ಕ್ರಮ ಗ್ರಾಮದ ಒಳ್ಳೆಯದಕ್ಕಾಗಿದೆ. ಗ್ರಾಮಸ್ಥರು ಒಗ್ಗಟಿನಿಂದ ಈ ಸಮಸ್ಯೆಯನ್ನು ಎದುರಿಸಬೇಕು. ಯಾರೂ ತಪ್ಪು ಮಾಹಿತಿಗಳನ್ನು ಹರಡಿಸಬಾರದು. ಯಾರಿಗೂ ಏನೆ ಸಮಸ್ಯೆಗಳು ಇದ್ದಲ್ಲಿ ಸ್ವಂತ ನಿರ್ಧಾರಗಳನ್ನು ಕೈಗೊಳ್ಳದೇ ಗ್ರಾ.ಪಂ ಸಿಬ್ಬಂದಿ ಹಾಗೂ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಬೇಕೆಂದು ಜನರಲ್ಲಿ ಕೈ ಮುಗಿದು ಮನವಿ ಮಾಡಿಕೊಂಡರು.
ಈ ಸಂಧರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ವಿಠ್ಠಲ ಕಾಶಪ್ಪಗೊಳ, ಸದಸ್ಯರುಗಳಾದ, ಮಂಜು ಗುಡಿಕೇತ್ರ, ಎಂ.ಡಿ.ತಟಗಾರ, ರಫೀಕ್ ಮಕಾನದಾರ, ಮುಸ್ಲಿಂ ಸಮಾಜದ ಅಧ್ಯಕ್ಷ ಅಬ್ದುಲ್ ಸೌದಾಗರ, ಗ್ರಾಮಸ್ಥರಾದ ಕಾಡೇಶ್ ತೇಳಗೇರಿ, ರಾಜು ನಿಲಜಗಿ, ಮಮ್ಮು ಮಹಿಂಗೋಳ್, ಬಸು ಗೋಕಾಕ, ಮುಸಾ ಸರಕಾವಸ, ನವೀದ ಅತ್ತಾರ, ಕಯ್ಯುಮ ಅತ್ತಾರ, ಸಲೀಮ್ ಸೌದಾಗರ, ಮಹೇಬೂಬ್ ಜಂಡೇ, ಪೆÇಲೀಸ್ ಸಿಬ್ಬಂದಿಯಾದ ಮೇಕಳಿ ಹಾಗೂ ಅನೇಕ ಗ್ರಾಮಸ್ಥರು, ಗ್ರಾ.ಪಂ ಸಿಬ್ಬಂದಿ ವರ್ಗದವರು ಇದ್ದರು.

ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಶಿಂದಿಕುರಬೇಟ ಹಾಗೂ ಸುತ್ತ ಮುತ್ತ ಯಾವುದೇ ಗ್ರಾಮದಲ್ಲಿ ಕೊರೋನಾ ವೈರಸ್ ಪ್ರಕರಣ ಪತ್ತೆಯಾಗಿಲ್ಲ ಮುಂಜಾಗೃತಾ ಕ್ರಮವಾಗಿ 14 ಜನರನ್ನು ನಿಗಾ ಘಟಕದಲ್ಲಿ ಇಟ್ಟು ಅದಕ್ಕೆ ಸೂಕ್ತ ಬಂದೋಬಸ್ತ ಒದಗಿಸಲಾಗಿದೆ.
ಹಾಲಪ್ಪಾ ಬಾಲದಂಡಿ. ಪಿ.ಎಸ್.ಐ ಘಟಪ್ರಭಾ

ಈಗಾಗಲೇ ಧ್ವನಿ ವರ್ಧಕ ಮೂಲಕ ಗ್ರಾಮದಲ್ಲಿ ಯಾರಿಗೂ ಕೊರೋನಾ ಸೋಂಕು ಪತ್ತೆಯಾಗಿಲ್ಲ ಎಂದು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜನರು ಸುಳ್ಳು ಸುದ್ಧಿಗಳನ್ನು ಹಬ್ಬಿಸುವದನ್ನು ನಿಲ್ಲಿಸಬೇಕು.
ಸಾಯಿಶ್ವರಿ ಮೆಣಶಿನಕಾಯಿ ಪಿ.ಡಿ.ಒ

Related posts: